"ನೀವು ಆಟದಲ್ಲಿ ತಪ್ಪು ಮಾಡುವುದು ಸಹಜ, ಆದರೆ ಆ ತಪ್ಪುಗಳ ನಡುವಿನ ಅಂತರ 7-8 ತಿಂಗಳುಗಲಾದರೂ ಇರಬೇಕು ಇಲ್ಲವಾದರೆ. ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗುತ್ತದೆ. "
ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡದ ಕಾಯಂ ವಿಕೆಟ್ ಕೀಪರ್ ಆಗಿರುವ ರಿಷಬ್ ಪಂತ್ ಅವರು ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 17 ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ ಮೂರು ಬಾಲನ್ನು ಎದುರಿಸಿ ಜೀರೋ ರನ್ ಗಳಿಸಿ ಸೌತ್ ಆಫ್ರಿಕಾ ವೇಗಿ ಕಂಗಿಸೋ ರಬಾಡ ಅವರಿಗೆ ತಮ್ಮ ವಿಕೆಟನ್ನು ಒಪ್ಪಿಸಿದರು.
ಈ ಮಧ್ಯೆ ರಿಷಬ್ ಪಂತ್ ಅವರ ಫಾರ್ಮ್ ಬಗ್ಗೆ ಮಾತನಾಡಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, "ರಿಷಬ್ ಪಂತ್ ಒಬ್ಬ ಯುವ ಆಟಗಾರ, ಆಟದಲ್ಲಿ ಅವರು ಕಲಿಯುವುದು ತುಂಬಾ ಇದೆ. ಮತ್ತು ಭಾರತ ತಂಡ ಅವರಿಂದ ಒಳ್ಳೆಯ ಆಟವನ್ನು ನಿರೀಕ್ಷಿಸುತ್ತಿದೆ. ಯುವ ಆಟಗಾರರಾಗಿರುವ ರಿಷಬ್ ಪಂತ ಅವರು ಭವಿಷ್ಯದಲ್ಲಿ ಭಾರತ ತಂಡಕ್ಕೆ ಉತ್ತಮ ಆಟಗಾರನಾಗಿ ತಂಡಕ್ಕೆ ಕೊಡುಗೆಯನ್ನು ನೀಡುತ್ತಾರೆ ಎಂದು ನಮಗೆ ನಂಬಿಕೆ ಇದೆ." ಎಂದು ಹೇಳಿದರು
ಜೊತೆಗೆ ಕಳಪೆ ಫಾರ್ ಬಗ್ಗೆ ಮಾತನಾಡುತ್ತಾ ವಿರಾಟ್ ಕೊಹ್ಲಿ ಅವರು ತಂಡದ ಮಾಜಿ ನಾಯಕನಾದ ಮಹೇಂದ್ರ ಸಿಂಗ್ ಧೋನಿ ಅವರನ್ನು ನೆನೆದರು. "ನಾನು ಭಾರತ ತಂಡಕ್ಕೆ ಸೇರಿದಾಗ ನನಗೆ ನಮ್ಮ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಅವರು ಹೇಳಿದ ಮಾತು ನನಗೆ ನೆನಪಾಗುತ್ತಿದೆ. ಅವರು ಹೇಳುತ್ತಿದ್ದರು ಯಾವುದೇ ಯುವ ಆಟಗಾರ ನಾಗಲಿ ಆಟದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆದರೆ ಆ ಎರಡು ತಪ್ಪುಗಳ ಮದ್ಯದಲ್ಲಿ ಅಂತರವು ಏಳರಿಂದ ಎಂಟು ತಿಂಗಳು ಇರಬೇಕಾಗುತ್ತದೆ."
"ಒಂದು ವೇಳೆ ನೀವು ನಿಮ್ಮ ನಿಮ್ಮ ತಪ್ಪುಗಳ ನಡುವಿನ ಅಂತರವನ್ನು ಕಡಿಮೆ ಮಾಡಿದರೆ. ನೀವು ನಿಮ್ಮ ವೃತ್ತಿ ಜೀವನದಲ್ಲಿ ಹಲವಾರು ಟೀಕೆಗಳನ್ನು ಎದುರಿಸಬೇಕಾಗುತ್ತದೆ, ಜೊತೆಗೆ ತಂಡದಿಂದ ಹೊರಗುಳಿಯುವ ಪರಿಸ್ಥಿತಿಯೂ ಕೂಡ ಎದುರಾಗಬಹುದು. ಆದ್ದರಿಂದ ನೀವು ನಿಮ್ಮ ತಪ್ಪುಗಳನ್ನು ಎಷ್ಟು ತಿದ್ದಿಕೊಂಡು ಆ ತಪ್ಪುಗಳನ್ನು ಎಷ್ಟು ಸರಿ ಪಡಿಸಿಕೊಳ್ಳುತ್ತಿರೋ ಅಷ್ಟೇ ನೀವು ತಂಡಕ್ಕೆ ಕೊಡುಗೆಗಳನ್ನು ನೀಡಲು ಅವಕಾಶ ದೊರೆಯುತ್ತದೆ. ಜೊತೆಗೆ ತಂಡದಲ್ಲಿ ಆಡಲು ಸಹ ನಿಮಗೆ ಅವಕಾಶಗಳು ದೊರೆಯುತ್ತವೆ."
"ನೀವು ಅದೇ ತಪ್ಪುಗಳನ್ನು ಮುಂದುವರಿಸಿದರೆ ನೀವು ತಂಡದಿಂದ ಹೊರಗುಳಿಯುವುದು, ಅಷ್ಟೇ ಅಲ್ಲದೆ ನಿಮ್ಮ ವೃತ್ತಿ ಜೀವನವು ಮುಕ್ತಾಯವಾಗುತ್ತದೆ. ಆದ್ದರಿಂದ ಆದಷ್ಟು ನೀವು ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯ ರೀತಿ ಆಡುವುದನ್ನು ಕಲಿಯಬೇಕಾಗುತ್ತದೆ."
"ಹಾಗೆಯೇ ಯಾವುದೇ ಆಟಗಾರನಾಗಿರಲಿ ಆಟದಲ್ಲಿ ತಪ್ಪನ್ನು ಮಾಡಿ ಮಾಡುತ್ತಾನೆ, ಆದರೆ ಯಾರು ಅದನ್ನು ತಿದ್ದಿ ನಡೆಯುತ್ತಾರೆ ಅವರೇ ಆಟದಲ್ಲಿ ಯಶಸ್ವಿಯಾಗುತ್ತಾರೆ. ಹಾಗಾಗಿ ನೀವು ನಿಮ್ಮ ಆಟದಲ್ಲಿ ತಾಳ್ಮೆ ಮತ್ತು ನಿಮ್ಮ ತಪ್ಪುಗಳನ್ನು ತಿದ್ದಿ ನಡೆಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ನೀವು ತಂಡದಲ್ಲಿ ಉಳಿಯಲು ಸಾಧ್ಯ." ಎಂದು ವಿರಾಟ್ ಕೊಹ್ಲಿ ಅವರು ಹೇಳಿದರು.
"ಆವತ್ತು MS ಧೋನಿ ಅವರು ಹೇಳಿದ ಮಾತನ್ನು ನಾನು ಇವತ್ತಿಗೂ ಪಾಲಿಸುತ್ತಿದ್ದೇನೆ, ಮತ್ತು ಆ ಮಾತುಗಳು ನನ್ನ ಆಟದ ಭಾಗವಾಗಿವೆ. ಆದ್ದರಿಂದಲೇ ನಾನು ಆಟದಲ್ಲಿ ಯಶಸ್ವಿಯಾಗಿದ್ದೇನೆ." ಎಂದು ವಿರಾಟ್ ಕೊಹ್ಲಿ, ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಅವರನ್ನು ನೆನೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ