ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ಏಕದಿನ ತಂಡಕ್ಕೆ KL ರಾಹುಲ್ ನಾಯಕ?

ಸೌತ್ ಆಫ್ರಿಕಾ ಪ್ರವಾಸದ ಜನೆವರಿ 19ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಬೇಕಾಗಿದೆ ಆದರೆ ರೋಹಿತ್ ಶರ್ಮಾ ಅವರು ಹ್ಯಾಮ್-ಸ್ಟ್ರೀoಗ್ ಇಂಜ್ಯೂರಿ ಕಾರಣದಿಂದ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದಾರೆ. ಹ್ಯಾಮ್-ಸ್ಟ್ರೀoಗ್ ಇಂಜ್ಯೂರಿಯಿಂದ ಸುಧಾರಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಹಾಗಾಗಿ ಬಿಸಿಸಿಐ ಇನ್ನಷ್ಟು ದಿನ ಕಾಯ್ದು ರೋಹಿತ್ ಶರ್ಮಾ ಅವರು ಸಂಪೂರ್ಣವಾಗಿ ಗಾಯದಿಂದ ಗುಣಮುಖರಾದರೆ ಅವರ ಹೆಸರನ್ನು ಸೌತ್ ಆಫ್ರಿಕಾ ಏಕದಿನ ಸರಣಿಗೆ ನಾಯಕನನ್ನಾಗಿ ಪ್ರಕಟಿಸಲಿದೆ.

ಒಂದು ವೇಳೆ ರೋಹಿತ್ ಶರ್ಮಾ ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗದಿದ್ದರೆ KL ರಾಹುಲ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಲು ಬಿಸಿಸಿಐ ಸಿದ್ದವಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ.

ತಂಡದಲ್ಲಿ ವಿರಾಟ್ ಕೊಹ್ಲಿ ಇದ್ದರು ಸಹ ಮತ್ತೊಮ್ಮೆ ಅವರಿಗೆ ನಾಯಕತ್ವ ಕೊಡುವ ನಿರೀಕ್ಷೆಗಳು ವಿರಳವಾಗಿವೆ. ವೈಟ್ ಬಾಲ್ ಕ್ರಿಕೆಟ್ ನ ನಾಯಕತ್ವಕ್ಕೆ ಕೊಹ್ಲಿ ಅವರು ರಾಜೀನಾಮೆ ನೀಡಿದ ನಂತರ ಕೇವಲ ಟೆಸ್ಟ್ ತಂಡಕ್ಕೆ ನಾಯಕನಾಗಿ ಮುಂದುವರಿಯಲು ಕೊಹ್ಲಿ ಅವರು ನಿರ್ಧಾರಿಸಿದ್ದಾರೆ ಆದ್ದರಿಂದ ಮುಂಬರುವ ಸೌತ್ ಆಫ್ರಿಕಾ ಸರಣಿಯಲ್ಲಿ, ಒಂದು ವೇಳೆ ರೋಹಿತ್ ಶರ್ಮಾ ಅವರು ಅಲಭ್ಯವಾದರೆ KL ರಾಹುಲ್ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತವಾಗಿದೆ.

ಸದ್ಯ ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಟೆಸ್ಟ್ ತಂಡದ ಉಪನಾಯಕನಾಗಿರುವ KL ರಾಹುಲ್ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸುವ ಮೂಲಕ ತಾನು ಆಡಿದ ಎಲ್ಲಾ ಖಂಡಗಳಲ್ಲಿಯೂ ಶತಕಗಳಿಸಿದ ಭಾರತದ ಎರಡನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಸುನಿಲ್ ಗವಾಸ್ಕರ್ ಅವರ ನಂತರ ಈ ದಾಖಲೆ ಮಾಡಿದ 2ನೇ ಆಟಗಾರ KL ರಾಹುಲ್, ಜೊತೆಗೆ ಪ್ರಸ್ತುತ ಆಟಗಾರರಲ್ಲಿ ಏಷ್ಯಾದ ಹೊರಗೆ ಅತಿಹೆಚ್ಚು ಶತಕಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ
.
ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ ಅನುಭವವಿರುವ KL ರಾಹುಲ್ ಭಾರತ ತಂಡವನ್ನು ಉತ್ತಮವಾಗಿ ಮುನ್ನಡೆಸಬಲ್ಲರು, ಜೊತೆಗೆ ಇತರ ಆಟಗಾರರಂತೆ ತಂಡವನ್ನು ಮುನ್ನಡೆಸುವ ಭರದಲ್ಲಿ ತಮ್ಮ ವ್ಯಯಕ್ತಿಕ ಆಟದ ಮೇಲೆ ಯಾವುದೇ ಒತ್ತಡ ಹೇರದೆ ಅತ್ಯುತ್ತಮವಾಗಿ ಬ್ಯಾಟಿಂಗ ಮಾಡಬಲ್ಲ ಏಕೈಕ ಆಟಗಾರ ಎನ್ನಬಹುದು.

ಐಪಿಎಲ್ ನಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸುವ ಜೊತೆಗೆ ತಂಡದಲ್ಲಿ ವ್ಯಯಕ್ತಿಕವಾಗಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ KL ರಾಹುಲ್, ತಂಡದ ನಾಯಕತ್ವದ ಜೊತೆಗೆ ಆರಂಭಕನಾಗಿ ತಂಡಕ್ಕೆ ಅತ್ಯುತ್ತಮ ಆರಂಭ ಕೊಡುವಂತ ಆಟಗಾರ. ಅಲ್ಲದೆ ತಂಡದ ಇತರ ಆಟಗಾರರೊಂದಿಗೆ ಶಾಂತವಾಗಿ ವರ್ತಿಸುವ KL ರಾಹುಲ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲರು.

ಪ್ರಸ್ತುತ ಉಪನಾಯಕನಾಗಿರುವ KL ರಾಹುಲ್ ಅವರದ್ದು ಶಾಂತ ಸ್ವಭಾವದ ವ್ಯಕ್ತಿತ್ವ, ಜೊತೆಗೆ ತಂಡದ ಯಾವುದೇ ಸ್ಥಾನದಲ್ಲಿ, ವಿಶ್ವದ ಯಾವುದೇ ಮೈದಾನದಲ್ಲಿ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸುವ KL ರಾಹುಲ್ ಅವರಿಗೆ ಒಂದು ವೇಳೆ ಏಕದಿನ ತಂಡದ ನಾಯಕತ್ವ ದೊರಕಿದ್ದಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಯಾವುದೇ ಸಂಶಯವಿಲ್ಲ.



ಕಾಮೆಂಟ್‌ಗಳು