- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರೊ ಕಬ್ಬಡ್ಡಿ 2021ರ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದ್ದು ಡಿಸೆಂಬರ್ 26ರಿಂದ ಪಂದ್ಯಾವಳಿ ಆರಂಭಗೊಳ್ಳಲಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್-19 ಕಾರಣದಿಂದ ಯಾವುದೇ ಪಂದ್ಯಗಳು ನಡಿದಿಲ್ಲ ಹಾಗಾಗಿ ಎಲ್ಲಾ ಕಬ್ಬಡ್ಡಿ ಅಭಿಮಾನಿಗಳು ಈ ಬಾರಿಯ ಸೀಸನ್ ಗಾಗಿ ಉತ್ಸುಕದಿಂದ ಕಾಯುತಿದ್ದಾರೆ.
ಎಲ್ಲಾ ತಂಡಗಳು ತಮ್ಮ ನೆಚ್ಚಿನ ಆಟಗಾರರನ್ನು ಹೊಂದಿವೆ, ಆದರೆ ಈ ತಂಡಗಳಲ್ಲಿ ಯಾವ ತಂಡವು ಬಲಿಷ್ಠವಾಗಿದೆಯೆಂದು ಹೇಳುವುದು ತುಂಬಾ ಕಠಿಣವಾಗಿದೆ, ಆದರೆ ಎಲ್ಲಿ ನಾವು ತಂಡಗಳ ಬಲಾಬಲದ ಬಗ್ಗೆ ತಿಳಿದುಕೊಳ್ಳೋಣ.
ಬೆಂಗಾಲ್ ವಾರಿಯರ್ಸ್ :
ಬಲ : ಅತ್ಯುತ್ತಮವಾದ ರೈಡಿಂಗ್ ಡಿಪಾರ್ಟ್ಮೆಂಟ್ ಅನ್ನು ಹೊಂದಿದೆ, ಕಳೆದ ಸೀಸನ್ ನ ಮನಿಂದರ್ ಸಿಂಗ್, ನಬಿಬಕ್ಷ ಜೊತೆಗೆ ಈ ಸೀಸನ್ ನಲ್ಲಿ ರಿಶಾಂಕ್ ದೇವಾಡಿಗ ಹಾಗೂ ಸುಖೆಶ್ ಹೆಗಡೆ ಯಂತ ಆಟಗಾರರನ್ನು ಹೊಂದಿದೆ.
ದೌರ್ಬಲ್ಯ: ಕವರ್ ಡಿಫೆಂನ್ಸ್ ನಲ್ಲಿ ಉತ್ತಮವಾದ ಅನುಭವಿ ಆಟಗಾರರು ಇಲ್ಲದೆ ಇರುವುದು.
ಬೆಂಗಳೂರು ಬುಲ್ಸ್ :
ಬಲ : ಪವನ್ ಸೆರಾವತ್ ಜೊತೆಗೆ ದೀಪಕ್ ನರ್ವಾಲ್ ಹಾಗೂ ಚಂದ್ರನ್ ರಂಜಿತ್ ಅವರೊಂದಿಗೆ ಈ ಸೀಸನ್ ನ ಅತ್ಯುತ್ತಮ ರೈಡಿಂಗ್ ಡಿಪಾರ್ಟ್ಮೆಂಟ್ ಅನ್ನು ಹೊಂದಿರುವ ತಂಡವಾಗಿದೆ.
ದೌರ್ಬಲ್ಯ : ಡಿಫೆಂನ್ಸ್ ವಿಭಾಗದಲ್ಲಿ GB ಮೊರೆ ಅವರನ್ನು ಬಿಟ್ಟರೆ ಯಾವುದೇ ಅನುಭವಿ ಆಟಗಾರರು ಇಲ್ಲದೆ ಇರುವುದು ಬೆಂಗಳೂರು ಬುಲ್ಸ್ ತಂಡದ ದೌರ್ಬಲ್ಯವಾಗಿದೆ.
ದಬಾಂಗ್ ದಿಲ್ಲಿ :
ಬಲ : ರೈಡಿಂಗ್ ಹಾಗೂ ಡಿಫೆಂನ್ಸ್ ಎರಡು ವಿಭಾಗದಲ್ಲಿ ಉತ್ತಮ ಅನುಭವಿ ಆಟಗಾರರನ್ನು ಹೊಂದಿದೆ. ರೈಡಿಂಗ್ ವಿಭಾಗದಲ್ಲಿ ನವೀನ್ ಕುಮಾರ್ ಮತ್ತು ಅಜಯ್ ಠಾಕೂರ್ ಇದ್ದರೆ, ಡಿಪೆಂನ್ಸ್ ವಿಭಾಗದಲ್ಲಿ ಮಂಜೀತ್ ಚಿಲ್ಲರ್ ಮತ್ತು ಸಂದೀಪ್ ನರ್ವಾಲ್ ರಂತ ಅನುಭವಿ ಆಟಗಾರರನ್ನು ಹೊಂದಿದೆ.
ದೌರ್ಬಲ್ಯ : ಎಲ್ಲಾ ವಿಭಾಗದಲ್ಲಿ ಅನುಭವಿ ಆಟಗಾರರನ್ನು ಹೊಂದಿರುವ ದಬಾಂಗ್ ಡೆಲ್ಲಿ ಪಾಳೆಯದಲ್ಲಿ ಫಾರ್ಮ್ ನ ಸಮಸ್ಯೆ ಕಾಡುತ್ತಿದೆ.
ಗುಜರಾತ್ ಪಾರ್ಚುನ್ ಜಾಯಿಂಟ್ಸ್ :
ಬಲ : ಸುನಿಲ್ ಹಾಗೂ ಪರ್ವೀಶ್ ರಂತ ಉತ್ತಮ ಡಿಫೆಂನ್ಸ್ ಹೊಂದಿರುವ ಗುಜರಾತ್ ತಂಡ ಡಿಫೆಂನ್ಸ್ ನ ಎಲ್ಲಾ ವಿಭಾಗದಲ್ಲಿಯೂ ಅತ್ಯುತ್ತಮವಾಗಿದೆ. ಜೊತೆಗೆ ಮನಪ್ರಿಟ್ ಸಿಂಗ್ ರಂತ ಕೋಚ್ ಅವರನ್ನು ಹೊಂದಿದೆ.
ದೌರ್ಬಲ್ಯ : ಯಾವುದೇ ಅನುಭವಿ ಹಾಗೂ ಹೆಸರುವಾಸಿ ರೈಡರ್ ಗಳು ಇಲ್ಲದಿರುವುದು. ಈ ತಂಡದ ಪ್ರಮುಖ ಕೊರತೆಯಾಗಿದೆ.
ಹರಿಯಾಣ ಸ್ಟೀಲರ್ಸ್ :
ಬಲ : ಸುರೇಂದರ್ ನಾಡಾ, ರವಿಕುಮಾರ್ ಮತ್ತು ರಾಜೇಶ್ ನರ್ವಾಲ್ ರಂತ ಅನುಭವಿ ಆಟಗಾರರು ಡಿಫೆಂನ್ಸ್ ವಿಭಾಗದಲ್ಲಿದ್ದಾರೆ. ಆದರೆ ರೈಡಿಂಗ್ ವಿಭಾಗದಲ್ಲಿ ವಿಕಾಸ್ ಖಂಡೋಲ ಮಿಂಚಬಲ್ಲರು.
ದೌರ್ಬಲ್ಯ : ರೈಡಿಂಗ್ ವಿಭಾಗದಲ್ಲಿ ವಿಕಾಸ್ ಖಂಡೋಲಾ ಅವರಿಗೆ ಸಹಾಯಕ ರೈಡರ್ ಇಲ್ಲದಿರುವುದು ಈ ತಂಡದ ಪ್ರಮುಖ ದೌರ್ಬಲ್ಯ.
ಜೈಪುರ್ ಪಿಂಕ್ ಪ್ಯಾಂಥೆರ್ಸ್ :
ಬಲ : ಎಲ್ಲಾ ವಿಭಾಗದಲ್ಲಿಯೂ ಉತ್ತಮ ಸಮನ್ವಯ ಹೊಂದಿದೆ. ಜೊತೆಗೆ ದೀಪಕ ಹೂಡಾ ಮತ್ತು ರಾವಲ್ ರಂತ ಆಲ್-ರೌಂಡರ್ ಆಟಗಾರರು ಇರುವುದು ತಂಡಕ್ಕೆ ಶಕ್ತಿಯಾಗಿದೆ.
ದೌರ್ಬಲ್ಯ : ಅನುಭವಿ ರೈಡರ್ ಇಲ್ಲದಿರುವುದರಿಂದ ತಂಡವು ನಾಯಕ ದೀಪಕ್ ಹೂಡಾ ಅವರ ಮೇಲೆ ಅತಿಯಾಗಿ ಅವಲಂಭಿತವಾಗಿದೆ.
ಪಾಟ್ನಾ ಪೈರೆಟ್ಸ್ :
ಬಲ : ರೈಡಿಂಗ್ ವಿಭಾಗದಲ್ಲಿ ವೈವಿದ್ಯತೆಯನ್ನು ಹೊಂದಿದ್ದು, ತಂಡದಲ್ಲಿ ಉತ್ತಮ ರೈಡರ್ ಗಳಾದ ಪ್ರಶಾಂತ್ ರೈ, ಮೋನು ಗೊಯತ್, ಸಚಿನ್, ಜಾನ್ ಕುನ್ ಲೀ ರಂತ ಆಟಗಾರರನ್ನು ಒಳಗೊಂಡಿದೆ.
ದೌರ್ಬಲ್ಯ : ಡಿಫೆಂನ್ಸ್ ವಿಭಾಗದಲ್ಲಿ ಯಾವುದೇ ಅನುಭವಿ ಆಟಗಾರರಿಲ್ಲ.
ಪುಣೆರಿ ಪಲ್ಟಾನ್ಸ್ :
ಬಲ : ರಾಹುಲ್ ಚೌದರಿ ಹಾಗೂ ನಿತಿನ್ ತೊಮರ್ ರಂತ ಬಲಿಷ್ಠ ರೈಡರ್ ಗಳನ್ನು ಹೊಂದಿರುವ ಈ ತಂಡವು. ರೈಡಿಂಗ್ ಜೊತೆಗೆ ಡಿಫೆಂನ್ಸ್ ವಿಭಾಗದಲ್ಲಿಯೂ ಬಲಿಷ್ಠವಾಗಿದೆ.
ದೌರ್ಬಲ್ಯ : ರಾಹುಲ್ ಚೌದರಿ ಹಾಗೂ ನಿತಿನ್ ತೊಮರ್ ರಂತ ಆಟಗಾರರಿದ್ದರು, ಈ ಆಟಗಾರರು ಕಳೆದ ಸೀಸನ್ ಗಳಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ.
ತಮಿಳ್ ತಲೈವಾಸ್ :
ಬಲ : ತಮಿಳ್ ತಲೈವಾಸ್ ತಂಡವು ಕಬ್ಬಡ್ಡಿಯ ಬೆಸ್ಟ್ ಕವರ್ ಡಿಫೆಂಡರ್ ಆದ ಸುರ್ಜಿತ್ ಸಿಂಗ್ ಹಾಗೂ ರೈಡರ್ ಗಳಾದ ಕೆ. ಪ್ರಪಂಜನ್ ಮತ್ತು ಮಂಜಿತ್ ಅವರನ್ನು ಹೊಂದಿದೆ ಹೀಗಾಗಿ ಕವರ್ ಮತ್ತು ರೈಡಿಂಗ್ ವಿಭಾಗದಲ್ಲಿ ತಂಡವು ಉತ್ತಮವಾಗಿದೆ.
ದೌರ್ಬಲ್ಯ : ತಂಡದ ಡಿಫೆಂನ್ಸ್ ವಿಭಾಗದಲ್ಲಿ ಸುರ್ಜಿತ್ ಸಿಂಗ್ ಅವರನ್ನು ಬಿಟ್ಟರೆ ಬೇರೆ ಯಾವ ಅನುಭವಿ ಆಟಗಾರರಿಲ್ಲ. ಅಷ್ಟೇ ಅಲ್ಲದೆ ರೈಡಿಂಗ್ ವಿಭಾಗದಲ್ಲಿಯೂ ಕೂಡ ಕೆ. ಪ್ರಪಂಜನ್ ಮತ್ತು ಮಂಜಿತ್ ಅವರನ್ನು ಬಿಟ್ಟರೆ ಬೇರಾವ ಅನುಭವಿಯನ್ನು ಹೊಂದಿಲ್ಲ.
ಯುಪಿ ಯೋದ್ಧ :
ಬಲ : ಪರದೀಪ್ ನರ್ವಾಲ್ ಹಾಗೂ ಶ್ರೀಕಾಂತ್ ಜಾಧವ ಅವರನ್ನು ಹೊಂದಿರುವ ಯುಪಿ ಯೋದ್ಧ ತಂಡವು ರೈಡಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ, ಜೊತೆಗೆ ಸುರೇಂದರ್ ಗಿಲ್ ಮತ್ತು ಮಹಮ್ಮದ್ ತಾಘಿ ಸಹಾಯಕ ರೈಡರ್ ಗಳಾಗಿದ್ದು ತಂಡಕ್ಕೆ ಬಲವನ್ನು ತುಂಬಿದ್ದಾರೆ.
ದೌರ್ಬಲ್ಯ : ಡಿಫೆಂನ್ಸ್ ವಿಭಾಗದಲ್ಲಿ ನಿತೀಶ್ ಕುಮಾರ್ ಅವರನ್ನು ಬಿಟ್ಟರೆ ಬೇರೆ ಯಾವುದೇ ಅನುಭವಿ ಆಟಗಾರರಿಲ್ಲ.
ಯು ಮುಂಭಾ :
ಬಲ : ನಾಯಕ ಫೈಝಲ್ ಅತ್ರಚ್ ಅಲಿ ಹಾಗೂ ಒಳ್ಳೆಯ ಆಲ್-ರೌಂಡರ್ ಗಳಾದ ಅಂಜಿಕ್ಯ್ ಕಾಪ್ರೇ ಮತ್ತು ಆಶಿಷ್ ಸಂಗ್ವಾನ್ ರಂತ ಒಳ್ಳೆಯ ಆಟಗಾರರನ್ನು ಹೊಂದಿದೆ.
ದೌರ್ಬಲ್ಯ : ಯು ಮುಂಭಾ ತಂಡವು ಯಾವುದೇ ವಿಭಾಗದಲ್ಲಿ ನಾಯಕನನ್ನು ಬಿಟ್ಟರೆ ಬೇರೆ ಯಾವ ಅನುಭವಿ ಆಟಗಾರರನ್ನು ಹೊಂದಿಲ್ಲ.
ತೆಲಗು ಟೈಟಾನ್ಸ್ :
ಬಲ : ಸಿದ್ದಾರ್ಥ್ ದೇಸಾಯಿ ಹಾಗೂ ರೋಹಿತ್ ಕುಮಾರ್ ಅವರನ್ನು ಹೊಂದಿರುವ ತೆಲಗು ಟೈಟಾನ್ಸ್ ತಂಡವು ದಾಳಿ ವಿಭಾಗದಲ್ಲಿ ಬಲಿಷ್ಠವಾಗಿದೆ, ಜೊತೆಗೆ ರೋಹಿತ್ ಕುಮಾರ್ ಅವರಂತ ಚಾನಾಕ್ಷ ಆಟಗಾರ ತಂಡದಲ್ಲಿ ಇರುವುದು ಇನ್ನಷ್ಟು ಬಲವನ್ನು ತಂದಿದೆ, ಜೊತೆಗೆ ಸಂದೀಪ್ ಖಂಡೋಲ ಹಾಗೂ ಋತುರಾಜ್ ಕೊರವಿ ರಂತ ಬಲಿಷ್ಠ ಕಾರ್ನರ್ ಡಿಫೆಂಡರ್ ಗಳನ್ನು ಹೊಂದಿದೆ.
ದೌರ್ಬಲ್ಯ: ಎಲ್ಲಾ ವಿಭಾಗಳಲ್ಲೂ ಬಲಿಷ್ಠವಾಗಿರುವ ಈ ತಂಡವು ಕೆಲವು ಅನಾನುಭವಿ ಆಟಗಾರರನ್ನು ಸಹ ಹೊಂದಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ