ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

2021ರ ಭಾರತೀಯ ಕ್ರಿಕೆಟ್ ನ ಶಾಕಿಂಗ್ ಕ್ಷಣಗಳು ಯಾವವು? ಇಲ್ಲಿದೆ ನೋಡಿ ಮಾಹಿತಿ.

2021 ರಲ್ಲಿ ಭಾರತ ಕ್ರಿಕೆಟ್ ತಂಡವು ಹಲವು ಸರಣಿಗಳನ್ನು ಹಾಗೂ ICC T20 ವಿಶ್ವಾಕಪ್ ಪಂದ್ಯಾವಳಿಗಳನ್ನು ಆಡಿದೆ. 2021 ರಲ್ಲಿ ಒಂದು ಕಡೆ  ಕೊರೋನಾ ಮಹಾಮಾರಿಯಿಂದ ಲಾಕ್ಡೌನ್ ಹಾಗೂ ಇನ್ನೊಂದೆಡೆ ಭಾರತ ತಂಡದ ಪ್ರಮುಖ ಪಂದ್ಯಾವಳಿಗಳಲ್ಲಿ ಸೋಲು, ಇವೆಲ್ಲವುಗಳ ಜೊತೆಯಲ್ಲಿಯೇ ಭಾರತ ಕ್ರಿಕೆಟ್ ತಂಡವು ಕೆಲವು ಅಚ್ಚರಿಯ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿತ್ತು.

ಅಂತಹ ಕೆಲವು ಸಂಗತಿಗಳನ್ನು ಇಲ್ಲಿ ತಿಳಿಯೋಣ,

1) ಆಸ್ಟ್ರೇಲಿಯಾದ ಬ್ರಿಸ್ಬನ್ ಟೆಸ್ಟ್ ( ಗಾಬಾ ಟೆಸ್ಟ್ )
1988 ರ ನಂತರದಲ್ಲಿ ಆಸ್ಟ್ರೇಲಿಯಾ ತಂಡವನ್ನು ಬ್ರಿಸ್ಬನ್ ನಲ್ಲಿ ಮಣಿಸಲು ಯಾವುದೇ ತಂಡಕ್ಕೆ ಸಾಧ್ಯವಾಗಿರಲಿಲ್ಲ ಆದರೆ ಭಾರತ ತಂಡವು ಜನೆವರಿ 19, 2021ರಂದು ಆಸ್ಟ್ರೇಲಿಯಾ ತಂಡವನ್ನು ಬ್ರಿಸ್ಬನ್ ಮೈದಾನದಲ್ಲಿ ಸೋಲಿಸಿ 32 ವರ್ಷಗಳ ರೆಕಾರ್ಡ್ ನ್ನು ಅಳಿಸಿಹಾಕಿತ್ತು.

ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, KL ರಾಹುಲ್, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ,  ಜಸ್ಪ್ರೀತ್ ಬುಮ್ರಾ ರಂತ ಅನುಭವಿ ಆಟಗಾರರಿಲ್ಲದೆ, ಕೇವಲ ಯುವ ಆಟಗಾರರಿಂದ ಕುಡಿದ್ದ ತಂಡವು ಈ ಪಂದ್ಯವನ್ನು ಗೆದ್ದಿದ್ದು ವಿಶೇಷವಾಗಿತ್ತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ವಿಶೇಷ ಪಂದ್ಯವಾಗಿ ಗುರುತಿಸಿಕೊಂಡಿತ್ತು.

2) ವರ್ಲ್ಡ್ ಟೆಸ್ಟ್ ಚಾಂಪಿಯನಸಿಪ್ ಫೈನಲ್
144 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಟೆಸ್ಟ್ ಕ್ರಿಕೆಟ್, ಮೊದಲ ಬಾರಿಗೆ ಚಾಂಪಿಯನ್ಷಿಪ್ ಪಂದ್ಯಾವಳಿಯನ್ನು ಆಯೋಜಿಸಿತ್ತು, ಈ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಸಿಸುವ ಮೂಲಕ ಭಾರತ ತಂಡವು ಇತಿಹಾಸ ನಿರ್ಮಿಸಿತು. ಆದರೆ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನು ಕೈಚೆಲ್ಲಿತು.

ಈ ಪಂದ್ಯದಲ್ಲಿ ಜಯಗಳಿಸಿದ ನ್ಯೂಜಿಲೆಂಡ್ ತಂಡವು ಮೊದಲ ಬಾರಿಗೆ ಒಂದು ICC ಪಂದ್ಯಾವಳಿಯಲ್ಲಿ ಜಯಗಳಿಸಿದ ಸಾಧನೆ ಮಾಡಿತ್ತು.

3) 2021 ರ  ಓವಲ್ ಟೆಸ್ಟ್ (ಇಂಗ್ಲೆಂಡ್)
1971 ರ ನಂತರದಲ್ಲಿ ಭಾರತವು ಓವಲ್ ನಲ್ಲಿ ಯಾವುದೇ ಟೆಸ್ಟ್ ಪಂದ್ಯವನ್ನು ಗೆದ್ದಿರಲಿಲ್ಲ, ಆದರೆ 2021 ರ ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 191ಕ್ಕೆ ಆಲ್-ಔಟ್ ಅದ ಭಾರತ ತಂಡವು ಎರಡನೇ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ಅವರ  127 ಹಾಗೂ ರಿಷಿಬ್ ಪಂತ್ ರ 50 ಮತ್ತು ಶಾರ್ದುಲ್ ಠಾಕೂರ್ ರ 50 ಯ ಸಹಾಯದಿಂದ ಈ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು.

4) T20I ವಿಶ್ವಕಪ್ ಪಂದ್ಯ
24, ಅಕ್ಟೋಬರ್ 2021 ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ವಿರುದ್ಧ ಸೋಲುವ ಮೂಲಕ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು.

5) ವಿರಾಟ್ ಕೊಹ್ಲಿ ಏಕದಿನ ಹಾಗೂ T20 ತಂಡದ ನಾಯಕತ್ವದಿಂದ ಕೆಳಗಿಳಿದಿರುವುದು.
2021 ರ ವಿಶ್ವಕಪ್ ಪಂದ್ಯಾವಳಿಯ ನಂತರದಲ್ಲಿ ವಿರಾಟ್ ಕೊಹ್ಲಿ ಅವರು ಏಕದಿನ ಹಾಗೂ T20I ತಂಡಗಳ ನಾಯಕತ್ವ ತ್ಯೇಜಿಸಿ ಕೇವಲ ಆಟಗಾರನಾಗಿ ಆಡುವ ನಿರ್ಧಾರವನ್ನು ತೆಗೆದುಕೊಂಡರು, ಜೊತೆಗೆ ಐಪಿಎಲ್ ನಲ್ಲಿಯೂ RCB ತಂಡದ ನಾಯಕತ್ವ ತ್ಯೇಜಿಸುವುದಾಗಿ ಹೇಳಿದ್ದಾರೆ. ಇದು ವಿರಾಟ್ ಕೊಹ್ಲಿಯವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು.



ಕಾಮೆಂಟ್‌ಗಳು