- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಭಾರತೀಯ ಕ್ರೀಕೆಟ್ ಮುಂದಿನ ಎರಡು ವರ್ಷಗಳಲ್ಲಿ 2 ವಿಶ್ವಕಪ್ ಪಂದ್ಯಾವಳಿಗಳನ್ನು ಆಡಲಿದೆ, ಆದರೆ ಭಾರತೀಯ ಕ್ರೀಕೆಟ್ಗೆ ಮುಂದಿನ ದಿನಗಳಲ್ಲಿನ ಅತ್ಯುತ್ತಮ ಆಟಗಾರ ಯಾರು ಅನ್ನುವ ಪ್ರಶ್ನೆಗೆ ಇನ್ನು ಸರಿಯಾದ ಉತ್ತರ ಸಿಕ್ಕಿಲ್ಲ.
ನಾವೆಲ್ಲ ನೋಡಿರುವಂತೆ ಭಾರತೀಯ ತಂಡವು 1990ರ ದಶಕದಿಂದ ಜಗತ್ತಿನ ಅತ್ಯುತ್ತಮ ತಂಡಗಳಲ್ಲಿ ಒಂದಾಗಿತ್ತು, ಹಾಗೂ ಭಾರತೀಯ ತಂಡದಲ್ಲಿ ಕೆಲವು ಸ್ಟಾರ್ ಆಟಗಾರರಿದ್ದರು ಉದಾಹರಣೆಗೆ, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಕಪಿಲ್ ದೇವ್, ವೀರೇಂದ್ರ ಸೇಹವಾಗ್, ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ಮುಂತಾದ ಆಟಗಾರರನ್ನು ಭಾರತವು ಹೊಂದಿತ್ತು.
1995 ರಿಂದ 2005-6ರ ವರೆಗೆ ಭಾರತೀಯ ತಂಡದ ಅಷ್ಟೇ ಅಲ್ಲದೆ ವಿಶ್ವ ಕ್ರೀಕೆಟ್ ಕಂಡತಹ ಅದ್ಭುತ ತಾರೆ ಸಚಿನ್ ತೆಂಡೂಲ್ಕರ್, ಇವರು ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಮಿಂಚಿದಂತ ಆಟಗಾರ, ಇವರ ನಂತರದಲ್ಲಿ ಯುವರಾಜ್ ಸಿಂಗ್ ರವರು ಮಹೇಂದ್ರ ಸಿಂಗ್ ಧೋನಿಯವರ ತಂಡಕ್ಕೆ ಆಸರೆಯಾಗಿದ್ದವರು ಇವರ ನಂತರ ವಿರಾಟ್ ಕೊಹ್ಲಿಯವರು ಭಾರತೀಯ ಕ್ರೀಕೆಟ್ ನ ಸ್ಟಾರ್ ಆಟಗಾರರಾಗಿ ಮಿಂಚಿದರು. ಆದರೆ ಈಗ ರೋಹಿತ್ ಶರ್ಮಾ ಅವರು ಭಾರತೀಯ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ ಈ ಹಿನ್ನೆಲೆಯಲ್ಲಿ ಮುಂದಿನ ಸ್ಟಾರ್ ಆಟಗಾರ ಯಾರು ಎನ್ನುವ ಕುತೂಹಲ ಎಲ್ಲರಲ್ಲಿಯೂ ಮನೆಮಾಡಿದೆ.
ನಿಮಗೆಲ್ಲ ತಿಳಿದಿರುವ ಹಾಗೆ ಪ್ರಸ್ತುತ ಭಾರತೀಯ ತಂಡದಲ್ಲಿ ಪ್ರತಿಯೊಬ್ಬರು ಅತ್ಯುತ್ತಮ ಆಟಗಾರರೇ ಆದರೆ ಇವರಲ್ಲಿ ಮುಂದಿನ ಪೀಳಿಗೆಯ ಸ್ಟಾರ್ ಆಟಗಾರ ಯಾರಗಬಹುದು ಎಂಬುದೇ ಕುತೂಹಲದ ವಿಷಯ.
ಪ್ರಸ್ತುತವಾಗಿ ಭಾರತೀಯ ತಂಡದ ಭವಿಷ್ಯತ್ತಿನ ಆಟಗಾರರು ಯಾರು ಅಂತ ಕೇಳಿದರೆ ತಟ್ಟ ಅಂತಾ ಬರೋ ಹೆಸರುಗಳು ಅಂದ್ರೆ KL ರಾಹುಲ್, ರಿಷಬ್ ಪಂತ, ಶ್ರೇಯಸ್ ಅಯ್ಯರ್, ಮುಂತಾದ ಹೆಸರುಗಳು ಬರುತ್ತೆ, ಆದರೆ ಮುಂದಿನ ಸ್ಟಾರ್ ಆಟಗಾರ ಈವರಾರೂ ಅಲ್ಲ, ಆ ಆಟಗಾರ ಯಾರು ಅಂದ್ರೆ ಅದೇ ಮಹಾರಾಷ್ಟ್ರ ತಂಡದ ನಾಯಕ ಋತುರಾಜ್ ಗಾಯಕ್ವಾಡ್, ಹೌದು ಋತುರಾಜ್ ಗಾಯಕ್ವಾಡ್ ಈಗ ಇರೋ ಪೋರ್ಮ್ ನೋಡಿದ್ರೆ ನೀವು ಅಚ್ಚರಿ ಪಡ್ತಿರಾ, ಅಷ್ಟೇ ಅಲ್ಲದೆ ಇವರು 2021 ರ ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ಪಡಕೊಂಡಿದ್ರು, ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಕೂಡ ಟಾಪ್ 10 ರನ್ ಗಳಿಸಿದವರ ಪಟ್ಟಿಯಲ್ಲಿದ್ರು, ಅಷ್ಟೇ ಅಲ್ದೆ ಈಗ ನಡೀತಿರೋ ವಿಜಯ ಹಜಾರೆ ಟ್ರೋಫಿ ಪಂದ್ಯಾವಳಿಗಳಲ್ಲಿ ಸತತವಾಗಿ 3ಬಾರಿ 100+ ರನ್ ಗಳನ್ನು ಕಲೆ ಹಾಕಿದ್ದಾರೆ,
ಇದನ್ನೆಲ್ಲ ನೋಡಿದ್ರೆ ಮುಂಬರುವ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತೀಯ ತಂಡದ ಸೂಪರ್ ಸ್ಟಾರ್ ಆಗಿ ಮಿಂಚೋದ್ರಲ್ಲಿ ಯಾವುದೇ ಸಂಶಯವಿಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ