ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

ಸೌತ್ ಆಫ್ರಿಕಾದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಸೋಲು? ಕಾರಣಗಳೇನು?

ಭಾರತದ ಕ್ರಿಕೆಟ್ ತಂಡವು ಈಗಾಗಲೇ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಆಡಲು ಸೌತ್ ಆಫ್ರಿಕಾಗೆ ತೆರಳಿದೆ. ಡಿಸೆಂಬರ್ 26 ರಿಂದ ನಡೆಯಲಿರುವ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಭಾರತೀಯ ತಂಡವು ಗೆಲ್ಲುವುದು ತುಂಬ ಕಠಿಣ. ಕಾರಣಗಳು,

1) ತಂಡ ಹಾಗೂ ಟೀಮ್ ಮ್ಯಾನೇಜಮೆಂಟ್ ನಡುವೆ ಹೊಂದಾಣಿಕೆ ಇಲ್ಲದಿರುವುದು.
ಹೌದು, ಭಾರತೀಯ ತಂಡ ಹಾಗೂ ಟೀಮ್ ಸೆಲೆಕ್ಷನ್ ಮ್ಯಾನೇಜಮೆಂಟ್ ನಡುವೆ ಸರಿಯಾದ ಹೊಂದಾಣಿಕೆ ಕಾಣುತ್ತಿಲ್ಲ, ಇತ್ತೀಚಿಗೆ ಏಕದಿನ ತಂಡದ ನಾಯಕ್ತವದಿಂದ ವಿರಾಟ್ ಕೊಹ್ಲಿ ಅವರನ್ನು ಕೈಬಿಡಲಾಯಿತು, ಈ ನಿರ್ಧಾರವನ್ನು ನಾಯಕನಿಗೆ ತಿಳಿಸದೆಯೇ ತೆಗೆದುಕೊಳ್ಳಲಾಗಿದೆ ಎಂದು ವಿರಾಟ್ ಕೊಹ್ಲಿ ಅವರು ಟೀಕಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ಸೌರವ್ ಗಂಗೂಲಿ ನೀಡದೆ, ಮಂಡಳಿಯು ಈ ವಿಚಾರವಾಗಿ ಚಿಂತನೆ  ನಡೆಸುತ್ತದೆ ಎಂದು ಹೇಳುವ ಮೂಲಕ ಎಲ್ಲ ಗೊಂದಲಗಳಿಗೂ ತೆರೆಯೇಳೆದಿದ್ದಾರೆ.
ಈ ರೀತಿ ತಂಡದಲ್ಲಿ ಹೊಂದಾಣಿಕೆ ಇಲ್ಲದಿರುವುದು ಟೀಮ್ ಆಟಗಾರರ ಮೇಲೆ ವ್ಯತೀರಿಕ್ತ ಪರಿಣಾಮವನ್ನು ಬಿರುತ್ತವೆ, ಹೀಗಾಗಿ ಮುಂದೆ ಈ ರೀತಿಯ ಯಾವುದೇ ಗೊಂದಲಗಳಿಗೆ ತಂಡವು ದಾರಿಮಾಡಿ ಕೊಡದ ರೀತಿಯಲ್ಲಿ ತಂಡವನ್ನು ಮುನ್ನಡೆಸಬೇಕಾಗಿದೆ.

2) ಆಟಗಾರರ ಗಾಯದ ಸಮಸ್ಯೆ.
ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಗಾಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬಿರುತ್ತದೆ. ತಂಡದ ಸ್ಟಾರ್ ಆಟಗಾರರಾದ ರವೀಂದ್ರ ಜಡೇಜಾ, ರೋಹಿತ್ ಶರ್ಮಾ, ಅಕ್ಷರ ಪಟೇಲ್ ಹಾಗೂ ಶುಭಮನ್ ಗಿಲ್ ಅವರಿಗೆ ಗಾಯಗಳು ಕಾಣಿಸಿಕೊಂಡಿವೆ.
ಗಾಯದ ಕಾರಣದಿಂದ ರವೀಂದ್ರ ಜಡೇಜಾ ಅವರು ಸರಣಿಗೆ ಅಲಭ್ಯವಾಗಿರುವುದು ತಂಡಕ್ಕೆ ಒಬ್ಬ ಒಳ್ಳೆಯ ಆಲ್ ರೌಂಡರ್ ಕೊರತೆಯನ್ನು ಉಂಟು ಮಾಡಿದೆ. ಅಲ್ಲದೆ ರೋಹಿತ್ ಶರ್ಮಾ ಅವರು ಟೆಸ್ಟ್ ಸರಣಿಗೆ ಅಲಭ್ಯವಾಗಿದ್ದು ತಂಡದಲ್ಲಿ ಅನುಭವದ ಕೊರತೆಯನ್ನು ಉಂಟುಮಾಡಿದೆ.

3) ಸೌತ್ ಆಫ್ರಿಕಾದ ಮೈದಾನಗಳು.
ಇಲ್ಲಿಯವರೆಗೂ ಭಾರತೀಯ ತಂಡವು ಒಂದು ಟೆಸ್ಟ್ ಸರಣಿಯನ್ನು ಸೌತ್ ಆಫ್ರಿಕಾದಲ್ಲಿ ಗೆದ್ದಿಲ್ಲ, ಹಾಗೂ ಸೌತ್ ಆಫ್ರಿಕಾದ ಮೈದಾನಗಳು ಗ್ರಾಸ್ ಪಿಚ್ ಹೊಂದಿದ್ದು ವೇಗದ ಬೌಲರಿಗಳಿಗೆ ಸಹಾಯಕವಾಗಿವೆ. ಅಲ್ಲದೆ ಭಾರತ ತಂಡದ ಯಾವುದೇ ಬೌಲರ್ ಫಾರ್ಮ್ ನಲ್ಲಿ ಇಲ್ಲದೆ ಇರುವ ಕಾರಣ ಸೌತ್ ಆಫ್ರಿಕಾದಂತ ಮೈದಾನದಲ್ಲಿ ಆಡುವುದು ಕಠಿಣವಾಗಿದೆ.

ಸೌತ್ ಆಫ್ರಿಕಾ ತಂಡದಲ್ಲಿ ಕಂಗಿಸೋ ರಬಾಡಾ ಹಾಗೂ ಏನ್ರಿಕ್ ನೋರ್ಕಿಯಾ ರಂತ ವೇಗದ ಬೌಲರ್ಗಳಿರುವುದು ಸೌತ್ ಆಫ್ರಿಕಾ ತಂಡದ ಶಕ್ತಿಯನ್ನು ಹೆಚ್ಚಿಸಿದೆ. ಒಂದುವೇಳೆ ಈ ಮೈದಾನಗಳು ಸ್ಪಿನ್ ಫ್ರೆಂಡ್ಲಿ ಇದ್ದಲ್ಲಿ ಭಾರತ ತಂಡವು ನಿರಾಯಸವಾಗಿ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ.

ಈ ಮೇಲಿನ 3ಪ್ರಮುಖ ಕಾರಣಗಳಿಂದ ಭಾರತ ಕ್ರಿಕೆಟ್ ತಂಡವು ಸೌತ್ ಆಫ್ರಿಕಾದಲ್ಲಿ ಸರಣಿಯನ್ನು ಜಯಿಸುವುದು ಕಠಿಣ ಕಾರ್ಯವಾಗಿ ಪರಿಣಮಿಸಿದೆ.



ಕಾಮೆಂಟ್‌ಗಳು