ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

'ವಿರಾಟ್ ಕೊಹ್ಲಿಯವರು ಕಪಿಲ್ ದೇವ್ ಇದ್ದಂತೆ ಮತ್ತು ರೋಹಿತ್ ಶರ್ಮಾ, ಸುನಿಲ್ ಗವಾಸ್ಕರ್ ಇದ್ದಂತೆ' - ರವಿ ಶಾಸ್ತ್ರಿ

ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರೀ ಅವರು ಕ್ರಿಕ್- ಬಜ್ ನಲ್ಲಿ ನಡೆದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಾಯಕತ್ವದ ಶೈಲಿಯನ್ನು ತಿಳಿಸಿದರು. ಪ್ರಸ್ತುತ ಭಾರತ ಕ್ರಿಕೆಟ್ ತಂಡವು 3 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನಾಡಲು ಸೌತ್ ಆಫ್ರಿಕಾಗೆ ತೆರಳಿದೆ. ಇದೆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿರುವುದು ಚರ್ಚೆಗೆ ಕಾರಣವಾಗಿದೆ.

ವಿರಾಟ್ ಕೊಹ್ಲಿಯವರು 2021ರ T20 ವಿಶ್ವಕಪ್ ನಂತರ T20 ತಂಡದ ನಾಯಕತ್ವದಿಂದ ಸ್ವಯೀಚ್ಚೆಯಿಂದ ಕೆಳಗಿಳಿದರು ಆದರೆ ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಅವರ ಅಭಿಪ್ರಾಯವನ್ನು ಕೇಳದೆಯೇ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾದೆ ಎಂದು ವಿರಾಟ್ ಕೊಹ್ಲಿ ಬಿಸಿಸಿಐ ವಿರುದ್ಧ ದೂರಿದರು.

ವಿರಾಟ್ ಕೊಹ್ಲಿಯವರ ಹೇಳಿಕೆಗೆ ಉತ್ತರಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, T20I ಮತ್ತು ಏಕದಿನ ತಂಡದ ನಾಯಕರು ಬೇರೆ ಬೇರೆ ಇರುವುದು ತಂಡದ ಬೆಳವಣಿಗೆಗೆ ಸರಿಯಾದುದಲ್ಲ ಎಂದು ತಂಡದ ಆಯ್ಕೆಗಾರರ ಅಭಿಪ್ರಾಯವಾಗಿತ್ತು ಆದ್ದರಿಂದ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ ಎಂದು ಹೇಳಿಕೆ ನೀಡಿದರು.

ಈ ನಡುವೆ ಸೌತ್ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ತಮ್ಮ ವ್ಯಯಕ್ತಿಕ ಕಾರಣದಿಂದ ಆಡುವುದಿಲ್ಲ ಎಂದು ಹೇಳಿದ್ದರು. ಜೊತೆಗೆ ರೋಹಿತ್ ಶರ್ಮಾ ಅವರು ಕೂಡ ಗಾಯದ ಸಮಸ್ಯೆಯಿಂದ ಟೆಸ್ಟ್ ಪಂದ್ಯಕ್ಕೆ ಲಭ್ಯವಾಗಲಿಲ್ಲ. ಇವೆಲ್ಲ ಕಾರಣಗಳು ಮೊದಲಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಡುವೆ ವೈಮನಸ್ಸು ಮೂಡಿದೆ ಎಂದು ತಾಳುಕು ಹಾಕಿಕೊಂಡಿತ್ತು, ಆದರೆ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಅವರ ನಾಯಕತ್ವಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಮೂಲಕ ಎಲ್ಲಾ ರೀತಿಯ ಚರ್ಚೆಗೆ ತೆರೆಯೆಳೆದಿದ್ದಾರೆ, ಜೊತೆಗೆ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವುದಾಗಿ ಹೇಳಿ ಎಲ್ಲ ರೀತಿಯ ಚರ್ಚೆಗಳಿಗೆ ಅಂತ್ಯಹಾಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ರವಿ ಶಾಸ್ತ್ರಿ

ಈ ನಡುವೆ ಕ್ರಿಕ್-ಬಜ್ ನ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ನಾಯಕತ್ವ ಶೈಲಿಯ ಬಗ್ಗೆ ಮಾತನಾಡಿದ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರೀ ಅವರು " ವಿರಾಟ್ ಕೊಹ್ಲಿಯವರ ನಾಯಕತ್ವ ಶೈಲಿಯು ಕಪಿಲ್ ದೇವ್ ಅವರ ನಾಯಕತ್ವದ ರೀತಿಯಲ್ಲಿದೆ, ಆದ್ದರಿಂದ ವಿರಾಟ್ ಕೊಹ್ಲಿ ನಾಯಕತ್ವ ಅಗ್ರೆಸ್ಸಿವ, ಬೋಲ್ಡ್ ಮತ್ತು ರಿಸ್ಕ್ ನಿಂದ ಕೂಡಿರುತ್ತದೆ ಆದರೆ ರೋಹಿತ್ ಶರ್ಮಾ ನಾಯಕತ್ವ ಸುನಿಲ್ ಗವಾಸ್ಕರ್ ಅವರ ನಾಯಕತ್ವದ ರೀತಿಯಲ್ಲಿದೆ ರೋಹಿತ್ ಅವರ ನಾಯಕತ್ವ ಕೂಲ್, ಕಾಮ್ ಮತ್ತು ಕ್ಯಾಲ್ಸಿಲೇಟಿವ್ ಆಗಿರುತ್ತದೆ " ಎಂದು  ಹೇಳಿದರು.

ಒಟ್ಟಾರೆಯಾಗಿ ಇಬ್ಬರು ನಾಯಕರು ಉತ್ತಮ ನಾಯಕತ್ವ ಗುಣವನ್ನು ಹೊಂದಿದ್ದಾರೆ ಮತ್ತು ಇಬ್ಬರ ನಡುವೆ ಒಳ್ಳೆಯ ಸ್ನೇಹ ಬಾಂಧವ್ಯವಿದೆ ಎಂದು ರವಿ ಶಾಸ್ತ್ರೀ ಅವರು ವಿವರಿಸಿದರು.

ಅದೇನೇ ಆಗಿರಲಿ ಒಟ್ಟಿನಲ್ಲಿ ಟೀಮ್ ಆಟಗಾರರಲ್ಲಿ ಒಳ್ಳೆಯ ಸ್ನೇಹ ಬಾಂಧವ್ಯ ಬೆಳೆದು ತಂಡದ ಅಭಿವೃದ್ಧಿಗೆ ಸಹಾಯಕವಾಗಲಿ ಮತ್ತು ಮುಂಬರುವ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ತೋರಿ ವಿಶ್ವಕಪ್ ಗೆಲ್ಲಲಿ ಎನ್ನುವುದು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳ ಆಶಯವಾಗಿದೆ.



ಕಾಮೆಂಟ್‌ಗಳು