ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

ಪ್ರೊ ಕಬಡ್ಡಿ ಸೀಸನ್ 8ರ ಟಾಪ್ 5 'Raider Combinations'

ಪ್ರೊ ಕಬಡ್ಡಿ ಸೀಸನ್ 8 ಡಿಸೆಂಬರ್ 22 ರಿಂದ ಪ್ರಾರಂಭವಾಗಲಿದೆ, ಪ್ರತಿಯೊಂದು ತಂಡವು ತನ್ನ ಉತ್ತಮ 7 ಆಟಗಾರರನ್ನು ಕಂಡುಕೊಳ್ಳಲು ಅಭ್ಯಾಸವನ್ನು ಈಗಾಗಲೇ ಆರಂಭಿಸಿವೆ. ಈ ಸಲ ಪ್ರೊ ಕಬಡ್ಡಿಯಲ್ಲಿ ತಂಡಗಳು ಬದಲಾವಣೆ ಆಗಿರುವದರಿಂದ ಯಾವ ತಂಡವು ಕಪ್ ಗೆಲ್ಲಲಿದೆ ಎನ್ನುವ ಕುತೂಹಲ ಉಂಟಾಗಿದೆ. ಅಷ್ಟೇ ಅಲ್ಲದೆ ಕರೋನಾ ಪೆಂಡಾಮಿಕ್ ಕಾರಣದಿಂದ ಕಳೆದ  ಎರಡು ವರ್ಷಗಳಿಂದ ಪ್ರೊ ಕಬಡ್ಡಿ ಪಂದ್ಯಾವಳಿಗಳು ನಡೆದಿಲ್ಲ.

ಭಾರತದಲ್ಲಿ ಅತೀ ಹೆಚ್ಚು ಖ್ಯಾತಿ ಹೊಂದಿರುವ ಆಟಗಳು ಅಂದರೆ ಕ್ರಿಕೆಟ್ ಮತ್ತು ಕಬಡ್ಡಿ, ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ ಯಾವ ರೀತಿ ಮನೋರಂಜನೆ ಉಂಟುಮಾಡುತ್ತದೆಯೋ ಅದೇ ರೀತಿ ಕಬಡ್ಡಿ ಪ್ರೇಮಿಗಳಿಗೆ ಪ್ರೊ ಕಬಡ್ಡಿ ಒಂದು ಹಬ್ಬವಾಗಿದೆ.

ಪ್ರೊ ಕಬಡ್ಡಿ 8ನೇ ಸೀಸನ್ ನ 5ಪ್ರಮುಖ ರೈಡಿಂಗ್ ಕಾಂಬಿನೇಶನ್ ಇಲ್ಲಿವೆ.

5) ಸಿದ್ದಾರ್ಥ್ ದೇಸಾಯಿ ಮತ್ತು ರೋಹಿತ್ ಕುಮಾರ್ (ತೆಲಗು ಟೈಟನ್ಸ್ )

ಕಳೆದ ಸೀಸನ್ ನ ತಮ್ಮ ಅತ್ಯುತ್ತಮ ಆಟಗಾರ 'ಬಾಹುಬಲಿ 'ಖ್ಯಾತಿಯ ಸಿದ್ದಾರ್ಥ್ ದೇಸಾಯಿ ಅವರನ್ನು ತೆಲಗು ಟೈಟನ್ಸ್ ತಂಡವು ಈ ಬಾರಿಯ ಒಕ್ಷನ್ನಲ್ಲಿ ಉಳಿಸಿಕೊಂಡಿದೆ. ಜೊತೆಗೆ ಅನುಭವಿ ಆಟಗಾರ ಹಾಗೂ ಚಾಣಕ್ಷ ನಾಯಕ ರೋಹಿತ್ ಕುಮಾರ್ ಅವರನ್ನು ತಂಡದಲ್ಲಿ  ಹೊಂದಿರುವದು ತೆಲಗು ತಂಡಕ್ಕೆ ಬಲವನ್ನು ತುಂಬಿದೆ.

4) ನಿತಿನ್ ತೊಮರ್ ಮತ್ತು ರಾಹುಲ್ ಚೌದರಿ ( ಪುಣೆರಿ ಪಲ್ಟಾನ್ಸ್ )

ದಿ ಶೋಮ್ಯಾನ್ ಖ್ಯಾತಿಯ ರಾಹುಲ್ ಚೌದರಿ ಅವರನ್ನು ಪುಣೆರಿ ಪಲ್ಟಾನ್ಸ್ ತಂಡವು ಈ ಭಾರಿಯ ಓಕ್ಷನ್ ನಲ್ಲಿ ಪಡೆದುಕೊಂಡಿತು. ಜೊತೆಗೆ ಕಳೆದ್ ಸೀಸನ್ ನಲ್ಲಿ ಪುಣೆರಿ ಪಲ್ಟಾನ್ಸ್ ತಂಡದ ನೆಚ್ಚಿನ ಆಟಗಾರ ನಿತಿನ್ ತೊಮರ್ ಇರುವುದು ಎದುರಾಳಿಗಳಲ್ಲಿ ನಡುಕ ಹುಟ್ಟಿಸಬಲ್ಲದು. ಅಲ್ಲದೆ ಸ್ಥಳೀಯ ಪಂದ್ಯಾವಳಿಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಇಬ್ಬರು ಆಟಗಾರರು ಒಂದೇ ತಂಡದಲ್ಲಿ ಆಡಿರುವುದು ತೆಲಗು ತಂಡಕ್ಕೆ ವರಧಾನವಾಗಲಿದೆ.

3) ಪರದೀಪ್ ನರ್ವಾಲ್ ಮತ್ತು ಶ್ರೀಕಾಂತ್ ಜಾಧವ (ಯುಪಿ ಯೋದ್ಧ )

ಪ್ರೊ ಕಬಡ್ಡಿಯ ಅತ್ಯಂತ ಯಶಸ್ವಿ ಆಟಗಾರ ಅಷ್ಟೇ ಅಲ್ಲದೆ ಅತ್ಯಂತ ಯಶಸ್ವಿ ನಾಯಕ 'ದಿ ರೆಕಾರ್ಡ್ ಬ್ರೇಕರ್ ' ಪರದೀಪ್ ನರ್ವಾಲ್ ಅವರನ್ನು ಈ ಬಾರಿಯ ಒಕ್ಷನ್ ನಲ್ಲಿ ಯುಪಿ ಯೋದ್ಧ ತಂಡವು ಕೊಂದುಕೊಂಡಿದೆ. ಜೊತೆಗೆ ಕಳೆದ ಸೀಸನ್ ನ ಯುಪಿ ಯೋದ್ಧ ತಂಡದ ಯಶಸ್ವಿ ದಾಳಿಗಾರ ಶ್ರೀಕಾಂತ್ ಜಾಧವ ತಂಡದಲ್ಲಿರುವುದು ಯುಪಿ ಯೋದ್ಧ ತಂಡವು ತಮ್ಮ ಮೊದಲ ಕಪ್ ಗೆಲ್ಲುವ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

2) ನವೀನ್ ಕುಮಾರ್ ಮತ್ತು ಅಜಯ್ ಠಾಕುರ್ ( ದಬಾಂಗ್ ದಿಲ್ಲಿ ಕೆ. ಸಿ )

ದಬಾಂಗ್ ದಿಲ್ಲಿ ತಂಡವು ಈ ಬಾರಿ ಕುತೂಹಲಕಾರಿ ಕಾಂಬಿನೇಶನ್ನೊಂದಿಗೆ ತಂಡವನ್ನು ಆಯ್ಕೆ ಮಾಡಿಕೊಂಡಿದೆ. ಒಂದೆಡೆ 'ಯಂಗ್ ಸೇನ್ಸೆಷನ್' ನವೀನ್ ಕುಮಾರ್ ಆದರೆ ಇನ್ನೊಂದೆಡೆ ಅತ್ಯಂತ ಅನುಭವಿ ಅಜಯ್ ಠಾಕುರ್. ಕಳೆದ ಬಾರಿಯ most valuable ಆಟಗಾರ ನವೀನ್ ಕುಮಾರ್ ಹಾಗೂ ಅನುಭವಿ ಅಜಯ್ ಠಾಕುರ್ ಇರುವುದು ತಂಡಕ್ಕೆ ಶಕ್ತಿಯಾಗಿದೆ.

1) ಪವನ್ ಸೆರಾವತ್ ಮತ್ತು ಚಂದ್ರನ್ ರಂಜಿತ್ ( ಬೆಂಗಳೂರು ಬುಲ್ಸ್ )

'ದಿ ಹೈ ಪ್ಲೇಯರ್ ' ಪವನ್ ಸೆರಾವತ್ ಈ ಹೆಸರು ಒಂದೇ ಸಾಕು ಎದುರಾಳಿ ಅಂಕಣದಲ್ಲಿ ನಡುಕ ಹುಟ್ಟಿಸುತ್ತೆ ಜೊತೆಗೆ ಈ ಬಾರಿ ಚಂದ್ರನ್ ರಂಜಿತ್ ಅವರು ತಂಡದಲ್ಲಿರುವುದು ಬೆಂಗಳೂರು ಬುಲ್ಸ್ ತಂಡಕ್ಕೆ ಬಲವನ್ನು ತಂದಿದೆ. ಪ್ರೊ ಕಬಡ್ಡಿ ಸೀಸನ್ 6ರಲ್ಲಿ ಏಕಾಂಗಿಯಾಗಿ ತಂಡಕ್ಕೆ ಕಪ್ ತಂದುಕೊಡುವಲ್ಲಿ ಯಶಸ್ವಿಯಾಗಿದ್ದ ಪವನ್ ಸೇರಾವತ ಅವರಿಗೆ ಈ ಬಾರಿ ಚಂದ್ರನ್ ರಂಜಿತ್ ಮತ್ತು ದೀಪಕ್ ನರ್ವಾಲ್ ಅವರ ಸಹಾಯ ದೊರೆಯಲಿದೇ. ಇದೆ ಕಾರಣಕ್ಕೆ ಬೆಂಗಳೂರು ಬುಲ್ಸ್ ತಂಡವು ಸೀಸನ್ 8ರ ಫೆವರೇಟ್ ತಂಡವಾಗಿದೆ.



ಕಾಮೆಂಟ್‌ಗಳು