- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹೌದು ಎಬಿ ಡಿವಿಲಿಯರ್ಸ್ ಐಪಿಎಲ್ 2022 ರಲ್ಲಿ RCB ಕ್ಯಾಂಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ ಬದಲಿಗೆ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಸೌತ್ ಆಫ್ರಿಕಾ ತಂಡದ ವಿಕೆಟ್-ಕೀಪರ್ ಬ್ಯಾಟ್ಸಮನ್ ಅದ ಎಬಿ ಡಿವಿಲಿಯರ್ಸ್ ಅವರು 2021ರ ನವೆಂಬರ್ ನಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದರು. ಹಾಗಾಗಿ ಅವರು 2022 ರ ಐಪಿಎಲ್ ನಲ್ಲಿಯೂ ಆಡುವುದಿಲ್ಲ. ಕಳೆದ ಕೆಲವು ಸೀಸನ್ ಗಳಲ್ಲಿ RCB ತಂಡದ ಪರ ಆಡಿದ ಎಬಿ ಡಿವಿಲಿಯರ್ಸ್ ಅವರು ತಂಡಕ್ಕೆ ಆಸರೆಯಾಗಿದ್ದರು, ಒಂದೆಡೆ ತಂಡದ ವಿಕೆಟ್ ಉರುಳುತ್ತಿದ್ದರು ಇನ್ನೊಂದೆಡೆ ನಿಂತು ತಂಡವನ್ನು ಗೆಲುವಿನೆಡೆಗೆ ತೆಗೆದುಕೊಂಡು ಹೋದ ಹಲವು ಉದಾಹರಣೆಗಳನ್ನು ನಾವು ನೋಡಿದ್ದೇವೆ.
ಎಬಿ ಡಿವಿಲಿಯರ್ಸ್ ಅವರು ಎಲ್ಲ ರೀತಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವುದು RCB ತಂಡದ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೆ ಇತ್ತೀಚೆಗೆ ಸ್ಟಾರ್-ಸ್ಪೋರ್ಟ್ ನ ಕಾಮೆಂಟ್ರಿ ಬಾಕ್ಸ್ ನಲ್ಲಿ ಮಾತನಾಡುತ್ತ, RCB ತಂಡದ ಕೋಚ್ ಸಂಜಯ ಬಂಗಾರ್ ಅವರು ಮುಂದಿನ ಸೀಸನ್ ನಲ್ಲಿ ಎಬಿ ಡಿವಿಲಿಯರ್ಸ್ ಅವರನ್ನು RCB ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲು RCB ತಂಡದ ಮ್ಯಾನೇಜಮೆಂಟ್ ಯೋಜಿಸಿದೆ ಎಂದು ತಿಳಿಸಿದರು.
ಎಬಿ ಡಿವಿಲಿಯರ್ಸ್ ಅವರು ಐಪಿಎಲ್ ಸೀಸನ್ 15ರಲ್ಲಿ RCB ತಂಡದ ಬ್ಯಾಟಿಂಗ್ ಕೋಚ್ ಆಗಿ ತಂಡಕ್ಕೆ ಕೊಡುಗೆ ನೀಡುವುದು ಬಹುತೇಕ ಖಚಿತವಾಗಿದೆ. ಒಂದು ವೇಳೆ ಎಬಿ ಡಿವಿಲಿಯರ್ಸ್ ಅವರು ತಂಡದ ಬ್ಯಾಟಿಂಗ್ ಕೋಚ್ ಆದರೆ RCB ತಂಡದ ಯುವ ಆಟಗಾರರು ಎಬಿ ಡಿವಿಲಿಯರ್ಸ್ ಅವರಿಂದ ಕಲಿಯುವುದು ಈ ಆಟಗಾರರಿಗೆ ಒಂದು ಉಡುಗೊರೆಯಾಗಿ ಪರಿಣಮಿಸಲಿದೆ.
ಎಬಿ ಡಿವಿಲಿಯರ್ಸ್ ಅವರ ಬಗ್ಗೆ
17 ಫೆಬ್ರವರಿ 1984 ರಲ್ಲಿ, ಸೌತ್ ಆಫ್ರಿಕಾದಲ್ಲಿ ಜನಿಸಿದ ಎಬಿ ಡಿವಿಲಿಯರ್ಸ್ ಅವರ ಪೂರ್ಣ ಹೆಸರು ಅಬ್ರಹಾಂ ಬೆಂಜಮಿನ್ ಡಿ ವಿಲಿಯರ್ಸ್. ಇವರು ಆಡದ ಆಟವಿಲ್ಲ ಮಾಡದ ದಾಖಲೆಯಿಲ್ಲ. ಎಬಿ ಡಿವಿಲಿಯರ್ಸ್ ಅವರು ಕ್ರಿಕೆಟ್ ಅಷ್ಟೇ ಅಲ್ಲದೆ ಸ್ವಿಮ್ಮಿಂಗ್, ರನ್ನಿಂಗ್, rugby, ಹಾಕಿ, ಫುಟ್ಬಾಲ್ ಆಟಗಾರ ಅಷ್ಟೇ ಅಲ್ಲದೆ ಒಬ್ಬ ಒಳ್ಳೆಯ ಹಾಡುಗಾರ ಸಹ ಹೌದು.ಈ ಮೇಲಿನ ಎಲ್ಲಾ ಆಟಗಳಲ್ಲೂ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ತಂಡಗಳಲ್ಲಿ ಎಬಿ ಡಿವಿಲಿಯರ್ಸ್ ಅವರು ಸೌತ್ ಆಫ್ರಿಕಾವನ್ನು ಪ್ರತಿನಿಧಿಸಿದ್ದಾರೆ.
ವಿಶ್ವ ಕ್ರಿಕೆಟ್ ನಲ್ಲಿ 50+ ಸರಾಸರಿ ಜೊತೆಗೆ 100+ ಸ್ಟ್ರೈಕ್ ರೇಟ್ ಹೊಂದಿರುವ ಏಕೈಕ ಆಟಗಾರ, ತಮ್ಮ ವೃತ್ತಿ ಜೀವನದಲ್ಲಿ ಅತಿವೇಗವಾಗಿ 50,000 ರನ್ ಗಡಿ ದಾಟಿದ ಆಟಗಾರ ಕೂಡ ಹೌದು. ಜೊತೆಗೆ ಏಕದಿನ ಪಂದ್ಯದಲ್ಲಿ ಅತಿವೇಗವಾಗಿ 150 ರನ್ ಗಳಿಸಿದ ಆಟಗಾರರಾಗಿದ್ದಾರೆ.
ಅದೇ ರೀತಿ ತಮ್ಮ 15 ವರ್ಷಗಳ ವೃತ್ತಿ ಜೀವನದಲ್ಲಿ 3 ಬಾರಿ ICC ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ, ಜೊತೆಗೆ 2019 ರಲ್ಲಿ ವಿಸ್ಡನ್ ಕ್ರಿಕೆಟರ್ ಆಫ್ ದಿ ಡಿಕೆಡ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಆದ್ದರಿಂದ ಎಬಿ ಡಿವಿಲಿಯರ್ಸ್ ಅವರನ್ನು ತಮ್ಮ ಬ್ಯಾಟಿಂಗ್ ಕೋಚ್ ಆಗಿ ಹೊಂದುವುದು ಎಲ್ಲಾ ತಂಡಗಳ ಕನಸಾಗಿರುತ್ತದೆ, ಈ ಅವಕಾಶ RCB ತಂಡಕ್ಕೆ ಒಲಿದು ಬಂದಿದೆ. ಒಂದು ವೇಳೆ ಎಬಿ ಡಿವಿಲಿಯರ್ಸ್ ಅವರು ತಂಡದ ಕೋಚ್ ಆದರೆ ಭಾರತೀಯ ಯುವ ಆಟಗಾರರು ಇವರ ಅನುಭವದಿಂದ ತುಂಬಾ ಪ್ರಯೋಜನ ಪಡೆಯುವಲ್ಲಿ ಯಾವುದೇ ಸಂಶಯವಿಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ