ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

ನಮ್ಮ ತಂಡದಲ್ಲಿಯೇ ನನಗೆ ಶತ್ರುಗಳಿದ್ದಾರೆ - KL ರಾಹುಲ್

ಪ್ರಸ್ತುತ ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡದ ಭಾಗವಾಗಿರುವ KL ರಾಹುಲ್ ಅವರು ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 123 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 23 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾದ ಗೆಲುವಿನ ರೂವಾರಿಯಾದರು. ಜೊತೆಗೆ ಈ ಟೆಸ್ಟ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜಣರಾದರು.

ಜನೆವರಿ 19ರಿಂದ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ತಂಡವನ್ನು ಘೋಷಿಸಿದ್ದು, ಈ ತಂಡಕ್ಕೆ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ KL ರಾಹುಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಈ ತಂಡದಲ್ಲಿ ಹಲವು ಹಿರಿಯ ಆಟಗಾರರಿದ್ದರು KL ರಾಹುಲ್ ನಾಯಕತ್ವ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಟೆಸ್ಟ್ ಪಂದ್ಯಗಳಲ್ಲಿ KL ರಾಹುಲ್ ಅವರ ಯಶಸ್ಸಿನ ಬಗ್ಗೆ ವಾರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ KL ರಾಹುಲ್, "ಟೆಸ್ಟ್ ಕ್ರಿಕೆಟ್ ನಲ್ಲಿ ಆಡಲು ತಾಳ್ಮೆ ಮತ್ತು ದೃಢತೆ ಮುಖ್ಯವಾಗಿರುತ್ತದೆ, ಇಲ್ಲಿ ಬಾಲ್ ಕೇವಲ ಆಡುವುದಕ್ಕಿಂತ, ಸ್ಟಂಪ್ ನಿಂದ ಹೊರಬರುವ ಬಾಲ್ ಗಳನ್ನು ಬಿಡುವುದು ಮುಖ್ಯವಾಗಿದೆ. ಅಲ್ಲದೆ ನಾವು ರನ್ ಗಳಿಸುವುದಕ್ಕಿಂತ ಮೈದಾನದಲ್ಲಿ ಜಾಸ್ತಿ ಹೊತ್ತು ತಾಳ್ಮೆಯಿಂದ ನಿಲ್ಲುವುದನ್ನು ಕಲಿಯಬೇಕು. ಜೊತೆಗೆ ಬಾಲ್ ಗಳನ್ನು ಡಾಟ್ ಮಾಡುವುದನ್ನು ಎಂಜಾಯ್ ಮಾಡುಬೇಕು." ಎಂದು ಹೇಳಿದರು.

KL ರಾಹುಲ್ ಅವರು ತಮ್ಮ ಪ್ರಾಕ್ಟೀಸ್ ಸೆಶನ್ ಬಗ್ಗೆ ಹೇಳುತ್ತಾ " ನಾವು ತಂಡದಲ್ಲಿ ಮಾಡುವ ಪ್ರಾಕ್ಟೀಸ್ ಸೆಶನ್ ನಮಗೆ ತಂಡದಲ್ಲಿ ಉತ್ತಮವಾಗಿ ಸ್ಕೋರ್ ಗಳಿಸಲು ಸಹಾಯಕವಾಗಿದೆ. ಏಕೆಂದರೆ ನಮ್ಮ ತಂಡದಲ್ಲಿರುವ ವೇಗದ ಬೌಲರ್ ಗಳು ಪ್ರಾಕ್ಟೀಸ್ ನಲ್ಲಿಯೂ ಸಹ ಯಾವುದೇ ಮುಲಾಜಿಲ್ಲದೆ ಎದುರಾಳಿ ತಂಡಗಳಿಗೆ ಬೌಲ್ ಮಾಡುವ ರೀತಿಯಲ್ಲಿಯೇ ಬೌಲಿಂಗ್ ಮಾಡುತ್ತಾರೆ. "

" ನನಗೆ ಇತರ ತಂಡಗಳ ವಿರುದ್ಧ ಆಡುವುದಕ್ಕಿಂತ ಪ್ರಾಕ್ಟೀಸ್ ಸೆಶನ್ ನಲ್ಲಿ ನಮ್ಮ ತಂಡದ ಬೌಲರ್ ಗಳ ವಿರುದ್ಧ ಆಡುವುದೇ ಕಠಿಣವೆನಿಸುತ್ತದೆ. ನಮ್ಮ ತಂಡದ ಬೌಲರ್ ಗಳು ಪ್ರಾಕ್ಟೀಸ್ ಸೆಶನ್ ನಲ್ಲಿ ಶತ್ರುಗಳಿಗೆ ಬಾಲ್ ಎಸೆಯುವ ರೀತಿಯಲ್ಲಿ ನಮಗೂ ಸಹ ಬೌಲಿಂಗ್ ಮಾಡುತ್ತಾರೆ. ಹೀಗಾಗಿ ನಾವು ಇತರ ತಂಡಗಳ ವಿರುದ್ಧ ಸ್ಕೋರ್ ಮಾಡುವುದು ಸುಲಭವಾಗಿದೆ." ಎಂದು KL ರಾಹುಲ್ ಹೇಳಿದರು.

KL ರಾಹುಲ್ ಅವರು ಬೌಲರ್ ಗಳ ಬಗ್ಗೆ ಹೇಳುತ್ತಾ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ ತಂಡದ ಬೌಲರ್ ಗಳು ಪ್ರಮುಖ ಕಾರಣ. ಹಾಗೂ ತಂಡದ ಸಂಘಟಿತ ದಾಳಿ ಈ ಗೆಲುವಿಗೆ ಕಾರಣ ಹಾಗಾಗಿ ಈ ಪಂದ್ಯದ ಗೆಲುವಿದೆ ಟೀಮ್ ಇಂಡಿಯಾ ಬೌಲರ್ ಗಳು ಪ್ರಮುಖ ಕಾರಣ ಎಂದು ತಂಡದ ಬೌಲಿಂಗ್ ದಾಳಿಯನ್ನು ಶ್ಲಾಘಸಿದರು.

KL ರಾಹುಲ್ ಅವರು ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಅಲ್ಲದೆ KL ರಾಹುಲ್ ಅವರನ್ನು ಭವಿಷ್ಯದ ನಾಯಕನನ್ನಾಗಿ ಕಾಣುತ್ತಿರುವ ಅವರ ಅಭಿಮಾನಿಗಳಲ್ಲಿ KL ರಾಹುಲ್ ಅವರನ್ನು ಟೀಮ್ ಇಂಡಿಯಾ ನಾಯಕನಾಗಿ ನೇಮಿಸಿರುವುದು ಸಂತೋಷವಂನ್ನಟು ಮಾಡಿದೆ.



ಕಾಮೆಂಟ್‌ಗಳು