- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಭಾರತೀಯ ಕ್ರಿಕೆಟ್ ಮಂಡಳಿಯು(BCCI) ಪ್ರತಿ ವರ್ಷ ಗ್ರೇಡಿಂಗ್ ಆಧಾರದ ಮೇಲೆ 28 ಆಟಗಾರರನ್ನು ಆಯ್ಕೆ ಮಾಡುತ್ತದೆ ಮತ್ತು ಅವರ ಸಂಬಳವನ್ನು ಪ್ರಕಟಿಸುತ್ತದೆ.
ಪ್ರತಿ ವರ್ಷ ಆಟಗಾರರನ್ನು ಅವರ ಆಟದ ಪ್ರದರ್ಶನದ ಆಧಾರದ ಮೇಲೆ A+, A, B ಮತ್ತು C ಗ್ರೇಡಿಂಗ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಲ್ಲದೆ ಆಟಗಾರರು ಜಾಹಿರಾತು, ಬ್ರಾಂಡ್ ರಾಯಭಾರಿ, ಸ್ಥಳೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಹಾಗೂ ತಮ್ಮದೇ ಆದ ಬ್ರಾಂಡ್ ಗಳ ಮೂಲಕ ಹಣ ಗಳಿಸುತ್ತಾರೆ.
ಪ್ರತಿ ವರ್ಷವೂ ಲಿಸ್ಟ್ A+ ನ ಆಟಗಾರರು 7 ಕೋಟಿ, ಲಿಸ್ಟ್ A ನ ಆಟಗಾರರು 5 ಕೋಟಿ, ಲಿಸ್ಟ್ B ಆಟಗಾರರು 3 ಕೋಟಿ ಹಾಗೂ, ಲಿಸ್ಟ್ C ಆಟಗಾರರು 1 ಕೋಟಿ ಸಂಬಳ ಪಡೆಯುತ್ತಾರೆ.
ಗ್ರೇಡ್ A+ :
ಈ ಆಟಗಾರರು ಪ್ರತಿ ವರ್ಷ 7ಕೋಟಿ ಸಂಬಳ ಪಡೆಯುತ್ತಾರೆ, ಈ ಆಟಗಾರರು
• ವಿರಾಟ್ ಕೊಹ್ಲಿ
• ರೋಹಿತ್ ಶರ್ಮಾ
• ಜಸ್ಪ್ರೀತ್ ಬುಮ್ರಾ
ಗ್ರೇಡ್ A :
ಈ ಆಟಗಾರರು ಪ್ರತಿ ವರ್ಷ 5 ಕೋಟಿ ಸಂಬಳ ಪಡೆಯುತ್ತಾರೆ, ಈ ಆಟಗಾರರು
• KL ರಾಹುಲ್
• ರಿಷಬ್ ಪಂತ್
• ರವೀಂದ್ರ ಜಡೇಜಾ
• ರವಿಚಂದ್ರನ್ ಅಶ್ವಿನ್
• ಅಜಿಂಕ್ಯ್ ರಹಾನೇ
• ಹಾರ್ದಿಕ್ ಪಾಂಡ್ಯ
• ಚೇತೆಶ್ವರ್ ಪೂಜಾರ
• ಇಶಾಂತ್ ಶರ್ಮಾ
• ಮಹಮ್ಮದ್ ಶಮಿ
• ಶಿಖರ ಧವನ್
ಗ್ರೇಡ್ B :
ಈ ಆಟಗಾರರು ಪ್ರತಿ ವರ್ಷ 3ಕೋಟಿ ಸಂಬಳ ಪಡೆಯುತ್ತಾರೆ, ಈ ಆಟಗಾರರು,
• ಭುವನೇಶ್ವರ್ ಕುಮಾರ್
• ಮಾಯಾಂಕ್ ಅಗರ್ವಾಲ್
• ಶಾರ್ದುಲ್ ಠಾಕೂರ್
• ಉಮೇಶ್ ಯಾದವ್
• ವೃದ್ಧಿಮಾನ್ ಸಹಾ
ಗ್ರೇಡ್ C :
ಈ ಆಟಗಾರರು ಪ್ರತಿ ವರ್ಷ 1 ಕೋಟಿ ರೂಪಾಯಿ ಸಂಬಳ ಪಡೆಯುತ್ತಾರೆ. ಈ ಆಟಗಾರರು,
• ಅಕ್ಷರ್ ಪಟೇಲ್
• ದೀಪಕ್ ಚಹರ್
• ಹನುಮ ವಿಹಾರಿ
• ಕುಲದೀಪ್ ಯಾದವ್
• ಮೊಹಮದ್ ಸಿರಾಜ್
• ನವದೀಪ್ ಸೈನಿ
• ಶ್ರೇಯಸ್ ಅಯ್ಯರ್
• ಶುಭಮನ್ ಗಿಲ್
• ವಾಷಿಂಗ್ಟನ್ ಸುಂದರ್
• ಯುಜವೇಂದ್ರ ಚಹಲ
ಈ ಮೇಲಿನ ಎಲ್ಲಾ ಆಟಗಾರರು, ಅವರು ಈ ಪಟ್ಟಿಯಲ್ಲಿ ಆಯ್ಕೆಯಾದ ವರ್ಷದಲ್ಲಿ ಯಾವುದೇ ಪಂದ್ಯವನ್ನು ಆಡಿದರು, ಅಡದಿದ್ದರೂ ತಮಗೆ ಪೂರ್ವಧಾರಿತವಾಗಿ ನಿಗಧಿ ಪಡಿಸಿದ ಸಂಬಳವನ್ನು ಪಡೆಯುತ್ತಾರೆ.
ಇದರ ಜೊತೆಯಲ್ಲಿಯೇ ಈ ಆಟಗಾರರಿಗೆ ಬೋನಸ್ ಸಹ ದೊರೆಯುತ್ತದೆ. ಅವು ಯಾವುವೆಂದರೆ,
• ಆಡುವ 11ರಲ್ಲಿ ಸ್ಥಾನ ಪಡೆದ ಪ್ರತಿ ಆಟಗಾರ ಒಂದು ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ODI ಗೆ 6 ಲಕ್ಷ ಹಾಗೂ T20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಸಂಬಳವನ್ನು ಪಡೆಯುತ್ತಾರೆ.
• ಟೆಸ್ಟ್ ಅಥವಾ ODI ಪಂದ್ಯವೊಂದರಲ್ಲಿ 100 ರನ್ ಗಳಿಸಿದರೆ 5ಲಕ್ಷ ರೂಪಾಯಿ.
• ಟೆಸ್ಟ್ ಪಂದ್ಯವೊಂದರಲ್ಲಿ 200 ರನ್ ಗಳಿಸಿದರೆ 7 ಲಕ್ಷ ರೂಪಾಯಿ.
• ಟೆಸ್ಟ್, ODI ಅಥವಾ T20I ಪಂದ್ಯವೊಂದರಲ್ಲಿ 5 ವಿಕೆಟ್ ಪಡೆದರೆ 5 ಲಕ್ಷ
• ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಪಡೆದ ಆಟಗಾರರು 7 ಲಕ್ಷ ರೂಪಾಯಿಗಳನ್ನು ಬೋನಸ್ ಆಗಿ ಪಡೆಯುತ್ತಾರೆ.
ಹೀಗೆ ಭಾರತೀಯ ಆಟಗಾರರು ಸಂಬಳದ ಜೊತೆಗೆ ಬೋನಸ್ ಸಹ ಪಡೆಯುತ್ತಾರೆ, ಇದೆ ಕಾರಣಕ್ಕಾಗಿಯೇ ಭಾರತೀಯ ಕ್ರಿಕೆಟ್ ಆಟಗಾರರು ಜಗತ್ತಿನ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ