- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
2021ರಲ್ಲಿ ಕೆಲವು ಮಹತ್ವದ ಪಂದ್ಯಾವಳಿಗಳು ಜರುಗಿದವು, ಇವುಗಳಲ್ಲಿ ಪ್ರಮುಖವಾದವುಗಳೆಂದರೆ ಅಂತರಾಷ್ಟ್ರೀಯ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ICC T20 ವಿಶ್ವಕಪ್ ಪಂದ್ಯಾವಳಿಗಳು ಜೊತೆಗೆ ಕೆಲವು ತಂಡಗಳು ವಿದೇಶಿ ಸರಣಿಗಳನ್ನಾಡಿದವು. ಒಟ್ಟಾರೆಯಾಗಿ 2020 ಕ್ಕೆ ಹೋಲಿಸಿದರೆ 2021ರಲ್ಲಿ ಮಹತ್ವದ ಪಂದ್ಯಾವಳಿಗಳು ನಡೆದವು.
ಪ್ರಸ್ತುತ ವಿಶ್ವ ಕ್ರಿಕೆಟ್ ನಲ್ಲಿ ಹಲವು ದಿಗ್ಗಜ ಬೌಲರ್ ಗಳಿದ್ದಾರೆ. ಉದಾಹರಣೆಗೆ, ಮಿಚೆಲ್ ಸ್ಟಾರ್ಕ್, ಕಂಗಿಸೋ ರಬಾಡಾ, ಜೇಮ್ಸ್ ಅಂಡೇರ್ಸನ್, ಜಸ್ಪ್ರೀತ್ ಬುಮ್ರಾ, ರಸೀದಿ ಖಾನ್ ಮುಂತಾದವರು. ಇಂತಹ ದಿಗ್ಗಜ ಬೌಲರ್ ಗಳನ್ನು ಹೊಂದಿರುವ ಕ್ರಿಕೆಟ್ ಜಗತ್ತಿನಲ್ಲಿ ಯಾರು ಈ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿದ್ದಾರೆ ಎನ್ನುವುದು ಎಲ್ಲ ಕ್ರಿಕೆಟ್ ಅಭಿಮಾನಿಗಳಲ್ಲೂ ಕುತೂಹಲ ಉಂಟು ಮಾಡುತ್ತದೆ, ಆದರೆ 2021 ರಲ್ಲಿ ಈ ದಿಗ್ಗಜರಲ್ಲಿ ಯಾವೊಬ್ಬ ಬೌಲರ್ ಕೂಡ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿಲ್ಲ.
ಹಾಗಾದರೆ ಯಾರು ಅತಿಹೆಚ್ಚು ವಿಕೆಟ್ ಪಡೆದ ಆ ಟಾಪ್ 4 ಆಟಗಾರರು?.
4) ದಶಮಂತ ಚಮೀರಾ ಹಾಗೂ ತಬ್ರೇಜ್ ಶಂಷಿ
ದಶಮಂತ ಚಮೀರಾ
2021ರ ಸಾಲಿನಲ್ಲಿ 38 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಚಮೀರಾ 50 ವಿಕೆಟ್ ಗಳೊಂದಿಗೆ ಶ್ರೀಲಂಕಾ ತಂಡದಲ್ಲಿ ಈ ಸಾಲಿನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರಾಗಿದ್ದಾರೆ.
ತಬ್ರೇಜ್ ಶಂಷಿ
ಸೌತ್ ಆಫ್ರಿಕಾ ತಂಡದ ತಬ್ರೇಜ್ ಶಂಷಿ ಅವರು 2021ರ ಸಾಲಿನಲ್ಲಿ 31 ಪಂದ್ಯಗಳಲ್ಲಿ 50 ವಿಕೆಟ್ ಪಡೆಯುವ ಮೂಲಕ ಸೌತ್ ಆಫ್ರಿಕಾ ತಂಡದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿದ್ದಾರೆ. ಈ ವಿಕೆಟ್ ಗಳನ್ನು ಕೇವಲ ಏಕದಿನ ಹಾಗೂ T20 ಪಂದ್ಯಗಳಲ್ಲಿ ಮಾತ್ರ ಪಡೆದಿದ್ದಾರೆ, ಏಕೆಂದರೆ ಇವರು ಟೆಸ್ಟ್ ತಂಡದಲ್ಲಿ ಇನ್ನು ಸ್ಥಾನ ಪಡೆದಿಲ್ಲ.
3) ರವಿಚಂದ್ರನ್ ಆಶ್ವಿನ್
ಭಾರತಯ ಸ್ಪೀನ್ನರ್ ರವಿಚಂದ್ರನ್ ಆಶ್ವಿನ್ ಅವರು 2021ರ 13 ಪಂದ್ಯಗಳಲ್ಲಿ 61 ವಿಕೆಟ್ ಪಡೆಯುವ ಮೂಲಕ ಭಾರತೀಯ ಬೌಲರ್ ಗಳಲ್ಲಿಯೇ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಜೊತೆಗೆ ಈ ವರ್ಷದಲ್ಲಿ ವಿಶ್ವ ಬೌಲರ್ ಗಳಲ್ಲಿಯೇ ಅತಿಹೆಚ್ಚು ಸರಾಸರಿ ಹೊಂದಿದ ಆಟಗಾರರಾಗಿದ್ದಾರೆ (15 ಸರಾಸರಿ ). ಈ ಮೇಲಿನ ಎಲ್ಲ ವಿಕೆಟ್ ಗಳನ್ನು ಒಂದೆರಡು T20 ಪಂದ್ಯಗಳನ್ನು ಬಿಟ್ಟರೆ ಎಲ್ಲವನ್ನು ಕೇವಲ ಟೆಸ್ಟ್ ಪಂದ್ಯಗಳಲ್ಲಿಯೇ ಪಡೆದಿರುವುದು ವಿಶೇಷ.
2) ಹಸನ್ ಅಲಿ
ಪಾಕಿಸ್ತಾನ ತಂಡದ ವೇಗದ ಬೌಲರ್ ಹಸನ್ ಅಲಿ ಅವರು 2021ರ ಸಾಲಿನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರಲ್ಲಿ 30 ಪಂದ್ಯಗಳಲ್ಲಿ 73 ವಿಕೆಟ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
1) ಶಾಹೀನ್ ಆಫ್ರಿದಿ
ಪಾಕಿಸ್ತಾನ ತಂಡದ ವೇಗಿ ಶಾಹೀನ್ ಆಫ್ರಿದಿ ಅವರು ಈ ಸಾಲಿನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರಗಿದ್ದಾರೆ. 36 ಪಂದ್ಯಗಳಲ್ಲಿ 78 ವಿಕೆಟ್ ಪಡೆಯುವ ಮೂಲಕ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರಾಗಿದ್ದಾರೆ.
ಅಜಾಜ್ ಪಟೇಲ್
ಈ ಟಾಪ್ ವಿಕೆಟ್ ಪಡೆದ ಬೌಲರ್ ಗಳ ಜೊತೆಯಲ್ಲಿಯೇ ನ್ಯೂಜಿಲೆಂಡ್ ತಂಡದ ಅಜಾಜ್ ಪಟೇಲ್ ಅವರು ಭಾರತ ವಿರುದ್ಧದ ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ವಿಶ್ವದ 3ನೇ ಬೌಲರ್ ಎಂಬ ಕೀರ್ತಿಗೆ ಪಾತ್ರರಾದಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ