ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಪಂದ್ಯದ ಮೊದಲ ಟೆಸ್ಟ್ ನ ಮೊದಲ ದಿನಡಾಟದಲ್ಲಿ ಭಾರತದ ದಾಖಲೆಗಳು

ಸೌತ್ ಆಫ್ರಿಕಾದ ಸೆಂಚುರಿನ್ ನಲ್ಲಿ ನಡೆದಿರುವ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನಡಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 272 ರನ್ ಕಲೆಹಾಕಿದೆ. ಕೆ ಎಲ್ ರಾಹುಲ್ ಹಾಗೂ ಮಾಯಾಂಕ್ ಆಗರ್ವಾಲ್ ಪ್ರಾರಂಭಿಕ ಜೋಡಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಭಾರತವು ಮೊದಲ ವಿಕೆಟ್ ನಷ್ಟಕ್ಕೆ 117 ರನ್ ಕಲೆಹಾಕಿತು. ಮಾಯಾಂಕ್ ಆಗರ್ವಾಲ್ ಅವರು 60 ರನ್ ಗಳಿಸಿದ್ದಾಗ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು.

ನಾಲ್ಕನೇ ಆಟಗಾರನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಯವರು ಕೆ ಎಲ್ ರಾಹುಲ್ ಅವರ ಜೊತೆಗೂಡಿ 79 ರನ್ ಕಲೆಹಾಕಿದ್ದಾಗ 35 ರನ್ ಗಳಿಸಿ ಲುಂಗಿ ಏನ್ ಗಿಡಿ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಯನ್ ಗೆ ನಡೆದರು, ನಂತರದಲ್ಲಿ ಜೊತೆಗೂಡಿದ ಅಜಿಂಕ್ಯ್ ರಹಾನೇ ಹಾಗೂ ಕೆ ಎಲ್ ರಾಹುಲ್ ಅವರು ಮೊದಲ ದಿನಡಾಟದ ಅಂತ್ಯಕ್ಕೆ ಭಾರತ ತಂಡದ ಸ್ಕೋರ್ ಅನ್ನು 272/3 ಕೊಂಡೋಯ್ದರೂ.

ಭಾರತ ತಂಡವು ಮೊದಲ ದಿನಡಾಟದ ಅಂತ್ಯಕ್ಕೆ 272/3 ರನ್ ಗಳಿಸುವ ಮೂಲಕ ಏಷ್ಯಾದ ಹೊರಗೆ ಭಾರತ ತಂಡ ಮೊದಲ ದಿನಡಾಟದಲ್ಲಿ 3ನೇ ಅತಿಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿತು.

ಮೊದಲ ದಿನಡಾಟದ ಪ್ರಮುಖ ಆಟಗಾರರು

1) ಕೆ ಎಲ್ ರಾಹುಲ್

ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರನಾದ ಕೆ ಎಲ್ ರಾಹುಲ್ 248 ಎಸೆತಗಳಲ್ಲಿ 16 ಫೋರ್ ಹಾಗೂ 1 ಸಿಕ್ಸರ್ ನೊಂದಿಗೆ 49.19 ರ ಸ್ಟ್ರೈಕ್-ರೇಟ್ ನೊಂದಿಗೆ 122 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ . ಏಷ್ಯಾದ ಹೊರಗೆ ಮೊದಲ ದಿನಡಾಟದಲ್ಲಿ ಭಾರತ ತಂಡದ ಪರ 100 ಕ್ಕೂ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ಎಂಬ ದಾಖಲೆ ನಿರ್ಮಿಸಿದರು.

2) ಮಾಯಾಂಕ್ ಆಗರ್ವಾಲ್

ಭಾರತ ಟೆಸ್ಟ್ ತಂಡದ ಆರಂಭಿಕ ಆಟಗಾರನಾದ ಕರ್ನಾಟಕದ ಮಾಯಾಂಕ್ ಆಗರ್ವಾಲ್ ಅವರು ಕೆ ಎಲ್ ರಾಹುಲ್ ಅವರೊಂದಿಗೆ ಸೇರಿ ಇನ್ನಿಂಗ್ಸ್ ಆರಂಭಿಸಿದ ಈ ಜೋಡಿ ಮೊದಲ ವಿಕೆಟ್ ನಷ್ಟಕ್ಕೆ 117 ರನ್ ಕಲೆ ಹಾಕಿತು. ಜೊತೆಗೆ ಮಾಯಾಂಕ್ ಆಗರ್ವಾಲ್ ಅವರು 123 ಎಸೆತಗಳಲ್ಲಿ 9 ಫೋರ್ ಗಳೊಂದಿಗೆ 60 ರನ್ ಗಳಿಸಿ ಲುಂಗಿ ಏನ್ ಗಿಡಿ ಅವರಿಗೆ ವಿಕೆಟ್ ಒಪ್ಪಿಸಿದರು.

3) ವಿರಾಟ್ ಕೊಹ್ಲಿ

ಭಾರತ ಟೆಸ್ಟ್ ತಂಡದ ನಾಯಕನದ ವಿರಾಟ್ ಕೊಹ್ಲಿ ಮೂರನೇ ವಿಕೆಟ್ ನಷ್ಟಕ್ಕೆ ಕೆ ಎಲ್ ರಾಹುಲ್ ಅವರ ಜೊತೆಗೂಡಿ ವ್ಯಯಕ್ತಿಕ 94 ಎಸೆತಗಳಲ್ಲಿ 34 ರನ್ ಗಳಿಸಿ, ತಂಡದ ಸ್ಕೋರ್ 199ಕ್ಕೆ ಹೆಚ್ಚಿಸುವಲ್ಲಿ ಕೆ ಎಲ್ ರಾಹುಲ್ ಅವರಿಗೆ ಜೊತೆಯಾದರೂ.

4) ಅಜಿಂಕ್ಯ್ ರಹಾನೇ

5ನೇ ಕ್ರಮಂಕದಲ್ಲಿ ಕಣಕ್ಕಿಳಿದ ಅಜಿಂಕ್ಯ್ ರಹಾನೇ ಅವರು ಕೆ ಎಲ್ ರಾಹುಲ್ ಅವರ ಜೊತೆಗೂಡಿ 73 ರನ್ ಕಲೆಹಾಕಿದರು. ವ್ಯಯಕ್ತಿಕವಾಗಿ 81 ಎಸೆತಗಳಲ್ಲಿ 40 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದಿದ್ದಾರೆ.



ಕಾಮೆಂಟ್‌ಗಳು