- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
" KL ರಾಹುಲ್ ಅವರ ಬದಲಿಗೆ ಅನುಭವಿ ಆಟಗಾರ ಅಜಿಂಕ್ಯ್ ರಹಾನೇ ಅವರಿಗೆ ನಾಯಕತ್ವದ ಹೊಣೆಗಾರಿಕೆ ಕೊಡಬಹುದಿತ್ತು, ಅನುಭವದ ಜೊತೆಗೆ ಹಲವಾರು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಅನುಭವವನ್ನು ಇವರು ಹೊಂದಿದ್ದರು."
ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಗಾಯದ ಕಾರಣ 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯವಾಗಿದ್ದರು. ಈ ಕಾರಣದಿಂದ ತಂಡಕ್ಕೆ ಹೊಸ ನಾಯಕನಾಗಿ ಪ್ರಸ್ತುತ ತಂಡದ ಉಪನಾಯಕನಾಗಿರುವ KL ರಾಹುಲ್ ಅವರನ್ನು ನೇಮಿಸಲಾಗಿತ್ತು.
ಒಂದು ವೇಳೆ ತಂಡದಲ್ಲಿ ರೋಹಿತ್ ಶರ್ಮಾ ಆಡುತ್ತಿದ್ದರೆ ಅವರನ್ನೇ ನಾಯಕನನ್ನಾಗಿ ನೇಮಕ ಮಾಡಲಾಗುತ್ತಿತ್ತು, ಅದರೆ ರೋಹಿತ್ ಶರ್ಮಾ ಅವರು ಕೂಡ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗಿದ್ದಾರೆ. ಇವೆಲ್ಲದರ ನಡುವೆ KL ರಾಹುಲ್ ಅವರನ್ನು ತಂಡದ ನಾಯಕನಾಗಿ ಬಿಸಿಸಿಐ ನೇಮಕ ಮಾಡಿತು.
ಈ ನಡುವೆ ಟೀಮ್ ಇಂಡಿಯಾ ಮಾಜಿ ಟೆಸ್ಟ್ ಆಟಗಾರ ಹಾಗೂ ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿರುವ ವಾಸಿಮ್ ಜಾಫರ್ ಅವರು ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ನಾಯಕನನ್ನು ನೇಮಿಸುವಲ್ಲಿ ಎಡವಿದೆ ಎಂದು ಅಭಿಪ್ರಾಯ ಪಟ್ಟರು.
" ತಂಡದಲ್ಲಿ ರೋಹಿತ್ ಶರ್ಮಾ ಇದ್ದರು ಸಹ ನನ್ನ ಅಭಿಪ್ರಾಯದ ಪ್ರಕಾರ ಟೆಸ್ಟ್ ಪಂದ್ಯಗಳಲ್ಲಿ ಅಜಿಂಕ್ಯ್ ರಹಾನೇ ಒಬ್ಬ ಉತ್ತಮವಾದ ನಾಯಕ, ಹಾಗಾಗಿ ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಅಜಿಂಕ್ಯ್ ರಹಾನೇ ಅವರನ್ನು ನಾಯಕನನ್ನಾಗಿ ನೇಮಿಸುವುದು ಅವಶ್ಯಕ. ಅಲ್ಲದೆ ರಹಾನೇ ಅವರು ನಾಯಕನಾಗಿ ಆಡಿರುವ ಯಾವುದೇ ಪಂದ್ಯವನ್ನು ಟೀಮ್ ಇಂಡಿಯಾ ಸೋತಿಲ್ಲ." ಎಂದು ವಾಸಿಮ್ ಜಾಫರ್ ಅವರು ಹೇಳಿದರು.
ಹೌದು, ವಾಸಿಮ್ ಜಾಫರ್ ಹೇಳಿರುವಂತೆ ಅಜಿಂಕ್ಯ್ ರಹಾನೇ ಹಲವು ಪಂದ್ಯಗಳಲ್ಲಿ ಟೀಮ್ ಇಂಡಿಯಾವನು ನಾಯಕನಾಗಿ ಮುನ್ನಡೆಸಿದ್ದಾರೆ, ಮತ್ತು ಇವರು ಮುನ್ನಡೆಸಿದ ಯಾವುದೇ ಪಂದ್ಯವನ್ನು ಟೀಮ್ ಇಂಡಿಯಾ ಸೋತಿಲ್ಲ. ಜೊತೆಗೆ ಅಜಿಂಕ್ಯ್ ರಹಾನೇ ಅನುಭವಿ ಆಟಗಾರ ಸಹ ಹೌದು.
ಈ ಎಲ್ಲ ಕಾರಣಗಳನ್ನು ತಿಳಿಸಿದ ವಾಸಿಮ್ ಜಾಫರ್ " KL ರಾಹುಲ್ ಅವರ ಬದಲಿಗೆ ಅಜಿಂಕ್ಯ್ ರಹಾನೇ ಅವರನ್ನು ನಾಯಕನನ್ನಾಗಿ ನೇಮಿಸಿದ್ದಾರೆ ಭಾರತ 2ನೇ ಟೆಸ್ಟ್ ಪಂದ್ಯವನ್ನು ಗೆಲ್ಲುತ್ತಿತ್ತು, ಅಜಿಂಕ್ಯ್ ರಹಾನೇ ಒಬ್ಬ ಅನುಭವಿ ಆಟಗಾರ ಜೊತೆಗೆ ಹಲವು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಅನುಭವವಿದೆ." ಎಂದು ಹೇಳಿದರು.
" KL ರಾಹುಲ್ ಅವರು ಕೂಡ ನಾಯಕತ್ವದ ಅನುಭವ ಹೊಂದಿದ ಆಟಗಾರ ಆದರೆ ಇವರು T20 ಮತ್ತು ಏಕದಿನ ಪಂದ್ಯಗಳಲ್ಲಿ ಅನುಭವ ಹೊಂದಿದ್ದಾರೆ ಹೀಗಾಗಿ KL ರಾಹುಲ್ ಅವರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ " ಎಂದು ವಾಸಿಮ್ ಜಾಫರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅದೇನೇ ಆಗಿರಲಿ ಭಾರತ ತಂಡವು ಸೌತ್ ಆಫ್ರಿಕಾ ವಿರುದ್ಧದ ಸರಣಿಗಳನ್ನು ಗೆದ್ದು ಭಾರತಕ್ಕೆ ಹಿಂದಿರುಗಲಿ ಎನ್ನುವುದು ಅಭಿಮಾನಿಗಳ ಆಶಯ, ಜೊತೆಗೆ 3ನೇ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅವರು ಲಭ್ಯವಾಗಿರುವುದು ತಂಡಕ್ಕೆ ಶಕ್ತಿ ತಂದಿದೆ. ಆದ್ದರಿಂದ 3ನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ ಗೆದ್ದು ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಳ್ಳಬಹುದುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ