- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
2022ರ ಐಪಿಎಲ್ ಟೈಟಲ್ ಸ್ಪೋನ್ಸರ್ ಆಗಿ ಟಾಟಾ ಕಂಪನಿಯು ಹಕ್ಕನ್ನು ಖರಿಧಿಸಿದೆ. 2022 ರ ಐಪಿಎಲ್ ಟೈಟಲ್ ಸ್ಪೋನ್ಸರ್ ಸಲುವಾಗಿ 335 ಕೋಟಿ ರೂಪಾಯಿಯ ಟೈಟಲ್ ಸ್ಪೋನ್ಸರ್ ಹಕ್ಕನ್ನು ಟಾಟಾ ಕಂಪನಿಯು ತನ್ನದಾಗಿಸಿಕೊಂಡಿದೆ.
ಜಗತ್ತಿನಲ್ಲಿ ಅತೀ ದೊಡ್ಡ ಕ್ರಿಕೆಟ್ ಟುರ್ನಮೆಂಟ್ ಆದ ಐಪಿಎಲ್, ಜಾಗತಿಕವಾಗಿ ತನ್ನ ಚಾಪು ಮೂಡಿಸಿದೆ ಆದ್ದರಿಂದ ವಿಶ್ವದ ಎಲ್ಲಾ ದೊಡ್ಡ ಕಂಪನಿಗಳು ಐಪಿಎಲ್ ಸ್ಪೋನ್ಸರ್ಷಿಪ್ ಪಡೆದುಕೊಳ್ಳಲು ತವಕಿಸುತ್ತಿರುತ್ತವೆ, ಹೀಗಾಗಿ 2008ರಲ್ಲಿ ಐಪಿಎಲ್ ಪ್ರಾರಂಭವದಾಗಿನಿಂದ ಇಂದಿನವರೆಗೆ ಹಲವು ಕಂಪನಿಗಳು ಐಪಿಎಲ್ ಸ್ಪೋನ್ಸರ್ಷಿಪ್ ಪಡೆದುಕೊಂಡಿವೆ.
2008 ರಿಂದ 2012ರ ವರೆಗೆ ಪ್ರತಿ ವರ್ಷ 40 ಕೋಟಿಗೆ DLF ಕಂಪನಿಯು ಐಪಿಎಲ್ ಸ್ಪೋನ್ಸರ್ ಅನ್ನು ಪಡೆದುಕೊಂಡಿತ್ತು, 2013 ರಿಂದ 2015ರ ವರೆಗೆ 79.4 ಕೋಟಿ ರೂಪಾಯಿಗಳಿಗೆ Pepsi ಕಂಪನಿಯು ಟೈಟಲ್ ಸ್ಪೋನ್ಸರ್ ಪಡೆದುಕೊಂಡಿತ್ತು, 2016 ರಿಂದ 2017 ರಲ್ಲಿ Vivo 100 ಕೋಟಿ ರೂಪಾಯೀಗಳಿಗೆ ಐಪಿಎಲ್ ಸ್ಪೋನ್ಸರ್ ಅನ್ನು ತನ್ನದಾಗಿಸಿಕೊಂಡಿತ್ತು, 2018 ಮತ್ತು 2019 ರಲ್ಲಿ ಮತ್ತೆ Vivo ಕಂಪನಿಯು ಐಪಿಎಲ್ ಟೈಟಲ್ ಸ್ಪೋನ್ಸರನ್ನು 439.8 ಕೋಟಿ ರೂಪಾಯೀಗಳಿಗೆ ಪಡೆದುಕೊಂಡಿತ್ತು.
ನಂತರದಲ್ಲಿ ಭಾರತ ಮತ್ತು ಚೀನಾ ಗಾಡಿಯಲ್ಲಿ ಎರಡು ಸೇನೆಗಳ ನಡುವೆ ಉಂಟಾದ ವಿವಾದದಿಂದಾಗಿ, ಭಾರತೀಯರು ಚೀನಾ ಕಂಪನಿಗಳನ್ನು ಬಹಿಸ್ಕರಿಸಿದ ಕಾರಣ 2020 ರಲ್ಲಿ ಐಪಿಎಲ್ 2020 ರ ಟೈಟಲ್ ಸ್ಪೋನ್ಸರ್ ಅನ್ನು Dream 11 ಕಂಪನಿಯು 222 ಕೋಟಿ ರೂಪಾಯೀಗಳಿಗೆ ಪಡೆದುಕೊಂಡಿತು. ಆದರೆ 2018 ರಲ್ಲಿ ವಿವೊ ಖರೀಧಿಸಿದ ಟೈಟಲ್ ಸ್ಪೋನ್ಸರ್ ಹಕ್ಕು 2023 ರ ವರೆಗೆ ಇದ್ದ ಕಾರಣ, ಮತ್ತೆ 2021 ರ ಐಪಿಎಲ್ ನಲ್ಲಿ Vivo ಕಂಪನಿಯು 439.8 ಕೋಟಿ ರೂಪಾಯೀಗಳಿಗೆ ಪಡೆದುಕೊಂಡಿತು.
2022 ರ ಐಪಿಎಲ್ ಸ್ಪೋನ್ಸರ್ ಕೂಡ ಹಾಗೆ ನೋಡಿದರೆ Vivo ಕಂಪನಿಗೆ ಹೋಗಬೇಕು. ಆದರೆ ಕರೋನ ಪೆಂಡಾಮಿಕ್, ಚೀನಾದಲ್ಲಿ ಹುಟ್ಟಿದರು ಅದನ್ನು ಬಹು ದಿನಗಳವರೆಗೂ ಮುಚ್ಚಿಟ್ಟು, ಇಡೀ ವಿಶ್ವವೆ ಇದರಿಂದ ಪರೀತಪಿಸುವಂತೆ ಮಾಡಿದ ಚೀನಾ ದೇಶದ ಕಂಪನಿ ಮತ್ತು ಚೀನಾದ ಯಾವುದೇ ಉತ್ಪಾದನೆಯನ್ನು ಯಾವುದೇ ದೇಶದ ನಾಗರಿಕರು ಬಳಸಲು ಇಷ್ಟಪಡುತ್ತಿಲ್ಲ. ಆದ್ದರಿಂದ ಐಪಿಎಲ್ 2022ರ ಟೈಟಲ್ ಸ್ಪೋನ್ಸರ್ ಅನ್ನು ಭಾರತದ ಪ್ರತಿಷ್ಠಿತ ಕಂಪನಿ ಟಾಟಾ ಗ್ರೂಪ್ ಪಡೆದುಕೊಂಡಿದೆ.
ವಿಶ್ವವ್ಯಾಪಿ ಹೆಸರುವಾಸಿಯಾಗಿರುವ ಭಾರತದ ಕಂಪನಿಯದ ಟಾಟಾ ಗ್ರೂಪ್ಸ್, 2022 ರ ಐಪಿಎಲ್ ಟೈಟಲ್ ಸ್ಪೋನ್ಸರ್ ಅನ್ನು ಪಡೆದುಕೊಂದಿದೆ. 335 ಕೋಟಿ ರೂಪಾಯೀಗಳಿಗೆ ಈ ವರ್ಷ ಟೈಟಲ್ ಸ್ಪೋನ್ಸರ್ ಅನ್ನು ಟಾಟಾ ಗ್ರೂಪ್ ಹೊಂದಿರುವುದರಿಂದ ಭಾರತದ ಎಲ್ಲಾ ಪ್ರಜೆಗಳಿಗೆ ಸಂತೋಷ್ ತಂದಿದೆ.
ಈ ಬಗ್ಗೆ ಮಾತನಾಡಿದ ಬಿಸಿಸಿಐ ಸದಸ್ಯರು "ಪ್ರಪಂಚದ ಅತೀ ದೊಡ್ಡ ಕ್ರಿಕೆಟ್ ಟೂರ್ನಿಯಾದ ಐಪಿಎಲ್ ನ ಟೈಟಲ್ ಸ್ಪೋನ್ಸರ್ಷಿಪ್ ಅನ್ನು ಭಾರತದ ಪ್ರತಿಷ್ಠಿತ ಕಂಪನಿ ಹೊಂದಿರುವುದು ಸಂತೋಷದ ಸಂಗತಿಯಾಗಿದೆ. ಅದರಲ್ಲಿಯೂ ಟಾಟಾ ಸಂಸ್ಥೆಯು ಟೈಟಲ್ ಸ್ಪೋನ್ಸರ್ ಹೊಂದಿರುವುದು ನಮಗೆ ತುಂಬಾ ಖುಷಿ ತಂದಿದೆ." ಎಂದು ಹೇಳಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ