- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
"ಪಂದ್ಯದ ಮದ್ಯದಲ್ಲಿ KL ರಾಹುಲ್ ತೆಗೆದುಕೊಂಡ ಕೆಲವು ತಪ್ಪು ನಿರ್ಧಾರಗಳೆ ಸೌತ್ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಸುಲಭವಾಗಿ ಜಯಿಸಲು ಕಾರಣವಯಿತು." - ಸುನಿಲ್ ಗವಾಸ್ಕರ್.
ಈ ಪಂದ್ಯದಲ್ಲಿ ಮೊದಲ ಬಾರಿಗೆ ಟೆಸ್ಟ್ ತಂಡದ ನಾಯಕತ್ವ ವಹಿಸಿದ KL ರಾಹುಲ್ ಅವರು ತಂಡವನ್ನು ಗೆಲುವಿನೆಡೆಗೆ ಕರೆದೋಯ್ಯಲು ವಿಫಲರಾದರು. ಈ ಪಂದ್ಯದ ಸೋಲಿಗೆ ಕೇವಲ KL ರಾಹುಲ್ ಮಾತ್ರ ಕಾರಣವಲ್ಲ, ಆದರೆ ಕೆಲವು ದಿಗ್ಗಜರ ಪ್ರಕಾರ ಪಂದ್ಯದ ಸಮಯದಲ್ಲಿ KL ರಾಹುಲ್ ತೆಗೆದುಕೊಂಡ ಕೆಲವು ತಪ್ಪು ನಿರ್ಧಾರಗಳು ತಂಡದ ಸೋಲಿಗೆ ಕಾರಣವದವು, ಎಂದು ಅಭಿಪ್ರಾಯಪಟ್ಟರು.
ಸೌತ್ ಆಫ್ರಿಕಾ ತಂಡದ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಡಿಫೆಂನ್ಸಿವ್ ಆಟದ ಬದಲು ಅಕ್ರಮಣಕಾರಿ ಆಟ ಆಡಿದ್ದರೆ, ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಿತ್ತು ಎಂದು ಸುನಿಲ್ ಗವಾಸ್ಕರ್ ಅವರು ಅಭಿಪ್ರಾಯ ಪಟ್ಟರು.
ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಸೋಲಿಗೆ ನಾಯಕ KL ರಾಹುಲ್ ತೆಗೆದುಕೊಂಡ ಕೆಲವು ನಿರ್ಧಾರಗಳೇ ಕಾರಣ ಎಂದು ತಿಳಿಸುತ್ತ, ಸುನಿಲ್ ಗವಾಸ್ಕರ್ ಅವರು " ಸೌತ್ ಆಫ್ರಿಕಾದ ಇನ್ನಿಂಗ್ಸ್ ಆರಂಭದಿಂದಲು ಟೀಮ್ ಇಂಡಿಯಾ ಆಗಗ್ರೆಸ್ಸಿವ್ ಆಗಿ ಆಟವನ್ನು ಪ್ರದರ್ಶಿಸಬೇಕಿತ್ತು. ಆದರೆ ಟೀಮ್ ಇಂಡಿಯಾ ಕೇವಲ ರನ್ ತಡೆಯುವ ತಂತ್ರವನ್ನು ಅನುಸರಿಸಿತು, ಇದೆ ಕಾರಣಕ್ಕಾಗಿ ಟೀಮ್ ಇಂಡಿಯಾ ಪಂದ್ಯವನ್ನು ಸೋತಿದ್ದು." ಎಂದು ಹೇಳಿದರು.
ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಿದ ರೀತಿಯಲ್ಲಿ ಅಕ್ರಮಣಕಾರಿ ಆಟವನ್ನು ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರದರ್ಶಿಸಲಿಲ್ಲ, ಈ ಕಾರಣದಿಂದ ಎರಡನೇ ಟೆಸ್ಟ್ ನಲ್ಲಿ ಸೌತ್ ಆಫ್ರಿಕಾ ತಂಡ ಸುಲಭವಾಗಿ ಟೀಮ್ ಇಂಡಿಯಾವನ್ನು ಸೋಲಿಸಿತು.
KL ರಾಹುಲ್ ಅವರು ಪಂದ್ಯದಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾತನಾಡುತ್ತ ಸುನಿಲ್ ಗವಾಸ್ಕರ್ ಅವರು, " ಸೌತ್ ಆಫ್ರಿಕಾ ತಂಡದ ನಾಯಕ ಡೀನ್ ಅಲ್ಗರ್ ಅವರು ಕ್ರೀಸ್ ನಲ್ಲಿದ್ದಾಗ ಅವರ ವಿರುದ್ಧ ಡಿಫೆಂನ್ಸಿವ್ ಫೀಲ್ಡಿಂಗ್ ಬದಲಿಗೆ ಅಕ್ರಮಣಕಾರಿ ಫೀಲ್ಡಿಂಗ್ ಅನ್ನು ಅನುಸರಿಸಬೇಕಿತ್ತು, ಆದರೆ KL ರಾಹುಲ್ ಅವರು ಅಕ್ರಮಣಕಾರಿ ಪ್ರವೃತ್ತಿ ತೋರಿಸಲಿಲ್ಲ." ಎಂದು ಹೇಳಿದರು.
ಡೀನ್ ಅಲ್ಗರ್ ಆಡುತ್ತಿದ್ದಾಗ ಹುಕ್ ಹೊಡೆತಗಳಿಗೆ ಫೀಲ್ಡಿಂಗ್ ನಿಲ್ಲಿಸುವಂತೆ ಫೀಲ್ಡರ್ ಗಳನ್ನು KL ರಾಹುಲ್ ಅವರು ನಿಲ್ಲಿಸಿದ್ದರು, ಆದರೆ ಡೀನ್ ಅಲ್ಗರ್ ಅವರು ಹುಕ್ ಹೊಡೆತಗಳನ್ನು ಹೊಡೆಯುವುದಿಲ್ಲ. KL ರಾಹುಲ್ ಅವರು ಯಾವ ಕಾರಣಕ್ಕಾಗಿ ಹುಕ್ ಸ್ಥಾನದಲ್ಲಿ ಫೀಲ್ಡರ್ ಗಳನ್ನು ನಿಲ್ಲಿಸಿದರು ಎಂಬುದು ಅರ್ಥವಾಗಲಿಲ್ಲ ಎಂದು ಸುನಿಲ್ ಗವಾಸ್ಕರ್ ಅವರು ತಿಳಿಸಿದರೆ.
ಒಟ್ಟಿನಲ್ಲಿ ಇಡೀ ತಂಡದ ಪ್ರದರ್ಶನ ಎರಡನೇ ಟೆಸ್ಟ್ ಪಂದ್ಯದಲ್ಲಿ ಸರಿಯಾಗಿ ಇರಲಿಲ್ಲ, ಅದ ಕಾರಣದಿಂದ ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯವನ್ನು ಸೋತಿದೆ. ಆದರೆ ನಾಯಕನಾದವನು ಯಾವ ರೀತಿಯ ತೇಗಳಿಕೆಗಳು ಬಂದರು ಅದಕ್ಕೆ ತಲೆಕೊಡದೆ ತಮ್ಮ ಆಟದ ಕಡೆ ಗಮನ ಕೊಡಬೇಕು ಎಂಬ ರೀತಿಯಲ್ಲಿ KL ರಾಹುಲ್ ಅವರು ಯಾವುದೇ ಟಿಕೆಗಳಿಗೆ ತಲೆಗೋಡದೆ ತಂಡಕ್ಕಾಗಿ ಆಡುತಿದ್ದಾರೆ.
ಮುಂದಿನ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಲಭ್ಯವಿರುವುದರಿಂದ ತಂಡದ ನಾಯಕತ್ವದ ಹೊಣೆಗಾರಿಕೆ KL ರಾಹುಲ್ ಅವರಿಗೆ ಇಲ್ಲ. ಇನ್ನು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮುಂದಿನ ಪಂದ್ಯಕ್ಕೆ ಲಭ್ಯವಾಗಿರುವುದರಿಂದ, ಮುಂದಿನ ಪಂದ್ಯವನ್ನು ಗೆದ್ದು ಸೌತ್ ಆಫ್ರಿಕಾದಲ್ಲಿ ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾ ತಯಾರಿ ನಡೆಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ