- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಭಾರತೀಯ ತಂಡದ ಕೋಚ್ ಆಗಿರುವ 48 ವರ್ಷ ರಾಹುಲ್ ದ್ರಾವಿಡ್ ಅವರು, ಭಾರತ ತಂಡವು ಸೌತ್ ಆಫ್ರಿಕಾದಲ್ಲಿ ಪಂದ್ಯಗಳನ್ನು ಗೆಲ್ಲಲು ಹೇಗೆ ತಯಾರಿ ನಡೆಸಿದೆ ಮತ್ತು ತಂಡದ ಮುಂದಿನ ಯೋಜನೆಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆದಿರುವ ಪ್ರಶ್ನೆಗೆ ಉತ್ತರಿಸಿದರು.
'ನಾನು ಕೇವಲ ಆಟಗಾರರೊಂದಿಗೆ ಆಟದ ಬಗ್ಗೆ ಮಾತ್ರ ಮಾತುಕತೆ ನಡೆಸಿತ್ತೇನೆ. ತಂಡದ ಆಯ್ಕೆ ಮತ್ತು ನಾಯಕತ್ವದ ವಿಷಯ, ಬಿಸಿಸಿಐ ಹಾಗೂ ತಂಡದ ಆಯ್ಕೆಗಾರರಿಗೆ ಬಿಟ್ಟ ವಿಷಯ' ಎಂದು ಹೇಳಿದರು.
ಬಿಸಿಸಿಐ ತೀರ್ಮಾನದ ಬಗ್ಗೆ ರಾಹುಲ್ ದ್ರಾವಿಡ್
48 ವರ್ಷದ ರಾಹುಲ್ ದ್ರಾವಿಡ್ ಅವರು ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿದ್ದಾರೆ. ಸೌತ್ ಆಫ್ರಿಕಾದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಬಿಸಿಸಿಐನ ಏಕದಿನ ತಂಡದ ನಾಯಕತ್ವದ ಬಗ್ಗೆ ಮಾತನಾಡುತ್ತಾ "ತಂಡದ ಆಯ್ಕೆ ಹಾಗೂ ನಾಯಕತ್ವದ ಆಯ್ಕೆ ಬಿಸಿಸಿಐ ಹಾಗೂ ತಂಡದ ಆಯ್ಕೆಗಾರರಿಗೆ ಬಿಟ್ಟ ವಿಚಾರ, ನಾನು ತಂಡದ ಯಾವುದೇ ಆಯ್ಕೆಗಾರರ ಜೊತೆಯಲ್ಲಿ ಮಾತುಕತೆ ನಡೆಸುವುದಿಲ್ಲ, ನನ್ನ ಮಾತುಕತೆಯೂ ವ್ಯಯಕ್ತಿಕವಾಗಿ ತಂಡದ ಆಟಗಾರರೊಂದಿಗೆ ಮಾತ್ರ."ಎಂದು ಹೇಳಿದರು.
ಬಿಸಿಸಿಐ ತೀರ್ಮಾನದ ಬಗ್ಗೆ ವಿರಾಟ್ ಕೊಹ್ಲಿ
ಡಿಸೆಂಬರ್ 15 ರಂದು ವರದಿಗಾಗರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿಯವರು, " ನಾನು 2021 ರಲ್ಲಿ T20I ವಿಶ್ವಕಪ್ ಪಂದ್ಯಾವಳಿಗಳ ನಂತರ ನಾಯಕತ್ವದಿಂದ ಕೆಳಗಿಳಿಯುವುದಾಗಿ ಬಿಸಿಸಿಐ ಹಾಗೂ ತಂಡದ ಆಯ್ಕೆಗಾರರಿಗೆ ನನ್ನ ತೀರ್ಮಾನವನ್ನು ತಿಳಿಸಿದೆ. ನನ್ನ ತೀರ್ಮಾನವನ್ನು ಬಿಸಿಸಿಐ ಹಾಗೂ ತಂಡದ ಆಯ್ಕೆಗಾರರು ಯಾವುದೇ ವಿರೋಧವಿಲ್ಲದೆ ಒಪ್ಪಿಕೊಂಡರು. ಆದರೆ ಏಕದಿನ ತಂಡದ ನಾಯಕತ್ವದ ಬಗ್ಗೆ ನಾನು ಬಿಟ್ಟುಕೊಡುದಾಗಿ ಯಾರಿಗೂ ಹೇಳಿರಲಿಲ್ಲ, ಆದರೆ ಆಯ್ಕೆಗಾರರು ನನ್ನ ಅಭಿಪ್ರಾಯವನ್ನು ಕೇಳದೆಯೇ ನಾಯಕತ್ವ ಬದಲಾವಣೆಯನ್ನು ಮಾಡಿದ್ದಾರೆ " ಎಂದು ಆರೋಪಿಸಿದರು.
ಬಿಸಿಸಿಐ ತೀರ್ಮಾನದ ಬಗ್ಗೆ ಹಾಗೂ ವಿರಾಟ್ ಕೊಹ್ಲಿ ಅವರಿಗೆ ಸೌರವ್ ಗಂಗೂಲಿ ಉತ್ತರ
ಏತನ್ಮದ್ಯೆ, ANI ಗೆ ಉತ್ತರಸಿದ ಬಿಸಿಸಿಐನ ಅಧ್ಯಕ್ಷರಾದ ಸೌರವ ಗಂಗೂಲಿ " ಬಿಸಿಸಿಐನ ಆಯ್ಕೆಗಾರರು T20I ತಂಡದ ನಾಯಕತ್ವವನ್ನು ತ್ಯೇಜಿಸದಂತೆ ವಿರಾಟ್ ಕೊಹ್ಲಿ ಅವರನ್ನು ಕೇಳಿಕೊಂಡಿದ್ದರು, ಆದರೆ ವಿರಾಟ್ ಕೊಹ್ಲಿ ಅವರು ನಾಯಕತ್ವ ಬಿಡುವುದಾಗಿ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಅವರನ್ನು T20I ತಂಡದ ನಾಯಕತ್ವದಿಂದ ಕೆಳಗಿಳಿಸಲಾಯಿತು. ಜೊತೆಗೆ T20I ಹಾಗೂ ಏಕದಿನ ತಂಡಗಳಿಗೆ ಬೇರೆ ಬೇರೆ ನಾಯಕನಿರುವುದು ಸರಿಯಲ್ಲ ಎನ್ನುವುದು ಆಯ್ಕೆಗಾರರ ನಿರ್ಧಾರವಾದ್ದರಿಂದ ವಿರಾಟ್ ಕೊಹ್ಲಿ ಅವರನ್ನು T20I ಮತ್ತು ಏಕದಿನ ತಂಡಗಳ ನಾಯಕತ್ವದಿಂದ ಕೈಬಿಡಲಾಯಿತು. " ಎಂದು ಉತ್ತರಿಸಿದರು.
ಏಕದಿನ ತಂಡದ ನಾಯಕತ್ವ ವಿಷಯವು ದೇಶಾದ್ಯಂತ ಭಾರೀ ವಿವಾದವನ್ನು ಹುಟ್ಟುಹಾಕಿದ್ದು, ಅಭಿಮಾನಿಗಳು ಗಂಗೂಲಿ ಮತ್ತು ಭಾರತೀಯ ಕ್ರಿಕೆಟ್ ಮಂಡಳಿಯಿಂದ ಉತ್ತರವನ್ನು ಹುಡುಕುತ್ತಿರುವುದರಿಂದ ಬಿಸಿಸಿಐ ನಾಯಕತ್ವದ ವಿವಾದವನ್ನು ಹೇಗೆ ನೋಡಿಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ.
ಒಟ್ಟಿನಲ್ಲಿ ತಂಡದ ಆಯ್ಕೆಗಾರರು ಹಾಗೂ ತಂಡದ ನಾಯಕ ಮತ್ತು ಆಟಗಾರರಲ್ಲಿ ಯಾವುದೇ ಗೊಂದಲವಿಲ್ಲದೆ ಸಮಸ್ಯೆ ಬಗೆಹರಿದು, ಸೌತ್ ಆಫ್ರಿಕಾದಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ತೋರಿ ಸರಣಿಯನ್ನು ಜಯಿಸಲಿ ಎನ್ನುವುದು ಭಾರತ ತಂಡದ ಅಭಿಮಾನಿಗಳ ಬಯಕೆಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ