ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

RCBಯ ಮುಂದಿನ ನಾಯಕ ಯಾರು? ಮನೀಶ್ ಪಾಂಡೆ? KL ರಾಹುಲ್?

ಐಪಿಎಲ್ 15 ಮುಂಬರುವ ಏಪ್ರಿಲ್ 2022 ನಲ್ಲಿ ಆರಂಭವಾಗಲಿದ್ದು, ಈ ಬಾರಿ ಐಪಿಎಲ್ ನಲ್ಲಿ ಹೊಸದಾಗಿ ಎರಡು ತಂಡಗಳು ಸೇರಿಕೊಂಡಿವೆ. ಈ ತಂಡಗಳು ಯಾವ ಆಟಗಾರರನ್ನು ನಾಯಕನನ್ನಾಗಿ ಆಯ್ಕೆ ಮಾಡುತ್ತವೆ ಎನ್ನುವುದು ಕುತೂಹಲ ಮೂಡಿಸಿವೆ, ಇವೆಲ್ಲಕಿಂತ ಹೆಚ್ಚಾಗಿ ಮುಂಬರುವ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಆಡುವುದಿಲ್ಲ ಎಂದು ಹೇಳಿದ್ದಾರೆ ಹಾಗಾದರೆ RCB ತಂಡದ ಮುಂದಿನ ನಾಯಕ ಯಾರು? ವಿರಾಟ್ ಕೊಹ್ಲಿ ಅವರು ಯಾರ ನಾಯಕತ್ವದಲ್ಲಿ ಆಡಲಿದ್ದಾರೆ ಎನ್ನುವುದು ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ.

ಹಾಗಾದರೆ ಯಾರಬಹುದು RCB ಯ ಮುಂದಿನ ನಾಯಕ?

4) ದೇವದತ್ತ ಪಡೀಕ್ಕಲ್
ಕರ್ನಾಟಕದ ಪರವಾಗಿ ತಮ್ಮ ಡೋಮೆಸ್ಟಿಕ್ ಪಂದ್ಯಗಳನ್ನು ಆಡುವ, ದೇವದತ್ತ್ ಪಡೀಕ್ಕಲ್ ಅವರು ಒಬ್ಬ ಉತ್ತಮ ಆಟಗಾರ, ಅಲ್ಲದೆ ಈಗಾಗಲೇ RCB ಪರವಾಗಿ ಕಳೆದ ಎರಡು ಸೀಸನ್ ನ 29 ಪಂದ್ಯಗಳಲ್ಲಿ 884 ರನ್ ಗಳಿಸುವ ಮೂಲಕ ಆರಂಭಿಕನಾಗಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಂತಹ ಆಟಗಾರ. ಆರಂಭಿಕನಾಗಿ ಅತ್ಯುತ್ತಮವಾಗಿ ಬ್ಯಾಟ್ ಬೀಸುವ ಇವರು ಅತೀ ಶಾಂತ ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಜೊತೆಗೆ ಸಾಕಷ್ಟು ಡೋಮೆಸ್ಟಿಕ್ ಪಂದ್ಯಗಳನ್ನು ಆಡಿರುವ ಅನುಭವವನ್ನು ಹೊಂದಿದ್ದಾರೆ.

3) ಡೇವಿಡ್ ವಾರ್ನರ್
ಆಸ್ಟ್ರೇಲಿಯಾದ ಸ್ಪೋಟಕ ಆಟಗಾರರಾದ ಡೇವಿಡ್ ವಾರ್ನರ್ ಅವರು ಕಳೆದ ಹಲವು ಅವೃತ್ತಿಗಳಲ್ಲಿ ಸನ್ ರೈಸೆರ್ಸ್ ಹೈದ್ರಾಬಾದ್ ಪರವಾಗಿ ನಾಯಕನಾಗಿ ಹಾಗೂ ಆರಂಭಿಕ ಆಟಗಾರನಾಗಿ ಯಶಸ್ಸು ಕಂಡವರು. ಐಪಿಎಲ್ ನಲ್ಲಿ 3 ಬಾರಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಂತ ಡೇವಿಡ್ ವಾರ್ನರ್ ಅವರು ನಾಯಕನಾಗಿ 2016ರಲ್ಲಿ ತಂಡವನ್ನು ಐಪಿಎಲ್  ಚಾಂಪಿಯನ್ ಆಗಿ ಕರೆದೋಯ್ಯುವಲ್ಲಿ ಪ್ರಯುಖ ಪಾತ್ರ ವಹಿಸಿದ ಆಟಗಾರ. ಈ ಅವೃತ್ತಿಯಲ್ಲಿ ಸನ್ ರೈಸೆರ್ಸ್ ಹೈದ್ರಾಬಾದ್, ಡೇವಿಡ್ ವಾರ್ನರ್ ಅವರನ್ನು ರಿಟೇನ್ ಮಾಡಿಕೊಂಡಿಲ್ಲ. ಹೀಗಾಗಿ RCB ತಂಡಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಲು ಒಂದು ಉತ್ತಮ ಅವಕಾಶವನ್ನು RCB ತಂಡ ಹೊಂದಿದೆ.

2) KL ರಾಹುಲ್
ಭಾರತೀಯ ಕ್ರಿಕೆಟ್ ನ ಆರಂಭಿಕ ಆಟಗಾರ KL ರಾಹುಲ್ ಅವರು, ಪ್ರಸ್ತುತ ಭಾರತೀಯ t20 ಹಾಗೂ ODI ತಂಡಗಳ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಜೊತೆಗೆ ಸಮಯಕ್ಕೆ ತಕ್ಕಂತೆ ಬ್ಯಾಟ್ ಬೀಸುವ ಇವರು ಐಪಿಎಲ್ ನ ಕಳೆದ 2-3 ಸೀಸನ್ ಗಳಲ್ಲಿ ಅತೀ ಹೆಚ್ಚಾಗಿ ರನ್ ಗಳಿಸಿದ್ದಾರೆ. ತಮ್ಮ ಐಪಿಎಲ್ ಪ್ರಾರಂಭಿಕ ಸೀಸನ್ ಗಳನ್ನು RCB ಪರ ಆಡಿದ್ದಾರೆ ಅಲ್ಲದೆ ಐಪಿಎಲ್ ನಲ್ಲಿ ಪಂಜಾಬ್ ತಂಡವನ್ನು ನಾಯಕನಾಗಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಈ ಸೀಸನ್ ನಲ್ಲಿ ಪಂಜಾಬ್ ತಂಡಕ್ಕೆ ರಿಟೇನ್ ಆಗಲು ನಿರಾಕರಿಸಿ ಓಕ್ಷನ್ ನಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಪ್ರತಿಯೊಂದು ತಂಡವು KL ರಾಹುಲ್ ಅವರನ್ನು ತಮ್ಮ ಪಾಳೆಯದಲ್ಲಿ ಕಾಣಲು ಬಯಸುತ್ತಿವೆ, ಆದರೆ  RCB ತಂಡಕ್ಕೆ KL ರಾಹುಲ್ ಅವರನ್ನು ಕೊಂಡುಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.

1) ಮನೀಶ್ ಪಾಂಡೆ
ಕರ್ನಾಟಕ ತಂಡದ ನಾಯಕರಾದ ಮನೀಶ್ ಪಾಂಡೆ ಅವರು ಐಪಿಎಲ್ ನಲ್ಲಿ ಸೆಂಚುರಿ ಬಾರಿಸಿದ ಮೊದಲ ಭಾರತೀಯ ಆಟಗಾರ. ತಂಡದಲ್ಲಿ ಯಾವುದೇ ಕ್ರಮಾoಕದಲ್ಲಿ, ಯಾವುದೇ ಪರಿಸ್ಥಿಯಲ್ಲಿ, ಸಮಯಕ್ಕೆ ತಕ್ಕಂತೆ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅನುಭವಿ ಆಟಗಾರರಾದ ಇವರು ಕರ್ನಾಟಕ ತಂಡವನ್ನು ಮುನ್ನಡಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಇವರು ಒಬ್ಬ ಅತ್ಯುತ್ತಮ ಪೀಲ್ಡರ್ ಕೂಡ ಹೌದು. ಪ್ರಸ್ತುತವಾಗಿ ಇವರು ತಮ್ಮ ನಾಯಕತ್ವದಲ್ಲಿ ಕರ್ನಾಟಕ ತಂಡವನ್ನು  ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಫೈನಲ್ ಕೊಂಡೋಯ್ದಿದ್ದರು, ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ನಾಯಕನಾಗಿ ತಂಡವನ್ನು ಮುನ್ನಡುಸುತ್ತಿದ್ದಾರೆ.




ಕಾಮೆಂಟ್‌ಗಳು