- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಡಿಸೆಂಬರ್ 26 ರಿಂದ ಆರಂಭವಾಗಲಿರುವ ಸೌತ್ ಆಫ್ರಿಕಾ vs ಭಾರತ ಟೆಸ್ಟ್ ಹಾಗೂ ಏಕದಿನ ಸರಣಿಗಳನ್ನು ಆಡಲು ಭಾರತವು ಈಗಾಗಲೇ ಸೌತ್ ಆಫ್ರಿಕಾಕ್ಕೆ ಹೋಗಿದೆ, ಸದ್ಯಕ್ಕೆ ಭಾರತ ತಂಡವು ಇರುವ ಫಾರ್ಮ್ ನೋಡಿದ್ರೆ ಭಾರತ ಯಾವುದೇ ತಂಡದ ವಿರುದ್ಧ ಅನಾಯಾಸವಾಗಿ ಗೆಲ್ಲುತ್ತೆ ಅಂತಾ ಹೇಳಬಹುದು. ಆದರೆ ಸೌತ್ ಆಫ್ರಿಕಾದಲ್ಲಿ ಸರಣಿ ಗೆಲ್ಲೋದು ಅಷ್ಟು ಸುಲಭದ ವಿಷಯವಲ್ಲ.
ಯಾಕೆ ಅಂತ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ⬇️
ಈ ಆಟಗಾರರು ಆಡಿದ್ರೆ ಭಾರತ ಸುಲಭವಾಗಿ ಸರಣಿಯನ್ನು ಗೆಲ್ಲಬಹುದು.
1) ವಿರಾಟ್ ಕೊಹ್ಲಿ
ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಬೇಡಿಕೆಯಲ್ಲಿರೋ ಆಟಗಾರ ಅಂದ್ರೇ ಅದು ನಮ್ಮ್ ವಿರಾಟ್ ಕೊಹ್ಲಿ, ಒಬ್ಬರೇ ನಿಂತು ಪಂದ್ಯವನ್ನು ಗೆಲ್ಲುವ ಸಾಮರ್ಥ್ಯ ಹೊಂದಿರುವ ಆಟಗಾರ.ಪ್ರಸ್ತುತ ಜಗತ್ತಿನ ಕ್ರಿಕೆಟ್ ನಲ್ಲಿ ಶ್ರೇಷ್ಠ ಆಟಗಾರ ಅಂದ್ರೇ ಅದು ವಿರಾಟ್ ಕೊಹ್ಲಿ. ಇವರು ಕಳೆದ ಎರಡು ವರ್ಷಗಳಿಂದ ಯಾವುದೇ ಶತಕವನ್ನು ಬಾರಿಸಿಲ್ಲ ಆದರೂ ಕೂಡ ಇವರು ಟೆಸ್ಟ್ ರಾಂಕಿಂಗ್ ನಲ್ಲಿ 7 ನೇ ಸ್ಥಾನ, ಏಕದಿನದಲ್ಲಿ 2ನೇ ಸ್ಥಾನ ಹಾಗೂ T20ಯಲ್ಲಿ 11 ನೇ ಸ್ಥಾನದಲ್ಲಿದ್ದಾರೆ, ಈ ರಾಂಕಿಂಗ್ ಗಳನ್ನು ನೋಡಿದ್ರೆ ಇವರು ಜಗತ್ತಿನ ಶ್ರೇಷ್ಠ ಆಟಗಾರ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
2) KL ರಾಹುಲ್
ಪ್ರಸ್ತುತ ಭಾರತ ತಂಡದಲ್ಲಿ ಆರಂಭಿಕನಾಗಿ ಆಡುತ್ತಿರುವ KL ರಾಹುಲ್ ಅವರು ಒಬ್ಬ ಅತ್ಯುತ್ತಮ ಆಟಗಾರ, ಯಾವುದೇ ಮೈದಾನದಲ್ಲಿ, ಯಾವುದೇ ಪರಿಸ್ಥಿಯಲ್ಲಿ, ಪರಿಸ್ಥಿತಿಗೆ ತಕ್ಕಂತೆ ಆಡಬಲ್ಲ ಆಟಗಾರ. ಕಳೆದ 2-3 ವರ್ಷಗಳಿಂದ ಇವರು ಇರೋ ಫಾರ್ಮ್ ನೋಡಿದ್ರೆ ಇವರು ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯ ತಂಡದ ಬೆನ್ನೆಲುಬು ಅಂತ ಹೇಳಬಹುದು. KL ರಾಹುಲ್ ಅವರು ತಮ್ಮ ಆಟ ಹಾಗೂ ಶಾಂತ ಸ್ವಭಾವಕ್ಕೆ ಹೆಸರಾದ ಆಟಗಾರ. ಒಂದು ರೀತಿಯಲ್ಲಿ ಇವರು ಭಾರತೀಯ ತಂಡದ ಮುಂದಿನ ನಾಯಕ ಅಂತಾ ಹೇಳಬಹುದು.
3) ಮಹಮದ್ ಸಿರಾಜ್
ಒಬ್ಬ ಒಳ್ಳೆಯ ಸ್ವಿoಗ್ ಬೌಲರ್ ಅದ ಮೊಹಮದ್ ಸಿರಾಜ್ ಅವರು 2019ರಲ್ಲಿ ಸಹಾಯಕ ಬೌಲರ್ ಆಗಿ ತಂಡಕ್ಕೆ ಸೇರಿದ ಸಿರಾಜ್ ಅವರು ಪ್ರಸ್ತುತ ಸ್ವಿoಗ್ ಬೌಲಿಂಗ್ ನ ಲೀಡ್ ಬೌಲರ್ ಅಂತ ಹೇಳಬಹುದು. ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಗಳಲ್ಲಿ ತಂಡದ ಬೌಲಿಂಗ್ ಯೂನಿಟ್ ಅನ್ನು ಲೀಡ್ ಮಾಡಿದ ಆಟಗಾರ. ಜಗತ್ತಿನ ಯಾವುದೇ ಮೈದಾನದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಆಟಗಾರ.
4) ರವಿಚಂದ್ರನ್ ಆಶ್ವಿನ್
ಭಾರತೀಯ ತಂಡದ ಅತ್ಯಂತ ಅನುಭವಿ ಹಾಗೂ ಚಾಣಕ್ಷ ಸ್ಪಿನ್ ಬೌಲರ್. ಜಗತ್ತಿನ ಯಾವುದೇ ಬ್ಯಾಟ್ಸಮನ್ ಗಳನ್ನು ತನ್ನ ಸ್ಪಿನ್ ಮೋಡಿಯ ಮೂಲಕ ವಿಕೆಟ್ ಮಾಡಬಲ್ಲ ಆಟಗಾರ ರವಿಚಂದ್ರನ್ ಆಶ್ವಿನ್. ಇವರು ಟೆಸ್ಟ್ ಕ್ರಿಕೆಟ್ ನಲ್ಲಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲಿಯೂ ಯಾವುದೇ ಬ್ಯಾಟ್ಸಮನ್ ಗೂ ಸರಿಸಮವಾಗಿ ನಿಲ್ಲಬಲ್ಲ ಆಟಗಾರ. ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಬೌಲರ್ ರಾಂಕಿಂಗ್ ಮತ್ತು ಟೆಸ್ಟ್ ಆಲ್- ರೌಂಡರ್ ರಾಂಕಿಂಗ್ ಎರಡರಲ್ಲೂ 2ನೇ ಸ್ಥಾನದಲ್ಲಿದ್ದಾರೆ.
ಈ ಮೇಲಿನ ನಾಲ್ಕು ಆಟಗಾರರು ಆಡಿದಲ್ಲಿ ಭಾರತ ತಂಡವು ಯಾವುದೇ ಅಡೆತಡೆಯಿಲ್ಲದೇ ಸುಲಭವಾಗಿ ಸೌತ್ ಆಫ್ರಿಕಾ ವಿರುದ್ಧ ಸರಣಿಯನ್ನು ಗೆಲ್ಲಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ