- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
'ಧೋನಿ ಕಾಲದಲ್ಲಿಯೂ ಇದನ್ನೇ ನೋಡಿದ್ದೆವು, ಈಗ ವಿರಾಟ್ ಜೊತೆಯಲ್ಲಿಯೂ ಅದೇ ನಡೆಯುತ್ತಿದೆ', ಪಾಕ್ ಮಾಜಿ ನಾಯಕ ಸಲ್ಮಾನ್ ಬಟ್
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ, ಶಿಖರ ಧವನ್, ರವಿಚಂದ್ರನ್ ಅಶ್ವಿನ್ ರನ್ನೊಳಗೊಂಡ ತಂಡಕ್ಕೆ KL ರಾಹುಲ್ ನಾಯಕ, ಜಸ್ಪ್ರೀತ್ ಬುಮ್ರಾ ಉಪನಾಯಕ
ಈ ಮದ್ಯೆ ತಂಡದಲ್ಲಿ ಹಲವು ಅನುಭವಿ ಆಟಗಾರರಿದ್ದರು KL ರಾಹುಲ್ ಅವರನ್ನು ನಾಯಕನನ್ನಾಗಿ ನೇಮಿಸಿರುವುದು ಕೆಲವರ ಹುಬ್ಬೆರಿಸುವಂತೆ ಮಾಡಿದೆ. ಈಗಾಗಲೇ ತಂಡದಲ್ಲಿ ಟೀಮ್ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ಅನುಭವಿ ಶಿಖರ ಧವನ್, ರವಿಚಂದ್ರನ್ ಆಶ್ವಿನ್ ರಂತ ಆಟಗಾರರಿದ್ದರು KL ರಾಹುಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಸಲ್ಮಾನ್ ಬಟ್ ರವರು ಯೌಟ್ಯೂಬ್ ನಲ್ಲಿ ಅವರ ಅಭಿಮಾನಿಯೊಬ್ಬರು 'ಭಾರತ ತಂಡದಲ್ಲಿ ಈಗಾಗಲೇ ವಿರಾಟ್ ಕೊಹ್ಲಿ ಇದ್ದರು ಸಹ ಯಾಕೆ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಿಲ್ಲ, ಬದಲಿಗೆ KL ರಾಹುಲ್ ಅವರನ್ನು ನಾಯಕನಾಗಿ ನೇಮಿಸಲಾಯಿತು' ಎಂದು ಕೇಳಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್ ಬಟ್ ' ಈಗಾಗಲೇ ವಿರಾಟ್ ಕೊಹ್ಲಿಯವರು ವೈಟ್-ಬಾಲ್ ತಂಡಗಳ ನಾಯಕತ್ವದಿಂದ ರಾಜೀನಾಮೆ ನೀಡಿದ್ದಾರೆ. ಈ ಕಾರಣದಿಂದ ಅವರನ್ನು ಇನ್ನೊಮ್ಮೆ ವೈಟ್-ಬಾಲ್ ತಂಡಗಳ ನಾಯಕನನ್ನಾಗಿ ನೇಮಿಸಿದು ಬಹುತೇಕ ವಿರಳ.'
'ಜೊತೆಗೆ KL ರಾಹುಲ್ ಪ್ರಸ್ತುತ ಕ್ರಿಕೆಟ್ ನ ಮೂರು ಫಾರ್ಮ್ಯಾಟ್ ನಲ್ಲಿ ಭಾರತ ತಂಡದ ಕಾಯಂ ಆಟಗಾರ ಹಾಗೂ ಉಪನಯಕನು ಹೌದು, ಅಲ್ಲದೆ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿದ್ದಾರೆ. ಹಾಗಾಗಿ KL ರಾಹುಲ್ ಅವರನ್ನು ನಾಯಕನನ್ನಾಗಿ ನೇಮಿಸಿರುವುದು ಒಂದು ಒಳ್ಳೆಯ ಹೆಜ್ಜೆ.' ಎಂದು ಬನ್ನಿಸಿದರು.
'ಬಿಸಿಸಿಐನ ಈ ರೀತಿಯ ತೀರ್ಮಾನಗಳನ್ನು ನಾವು ಈಗಾಗಲೇ ಧೋನಿಯವರ ಕಾಲದಲ್ಲಿಯೂ ನೋಡಿದ್ದೇವೆ, ಧೋನಿಯವರು ನಾಯಕತ್ವ ತ್ಯೇಜಿಸಿದ ನಂತರದಲ್ಲಿ ಅವರನ್ನು ಮುಂದೆ ಯಾವುದೇ ಪಂದ್ಯಕ್ಕೆ ನಾಯಕನಾಗಿ ನೇಮಿಸಲಿಲ್ಲ ಧೋನಿಯವರು ತಂಡದಲ್ಲಿದ್ದರು, ತಂಡದಲ್ಲಿರುವ ಯುವ ಆಟಗಾರ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ವಹಿಸಲಾಗುತ್ತಿತ್ತು. ಅದೇ ರೀತಿ ಈಗಲೂ ನಡೆಯುತ್ತಿದೆ.' ಎಂದು ಸಲ್ಮಾನ್ ಬಟ್ ಅವರು ಹೇಳಿದರು.
'ಬಿಸಿಸಿಐನ ಈ ತರಹದ ತೀರ್ಮಾನಗಳನ್ನು ನಾವು ನಿಜವಾಗಿಯೂ ಶ್ಲಾಗಿಸಬೇಕು ಏಕೆಂದರೆ, ತಂಡದಲ್ಲಿರುವ ಯುವ ಆಟಗಾರರಿಗೆ, ನಾಯಕನ ಅನುಪಸ್ಥಿತಿಯಲ್ಲಿ ತಂಡದ ಜವಾಬ್ದಾರಿಯನ್ನು ನೀಡುವುದರಿಂದ ಯುವ ಆಟಗಾರರನ್ನು ಭವಿಷ್ಯದ ನಾಯಕನನ್ನಾಗಿ ತಯಾರಿ ಮಾಡುವಲ್ಲಿ ಈ ರೀತಿಯ ತೀರ್ಮಾನಗಳು ಸಹಾಯಕವಾಗಿವೆ. ಭಾರತ ತಂಡವು ಯುವ ಆಟಗಾರರನ್ನು ನಾಯಕನನ್ನಾಗಿ ನೇಮಿಸಿದ ಹಲವು ಉದಾಹರಣೆಗಳಿವೆ ಮತ್ತು ತಂಡವು ಅಂತಹ ಪಂದ್ಯಗಳನ್ನು ಸಹ ಗೆದ್ದು ಬಿಗಿವೆ. ಹಾಗಾಗಿ ಬಿಸಿಸಿಐನ ಈ ರೀತಿಯ ತೀರ್ಮಾನಗಳನ್ನು ನಾನು ಶ್ಲಾಗಿಸುತ್ತೇನೆ.' ಎಂದು ಹೇಳಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ