- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
2020-21 ರಲ್ಲಿ ಭಾರತೀಯ ಕ್ರಿಕೆಟ್ ತಂಡವು ಆಟಗಾರರ ಗಾಯದ ಸಮಸ್ಯೆಯಿಂದ ತುಂಬಿಹೋಗಿತ್ತು. ಆದರು ಭಾರತೀಯ ತಂಡವು ತನ್ನ ಅನಾನುಭವಿ ಆಟಗಾರರನ್ನೊಳಗೊಂಡ ತಂಡವನ್ನೇ ಕಣಕ್ಕಿಳಿಸಿ ಸರಣಿಯನ್ನು ಗೆದ್ದುಕೊಂಡಿತು. ಜೊತೆಗೆ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗಳನ್ನು ಯುವ ಆಟಗಾರರನ್ನೊಳಗೊಂಡ ತಂಡವು ಜಯಿಸಿತು.
ಈ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಟಾಪ್ 4 ಆಟಗಾರರೆಂದರೆ,
4) ಅಕ್ಷರ್ ಪಟೇಲ್
2021ರ ಇಂಗ್ಲೆಂಡ್ ವಿರುದ್ಧದ ಅಹಮದಾಬಾದ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 5 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು, ಭಾರತವು ಈ ಪಂದ್ಯವನ್ನು ಗೆದ್ದು 2021ರ ಮೊದಲ ಟೆಸ್ಟ್ ಚಾಂಪಿಯನಸಿಪ್ ಫೈನಲ್ ಗೆ ಪ್ರವೇಶ ಪಡೆದಿತ್ತು. ಅಂದಿನಿಂದ ಅಕ್ಷರ್ ಪಟೇಲ್ ಅವರು ಭಾರತೀಯ ತಂಡದಲ್ಲಿ ಒಬ್ಬ ಒಳ್ಳೆಯ ಆಲ್-ರೌಂಡರ್ ಆಗಿ ರವೀಂದ್ರ ಜಡೇಜಾ ರವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಶಕ್ತಿಯಾಗಿದ್ದಾರೆ.
3) ರೋಹಿತ್ ಶರ್ಮಾ
ಫೆಬ್ರವರಿ 2021 ರ ಚೆನ್ನೈ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಅವರು 18 ಫೋರ್ ಹಾಗೂ 2ಸಿಕ್ಸರ್ ಗಳೊಂದಿಗೆ 161 ರನ್ ಹೊಡೆಯುವ ಮೂಲಕ ಪಂದ್ಯವನ್ನು ಗೆದ್ದು ಸರಣಿ 1-1 ಸಮಬಲ ಸಾಧಿಸುವಲ್ಲಿ ಉತ್ತಮ ಕೊಡುಗೆ ನೀಡಿದರು. ಇವರ 161 ರನ್ ಗಳ ಕೊಡುಗೆಯೊಂದಿಗೆ ಭಾರತವು ಆ ಪಂದ್ಯವನ್ನು 317 ರನ್ ಗಳ ಬೃಹತ್ ಅಂತರದಿಂದ ಜಯಗಳಿಸಿತು.
2) ಮೊದಮದ್ ಸಿರಾಜ್
2021 ರಲ್ಲಿ ಭಾರತದ ಪ್ರಮುಖ ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ರಂತ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡದ ಪ್ರಮುಖ ಬೌಲರ್ ಆಗಿ ತಂಡವು ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
1) ರಿಷಬ್ ಪಂತ್
ಹೌದು, ಈ ವರ್ಷದ ಭಾರತೀಯ ತಂಡದ ಪ್ರಮುಖ ಆಟಗಾರ ರಿಷಬ್ ಪಂತ್, 1988 ರ ನಂತರದಲ್ಲಿ ಬ್ರಿಸ್ಬನ್ ನ ಯಾವುದೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸೋತಿರಲಿಲ್ಲ. ಸತತವಾಗಿ 33 ವರ್ಷಗಳವರೆಗೆ ಆಸ್ಟ್ರೇಲಿಯಾ ತಂಡದ ವಿರುದ್ಧ ಬ್ರಿಸ್ಬನ್ ನಲ್ಲಿ ಜಯಸಲು ಯಾವುದೇ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಬ್ರಿಸ್ಬನ್ ಟೆಸ್ಟ್ ಪಂದ್ಯದಲ್ಲಿ ಕೊನೆಯ ದಿನಡಾಟದಲ್ಲಿ 328 ರನ್ ಹೊಡೆಯುವ ಮೂಲಕ ಭಾರತವು 33 ವರ್ಷಗಳ ರೆಕಾರ್ಡ್ ಅನ್ನು ಅಳಿಸಿ ಹಾಕಿತ್ತು. ಈ ಪಂದ್ಯದಲ್ಲಿ ರಿಷಬ್ ಅವರು ಪ್ರಮುಖ ಪಾತ್ರವಹಿಸಿದ್ದರು, 9 ಫೋರ್ ಹಾಗೂ 1ಸಿಕ್ಸರ್ ಗಳೊಂದಿಗೆ 89 ರನ್ ಗಳಿಸುವ ಮೂಲಕ ತಂಡವನ್ನು ಗೆಲ್ಲಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ