- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರಸ್ತುತ ಭಾರತ ತಂಡವು ಟೆಸ್ಟ್ ಮತ್ತು ಏಕದಿನ ಸರಣಿಗಳನ್ನಾಡಲು ಸೌತ್ ಆಫ್ರಿಕಾಗೆ ತೆರಳಿದೆ. ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆದರೆ ಏಕದಿನ ಹಾಗೂ T20I ತಂಡದ ನಾಯಕ ರೋಹಿತ್ ಶರ್ಮಾ ಆಗಿದ್ದಾರೆ. 2021ರ T20 ವಿಶ್ವಕಪ್ ನಂತರ T20 ತಂಡದ ನಾಯಕತ್ವದಿಂದ ಮಾತ್ರ ಕೆಳಗಿಳಿದರು, ಆದರೆ ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿರಲಿಲ್ಲ. ಏಕದಿನ ಮತ್ತು T20 ತಂಡಗಳಿಗೆ ಬೇರೆ ಬೇರೆ ನಾಯಕನನ್ನು ಹೊಂದುವುದು ತಂಡಕ್ಕೆ ಸರಿಯಾದ ವಿಚಾರವಲ್ಲ ಎಂಬ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದಲೂ ಕೈ ಬಿಡುವ ನಿರ್ಧಾರವನ್ನು ತಂಡದ ಆಯ್ಕೆಗಾರರು ತೆಗೆದುಕೊಂಡರು. ಹಾಗಾಗಿ ಏಕದಿನ ಮತ್ತು T20 ತಂಡಗಳಿಗೆ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು.
ಪ್ರಸ್ತುತ ಕ್ರಮವಾಗಿ 33 ಮತ್ತು 34 ವರ್ಷ ವಯಸ್ಸಿನವರಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ತಂಡಕ್ಕೆ ಇನ್ನು ಕೆಲವು ವರ್ಷಗಳಲ್ಲಿ ನಾಯಕತ್ವದಿಂದ ಕೆಳಗಿಳಿಯುವುದು ಖಚಿತ. ಆದ್ದರಿಂದ ಟೀಮ್ ಇಂಡಿಯಾದ ಭವಿಷ್ಯದ ನಾಯಕ ಯಾರಾಗಬಹುದು? ಎಂಬುದು ಭಾರತ ತಂಡದ ಅಭಿಮಾನಿಗಳಲ್ಲಿ ಕುತೂಹಲದ ವಿಷಯ.
ಹಾಗಾದರೆ ಯಾರಗಬಹುದು ಟೀಮ್ ಇಂಡಿಯಾ ಭವಿಷ್ಯದ ನಾಯಕ?
1) KL ರಾಹುಲ್
ಭಾರತ ತಂಡದ ಓಪನರ್ ಬ್ಯಾಟ್ಸಮನ್ ಆಗಿರುವ KL ರಾಹುಲ್ ಅವರು ಒಬ್ಬ ಉತ್ತಮ ಆಟಗಾರ ಅಲ್ಲದೆ ಶಾಂತ ಸ್ವಭಾವದ ಆಟಗಾರ. ಕ್ರಿಕೆಟ್ ನ ಮೂರು ಫಾರ್ಮ್ಯಾಟ್ನಲ್ಲಿ ಸಮಯಕ್ಕೆ ತಕ್ಕಂತೆ ಆಟವನ್ನು ಪ್ರದರ್ಶಿಸಬಲ್ಲ ಆಟಗಾರ, ಜೊತೆಗೆ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಅನುಭವ ಹೊಂದಿದ್ದಾರೆ. ಪ್ರಸ್ತುತ ಭಾರತದ ಮೂರು ಫಾರ್ಮ್ಯಾಟ್ ನಲ್ಲಿ ಉಪನಾಯಕನ ಸ್ಥಾನ ಹೊಂದಿರುವ KL ರಾಹುಲ್ ಭವಿಷ್ಯದ ಟೀಮ್ ಇಂಡಿಯಾ ನಾಯಕನಾಗುವ ಎಲ್ಲಾ ಅವಕಾಶಗಳನ್ನು ಹೊಂದಿದ್ದಾರೆ.
2) ರಿಷಬ್ ಪಂತ್
24 ವರ್ಷದ ರಿಷಬ್ ಪಂತ್ ಅವರು ಪ್ರಸ್ತುತ ಭಾರತ ತಂಡದಲ್ಲಿ ಕ್ರಿಕೆಟ್ ನ ಮೂರು ಫಾರ್ಮ್ಯಾಟ್ ನಲ್ಲಿ ವಿಕೆಟ್-ಕೀಪರ್ ಬ್ಯಾಟ್ಸಮನ್ ಆಗಿ ಆಡುತ್ತಿದ್ದಾರೆ. ಆಕ್ರಮಣಕಾರಿ ಆಟಗಾರರಾದ ರಿಷಬ್ ಪಂತ್ ಅವರು ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಅನುಭವ ಹೊಂದಿದ್ದಾರೆ. ಜೊತೆಗೆ ಜವಾಬ್ದಾರಿ ಹೆಚ್ಚಾದಂತೆ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ ಹಾಗಾಗಿ ಭವಿಷ್ಯದಲ್ಲಿ ಟೀಮ್ ಇಂಡಿಯಾ ನಾಯಕನಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ.
3) ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಜಸ್ಬೀರ್‌ಸಿಂಗ್ ಬುಮ್ರಾ ಅವರು ಪ್ರಸ್ತುತ ಭಾರತ ತಂಡದ ಅತಿಮುಖ್ಯ ಬೌಲರ್ ಆಗಿದ್ದಾರೆ. ಎಲ್ಲಾ ಫಾರ್ಮ್ಯಾಟ್ ನಲ್ಲೂ ಅನುಭವ ಹೊಂದಿರುವ ಜಸ್ಪ್ರೀತ್ ಬುಮ್ರಾ ಅವರು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ. ಭಾರತ ತಂಡದಲ್ಲಿ ಬೌಲಿಂಗ್ ವಿಭಾಗದ ಮುಖ್ಯ ಬೌಲರ್ ಆಗಿರುವ ಇವರು ಟೀಮ್ ಇಂಡಿಯಾ ನಾಯಕನಗುವ ಗುಣಗಳನ್ನು ಹೊಂದಿದ್ದಾರೆ.
4) ಶ್ರೇಯಸ್ ಅಯ್ಯರ್
27 ವರ್ಷದ ಶ್ರೇಯಸ್ ಅಯ್ಯರ್ ಅವರು ಸದ್ಯ ಟೀಮ್ ಇಂಡಿಯಾದ T20 ಮತ್ತು ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಶ್ರೇಯಸ್ ಅಯ್ಯರ್ ಅವರು ತಮಗೆ ಸಿಕ್ಕ ಒಂದೇ ಟೆಸ್ಟ್ ಅವಕಾಶದಲ್ಲಿ ಶತಕ ಭಾರಿಸುವ ಮೂಲಕ ದಾಖಲೆ ನಿರ್ಮಿಸಿದರು. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿರುವ ಇವರು ಭವಿಷ್ಯದಲ್ಲಿ ಟೀಮ್ ಇಂಡಿಯಾ ನಾಯಕನಾಗಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ