- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
"ನೀವು ಧೋನಿಯಂತಹವರನ್ನು ಸ್ಥಾನದಲ್ಲಿ ಆಡುತ್ತಿದ್ದರೆ, ನಿಮ್ಮ ಬ್ಯಾಟಿಂಗ್ ತಂತ್ರವನ್ನು ನೀವು ಮರುಪರಿಶೀಲಿಸಬೇಕು. ನಿಮ್ಮ ಪ್ರತಿಭೆಯಿಂದಾಗಿ ನೀವು ತಂಡದಲ್ಲಿ ಇದ್ದೀರಿ ... ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನಿಂಗ್ಸ್ ಕಟ್ಟಲು ಸಾಕಷ್ಟು ಸಮಯವಿದೆ. ನೀವು ಅಂತಹ ಅನಾವಶ್ಯಕ ಹೊಡೆತಗಳನ್ನು ಹೊಡೆದರೆ, ತಜ್ಞರು, ವಿಶ್ಲೇಷಕರು ಮತ್ತು ಅಭಿಮಾನಿಗಳಿಂದ ಸಾಕಷ್ಟು ವಿಮರ್ಶೆಗೆ ಒಳಗಾಗಬೇಕಾಗುತ್ತದೆ."
ಈ ಪಂದ್ಯಗಳಲ್ಲಿ ರಿಷಬ್ ಪಂತ್ ಅವರು ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯಗಳಲ್ಲಿ ಕ್ರಮವಾಗಿ 8, 34, 17 ಮತ್ತು 0 ರನ್ ಗಳಿಸಿದ್ದಾರೆ. ಎರಡನೇ ಟೆಸ್ಟ್ ನ್ ಎರಡನೇ ಇನ್ನಿಂಗ್ಸ್ ನಲ್ಲಿ ಕಂಗಿಸೋ ರಾಬಾಡಾ ಅವರ ಎಸೆತದಲ್ಲಿ ಅನಾವಶ್ಯಕ ಹೊಡೆತಕ್ಕೆ ಕೈಹಾಕಿ ತಮ್ಮ ವಿಕೆಟ್ ಒಪ್ಪಿಸಿದರು.
ಈ ಬಗ್ಗೆ ತಮ್ಮ ಯೌಟ್ಯೂಬ್ ಲೈವ್ ನಲ್ಲಿ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್, "ರಿಷಬ್ ಪಂತ್ ಅವರು ತಮ್ಮ ವಿಕೆಟ್ ಗೆ ಬೆಲೆ ಕೊಡಬೇಕಾಗುತ್ತದೆ, ಯಾವುದೇ ಪ್ಲೇಯರ್ ಆಗಿದ್ದರು ಮೊದಲು ಕ್ರೀಸ್ ನಲ್ಲಿ ನಿಲ್ಲುವುದನ್ನು ಕಲಿಯಬೇಕು. ಪ್ರಮುಖವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ತಾಳ್ಮೆಯಿಂದ ಆಡುವುದು ಮುಖ್ಯವಾಗಿರುತ್ತದೆ. ಹಾಗಾಗಿ ರಿಷಬ್ ಪಂತ್ ಅವರು ತಮ್ಮ ತಂಡಕ್ಕಾಗಿ ತಾಳ್ಮೆಯಿಂದ ಆಡಿ ರನ್ ಗಳಿಸುವುದು ಅವಶ್ಯಕವಾಗಿದೆ."
"ನೀವು ಧೋನಿಯಂತಹವರನ್ನು ಬದಲಾಯಿಸುತ್ತಿದ್ದರೆ, ನಿಮ್ಮ ಬ್ಯಾಟಿಂಗ್ ತಂತ್ರವನ್ನು ನೀವು ಮರುಪರಿಶೀಲಿಸಬೇಕು. ನಿಮ್ಮ ಪ್ರತಿಭೆಯಿಂದಾಗಿ ನೀವು ತಂಡದಲ್ಲಿ ಇದ್ದೀರಿ ... ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನಿಂಗ್ಸ್ ಕಟ್ಟಲು ಸಾಕಷ್ಟು ಸಮಯವಿರುತ್ತದೆ. ನೀವು ಅಂತಹ ಬೇಜವಾಬ್ದಾರಿ ಹೊಡೆತಗಳನ್ನು ಹೊಡೆದರೆ, ನೀವು ತಜ್ಞರು, ವಿಶ್ಲೇಷಕರು ಮತ್ತು ಅಭಿಮಾನಿಗಳಿಂದ ಸಾಕಷ್ಟು ವಿಶ್ಲೇಷಣೆಗೆ ಒಳಪಡಬೇಕಾಗುತ್ತದೆ,"
24 ವರ್ಷದ ರಿಷಬ್ ಪಂತ್ MS ಧೋನಿ ಕ್ರಿಕೆಟ್ ಗೆ ವಿಧಾಯ ಹೇಳಿದಾಗಿನಿಂದ ತಂಡದಲ್ಲಿ ಕಾಯಂ ಆಟಗಾರನಾಗಿ ಆಡುತಿದ್ದಾರೆ. ಪಂತ್ ಅವರು ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 37.39 ರ ಸರಾಸರಿಯಲ್ಲಿ 1608 ರನ್ ಗಳಿಸಿದ್ದಾರೆ. ಆದರೆ ಕಳೆದ ಕೆಲವು ಪಂದ್ಯಗಳಲ್ಲಿ ರಿಷಬ್ ಪಂತ್ ಅವರ ಬ್ಯಾಟ್ ನಿಂದ ರನ್ ಬಂದಿಲ್ಲ.
ಪಂತ್ ಅವರ ಕೊನೆಯ ಮೂರು ಅಂಕಿ ಸ್ಕೋರ್ ಕಳೆದ ವರ್ಷ ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೂಡಿಬಂದಿತ್ತು. ಆದರೆ ಕಳೆದ ಏಳು ಪಂದ್ಯಗಳಲ್ಲಿ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 250 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಅವರ ದಾಖಲೆ ಕೂಡ ಆಕರ್ಷಕವಾಗಿರಲಿಲ್ಲ. ಪಂತ್ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಸೇರಿದಂತೆ ಐದು ಟೆಸ್ಟ್‌ಗಳಲ್ಲಿ ಕೇವಲ 191 ರನ್‌ಗಳೊಂದಿಗೆ ನ್ಯೂಜಿಲೆಂಡ್ ಪ್ರವಾಸವನ್ನು ಮುಗಿಸಿದರು.
ಈ ಎಲ್ಲಾ ಅಂಕಿ ಅಂಶಗಳೊಂದಿಗೆ ಮಾತನಾಡಿದ ಸಲ್ಮಾನ್ ಬಟ್ " ಮೊದಮೊದಲು ರಿಷಬ್ ಪಂತ್ ಅವರ ಬ್ಯಾಟಿಂಗ್ ನೋಡಿದಾಗ ಅವರು ದಿಟ್ಟತನದಿಂದ ಬ್ಯಾಟಿಂಗ್ ಮಾಡಿತ್ತಿದ್ದಾರೆ ಅನಿಸುತ್ತದೆ, ಆದರೆ ಅವರ ಅನವಶ್ಯಕ ಹೊಡೆತಗಳನ್ನು ನೋಡಿದರೆ ಅವರು ಅಷ್ಟೊಂದು ದೈರ್ಯವಾಗಿ ಬ್ಯಾಟಿಂಗ್ ಮಾಡುತ್ತಿಲ್ಲ ಬದಲಾಗಿ, ಎಲ್ಲಾ ಎಸೆತಗಳನ್ನು ಹೊಡೆಯಲು ಎನಿಸುತ್ತಿದ್ದಾರೆ ಅನ್ನಿಸುತ್ತದೆ."
"MS ಧೋನಿ ಅವರ ಸ್ಥಾನವನ್ನು ತುಂಬಲಿರುವ ರಿಷಬ್ ಪಂತ್ ಅವರು ಇಷ್ಟು ಬೇಜವಾಬ್ದಾರಿಯಿಂದ ಆಟವಾಡಿದರೆ MS ಧೋನಿಯವರ ಹತ್ತಿರಕ್ಕೆ ಸಹ ಹೋಗಲು ಅವಕಾಶವಿಲ್ಲ. ಯುವ ಆಟಗಾರಾಗಿರುವ ರಿಷಬ್ ಪಂತ್ ಅವರು ಎಲ್ಲಾ ಫಾರ್ಮ್ಯಾಟ್ ಗಳಲ್ಲಿಯೂ T20 ತರಹದ ಬ್ಯಾಟಿಂಗ್ ಬಿಟ್ಟು ತಾಳ್ಮೆಯಿಂದ ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದರೆ ಧೋನಿಯವರ ಸ್ಥಾನದಲ್ಲಿ ಆಡಬಹುದು." ಎಂದು ಸಲ್ಮಾನ್ ಬಟ್ ಅವರು ಅಭಿಪ್ರಾಯ ಪಟ್ಟರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ