ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

2021ರ ಸಾಲಿನ ವಿಶ್ವದ ಅತ್ಯುತ್ತಮ ಬ್ಯಾಟ್ಸಮನ್ ಯಾರು?

ಕಳೆದ ಎರಡು ವರ್ಷಗಳಲ್ಲಿ ಕ್ರೀಕೆಟ್ ಪಂದ್ಯಗಳು ನಡೆದಿದ್ದೆ ವಿಶೇಷ, ಅದರಲ್ಲಿಯೂ 2020ರಲ್ಲಿ ಅಂತಹ ಯಾವುದೇ ಮಹತ್ವದ ಪಂದ್ಯಗಳು ಜರುಗಲಿಲ್ಲ ಆದರೆ 2021ರಲ್ಲಿ ಕೆಲವು ಪಂದ್ಯಾವಳಿಗಳು ಜರುಗಿದವು.


ವಿಶ್ವ ಕ್ರಿಕೆಟ್ ನಲ್ಲಿ ಒಬ್ಬರಿಗಿಂತ ಒಬ್ಬ ಘಟಾನುಗತಿ ಆಟಗಾರರಿದ್ದಾರೆ, ಆದರೆ 2021ರಲ್ಲಿ ಯಾವೊಬ್ಬ ಆಟಗಾರರಿಂದಲೂ ಹೇಳಿಕೊಳ್ಳುವಂತ ಆಟ ಬರಲಿಲ್ಲ. ಕೆಲವು ಯುವ ಆಟಗಾರರು 2021ರಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ವರ್ಷದ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.

2021ರ ಅತ್ಯುತ್ತಮ ಆಟಗಾರರ ಬಗ್ಗೆ ಇಲ್ಲಿ ತಿಳಿಸಲಾಗಿದೆ, 2021ರ ಉತ್ತಮ ಆಟಗಾರರೆಂದರೆ,

4) ರೋಹಿತ್ ಶರ್ಮಾ


ಪ್ರಸ್ತುತ ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕರಾದ ರೋಹಿತ್ ಶರ್ಮಾ ಅವರು 2021ರ ಸಾಲಿನಲ್ಲಿ 24 ಪಂದ್ಯಗಳಲ್ಲಿ 1420 ರನ್ ಗಳನ್ನು ಹೊಡೆಯುವ ಮೂಲಕ 2021ರಲ್ಲಿ ಭಾರತ ಕ್ರಿಕೆಟ್ ತಂಡಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಅವರು ಗಳಿಸಿದ 161ರನ್ ಈ ವರ್ಷದಲ್ಲಿ ಅವರು ಗಳಿಸಿದ ಅತೀ ಹೆಚ್ಚು ರನ್ ಆಗಿದೆ.

3) ಬಾಬರ್ ಆಜಮ್


ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಹಾಗೂ ಕ್ರಿಕೆಟ್ ನ ಮೂರು ಫಾರ್ಮ್ಯಾಟ್ ಗಳಲ್ಲಿ ಉತ್ತಮ ರಾಂಕಿಂಗ್( ಟೆಸ್ಟ್ -9 ನೇ ಸ್ಥಾನ, ಏಕದಿನ - 1 ನೇ ಸ್ಥಾನ ಹಾಗೂ T20- 2ನೇ ಸ್ಥಾನ ) ಹೊಂದಿರುವ ಬಾಬರ್ ಆಜಮ್ 2021ರಲ್ಲಿ 43 ಪಂದ್ಯಗಳಲ್ಲಿ 40+ರ ಸರಾಸರಿಯೊಂದಿಗೆ 1760 ರನ್ ಗಳಿಸಿದ್ದಾರೆ, ಜೊತೆಗೆ ನಾಯಕನಾಗಿ ಭಾರತ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಗೆಲ್ಲಿಸಿದ ಮೊದಲ ನಾಯಕರಾಗಿದ್ದಾರೆ.

2) ಜೋ ರೂಟ್


ಇಂಗ್ಲೆಂಡ್ ಟೆಸ್ಟ್  ತಂಡದ ನಾಯಕರಾದ ಜೋ ರೂಟ್ ಅವರು 2021ರ ಸಾಲಿನಲ್ಲಿ 17 ಪಂದ್ಯಗಳಲ್ಲಿ 68+ ಸರಾಸರಿಯಲ್ಲಿ 1777 ರನ್ ಗಳಿಸಿದ್ದಾರೆ. ಇವುಗಳಲ್ಲಿ 1630 ರನ್ ಗಳನ್ನು ಕೇವಲ ಟೆಸ್ಟ್ ಪಂದ್ಯಗಳಲ್ಲಿಯೇ ಗಳಿಸಿ ಈ ವರ್ಷದ ಅತ್ಯುತ್ತಮ ಆಟಗಾರರಲ್ಲಿ 2ನೇ ಸ್ಥಾನದಲ್ಲಿದ್ದಾರೆ. 2021ರ ಸಾಲಿನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 1000ಕ್ಕೂ ಅಧಿಕ ರನ್ ಗಳಿಸಿದ ಏಕೈಕ ಆಟಗಾರರಾಗಿದ್ದಾರೆ.

1) ಮಹಮ್ಮದ್ ರಿಜ್ವಾನ್


ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ಆದ ಮಹಮ್ಮದ್ ರಿಜ್ವಾನ್ ಅವರು 44 ಪಂದ್ಯಗಳಲ್ಲಿ 1915 ರನ್ ಗಳಿಸುವ ಮೂಲಕ 2021ರಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇವುಗಳಲ್ಲಿ 1326 ರನ್ ಗಳನ್ನು ಕೇವಲ T20I ಪಂದ್ಯಗಳಲ್ಲಿಯೇ ಗಳಿಸಿರುವುದು ವಿಶೇಷ, ಜೊತೆಗೆ 2021ರ ಸಾಲಿನಲ್ಲಿ T20 ಪಂದ್ಯಗಳಲ್ಲಿ 1000ಕ್ಕೂ ಅಧಿಕ ರನ್ ಗಳಿಸಿದ ಏಕೈಕ ಆಟಗಾರರಾಗಿದ್ದಾರೆ.

ಕಾಮೆಂಟ್‌ಗಳು