- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಟೀಮ್ ಇಂಡಿಯಾದ ಮೂರು ಫಾರ್ಮ್ಯಾಟ್ ನ ಓಪನರ್ ಆದ ಕೆ ಎಲ್ ರಾಹುಲ್ ಅವರು ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 123 ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 23 ರನ್ ಗಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸೌತ್ ಆಫ್ರಿಕಾವನ್ನು ಸೆಂಚುರಿಯನ್ ನಲ್ಲಿ ಸೋಲಿಸುವ ಮೂಲಕ ಸೌತ್ ಆಫ್ರಿಕಾದ ಸೆಂಚುರಿಯನ್ ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಸೋಲಿಸಿದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಯಿತು.
2021ರ ಸಾಲಿನಲ್ಲಿ ಭಾರತ ತಂಡವು ಹಲವು ಟೀಮ್ ಗಳನ್ನು ಅವರ ತವರು ನೆಲದಲ್ಲಿಯೇ ಸೋಲಿಸುವ ಮೂಲಕ ಹಲವಾರು ದಾಖಲೆಗಳನ್ನು ನಿರ್ಮಿಸಿದೆ. ಉದಾಹರಣೆಗೆ, ಆಸ್ಟ್ರೇಲಿಯಾದ ಬ್ರಿಸ್ಬನ್ ಟೆಸ್ಟ್ ಪಂದ್ಯ, ಇಂಗ್ಲೆಂಡ್ ನಲ್ಲಿ ಓವಲ್ ಟೆಸ್ಟ್ ಪಂದ್ಯ ಮತ್ತು ಸೌತ್ ಆಫ್ರಿಕಾ ವಿರುದ್ಧದ ಸೆಂಚುರಿಯನ್ ಟೆಸ್ಟ್ ಪಂದ್ಯ.
ಭಾರತ ತಂಡವು 2021ರ ಸಾಲಿನಲ್ಲಿ ಆಡಿದ ಎಲ್ಲ ಟೆಸ್ಟ್ ಸರಣಿಗಳನ್ನು ಜಯಿಸಿದೆ. ಈ ಪಂದ್ಯಗಳಲ್ಲಾಡಿದ ಕೆ ಎಲ್ ರಾಹುಲ್ ಅವರು ತಂಡಕ್ಕೆ ಅತ್ಯುತ್ತಮ ಆರಂಭವನ್ನು ನೀಡಿದ್ದಾರೆ. ಜೊತೆಗೆ ಆಡಿದ ಎಲ್ಲಾ ಖಂಡಗಳಲ್ಲಿಯೂ ಶತಕಗಳಿಸಿದ ಭಾರತದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ ಇಂಟರ್ವ್ಯೂನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಕೆ ಎಲ್ ರಾಹುಲ್ ಟೆಸ್ಟ್ ಪಂದ್ಯಗಳಲ್ಲಿ ತಮ್ಮ ಸಕ್ಸಸ್ ನ ರಹಸ್ಯ ಬಿಚ್ಚಿಟ್ಟರು.
"ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲು ಪ್ರಮುಖವಾಗಿ ತಾಳ್ಮೆ ಅಗತ್ಯವಾಗಿದೆ. ತಾಳ್ಮೆಯಿಂದ ಯಾವುದೇ ಅವಸರವಿಲ್ಲದೆ ನಿಧಾನವಾಗಿ ಇನ್ನಿಂಗ್ಸ್ ಆರಂಭಿಸುವುದು ಟೆಸ್ಟ್ ಪಂದ್ಯದಲ್ಲಿ ಸಕ್ಸಸ್ ಕಾಣಲು ಪ್ರಮುಖವಾದ ಅಂಶವಾಗಿದೆ. ಜೊತೆಗೆ ಸ್ಟಂಪ್ ನಿಂದ ಹೊರಗೆ ಬರುವ ಬೌಲ್ ಗಳನ್ನು ಬಿಡುವುದು ಕೂಡ ಟೆಸ್ಟ್ ಬ್ಯಾಟಿಂಗ್ ನಲ್ಲಿ ಯಶಸ್ವಿಯಾಗಲು ಪ್ರಮುಖವಾಗಿದೆ" ಎಂದರು.
" ಟೆಸ್ಟ್ ಪಂದ್ಯದಲ್ಲಿ ಮುಖ್ಯವಾಗಿ ನೀವು ಎಷ್ಟು ರನ್ ಗಳಿಸಿದ್ದೀರಿ ಎನ್ನುವುದಕ್ಕಿಂತ ಎಷ್ಟು ಸಮಯ ನೀವು ಕ್ರೀಸ್ ನಲ್ಲಿ ಆಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ನೀವು ಹೆಚ್ಚು ಸಮಯ ಆಡಿದಷ್ಟು ನಿಧಾನವಾಗಿ ನಿಮ್ಮ ರನ್ ತಾನಾಗಿಯೇ ಹೆಚ್ಚಾಗುತ್ತದೆ ಅಲ್ಲದೆ ಪ್ರಮುಖವಾಗಿ ಸ್ಟಂಪ್ ನಿಂದ ಹೊರಗೆ ಬರುವ ಬಾಲ್ ಗಳನ್ನು ಬಿಡುವುದು ಅತ್ಯಂತ ಪ್ರಮುಖವಾಗಿದೆ" ಎಂದರು.
" ಯಾವುದೇ ಟೆಸ್ಟ್ ಪಂದ್ಯವಾಗಿರಲು, ಯಾವುದೇ ತರಹದ ಪಿಚ್ ಇದ್ದರು ಮೊದಲಿಗೆ ತಾಳ್ಮೆಯಿಂದ ಆಡಬೇಕಾಗುತ್ತದೆ, ಹೊರಬರುವ ಬಾಲ್ ಗಳನ್ನು ಬಿಡುವುದನ್ನು ನೀವು ಎಷ್ಟು ಎಂಜಾಯ್ ಮಾಡುತ್ತಿರೋ ಅಷ್ಟು ಹೊತ್ತು ನೀವು ಕ್ರೀಸ್ ನಲ್ಲಿ ಆಡಲು ಅವಕಾಶ ಸಿಗುತ್ತದೆ. ಹಾಗಾಗಿ ನಾನು ಸ್ಟಂಪ್ ನಿಂದ್ ಹೊರಬರುವ ಯಾವ ಬಾಲ್ ಗಳನ್ನು ಆಡಲು ಪ್ರಯತ್ನಿಸುವುದಿಲ್ಲ ಮತ್ತು ಸಾಧ್ಯವಾದಷ್ಟು ಡಿಫೆಂನ್ಸಿವ್ ಆಗಿ ಆಡಲು ಯತ್ನಿಸುತ್ತೇನೆ." ಎಂದು ಹೇಳಿದರು.
ಕೆ ಎಲ್ ರಾಹುಲ್ ಅವರ ಈ ರೀತಿಯ ಆಟದಿಂದಲೇ ಅವರು ಭಾರತದ ಮನೆಮಾತಾಗಿದ್ದಾರೆ. ವಿಶ್ವದ ಯಾವುದೇ ಮೈದಾನವಿರಲಿ, ಯಾವುದೇ ರೀತಿಯ ತಂಡವಿರಲಿ, ಯಾವುದೇ ಪರಿಸ್ಥಿತಿ ಇರಲಿ ಎಲ್ಲಾ ಪರಿಸ್ಥಿತಿಗಳಲ್ಲು ತಂಡದ ಅವಶ್ಯಕತೆಗಳಿಗೆ ತಕ್ಕಂತೆ ಆಡುವ ಕೆ ಎಲ್ ರಾಹುಲ್ ಅವರು ಟೆಸ್ಟ್ ಪಂದ್ಯಗಳಲ್ಲಿ ಎಷ್ಟು ತಾಳ್ಮೆಯಿಂದ ಆಡುತ್ತಾರೋ, T20 ಪಂದ್ಯಗಳಲ್ಲಿ ಅಷ್ಟೇ ಅಕ್ರಮನಕಾರಿಯಾಗಿ ಬ್ಯಾಟ್ ಬಿಸುತ್ತಾರೆ.
ಈ ಕಾರಣಗಳಿಂದಗಿಯೇ ಕೆ ಎಲ್ ರಾಹುಲ್ ಅವರನ್ನು ಪ್ರಸ್ತುತ ಭಾರತ ಕ್ರಿಕೆಟ್ ತಂಡದಲ್ಲಿರುವ ಮೋಸ್ಟ ವರ್ಸೆಟೇಲ್ ಬ್ಯಾಟ್ಸಮನ್ ಎಂದು ಹೇಳಲಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ