ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಮತ್ತು ಧೋನಿಗೆ ತಂಡದಲ್ಲಿ ಸ್ಥಾನವಿಲ್ಲ

ಸಚಿನ್ ತೆಂಡೂಲ್ಕರ್ ಅವರು ಇತ್ತೀಚೆಗೆ ತಮ್ಮ ನೆಚ್ಚಿನ ಸರ್ವಕಾಲೀಕ 11 ಆಟಗಾರರನ್ನು ಆಯ್ಕೆ ಮಾಡಿದರು. ಆ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಅವರಿಗೆ ಸ್ಥಾನ ನೀಡಿಲ್ಲ.

ತಮ್ಮ ಆಟದ ಮೂಲಕವೇ ಕ್ರಿಕೆಟ್ ದೇವರು ಏನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ದಾಖಲೆಗಳನ್ನು ನೋಡಿದರೆ ಸಾಕು ಯಾರು ಬೇಕಾದರು ಹೇಳುತ್ತಾರೆ ಕ್ರಿಕೆಟ್ ನ ನಿಜವಾದ ದೇವರೆಂದರೆ ಅವರೇ 'ದಿ ಲಿಟಲ್ ಮಾಸ್ಟರ್' ಸಚಿನ್ ತೆಂಡೂಲ್ಕರ್. ಕ್ರಿಕೆಟ್ ನಲ್ಲಿ ಸಾಕಷ್ಟು ದಾಖಲೆಗಳನ್ನು ಮಾಡಿರುವ ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದಿಗ್ಗಜ ಎಂದರೆ ತಪ್ಪಾಗುವುದಿಲ್ಲ.

ಸಚಿನ್ ತೆಂಡೂಲ್ಕರ್ ಅವರು ಇತ್ತೀಚೆಗೆ ತಮ್ಮ ನೆಚ್ಚಿನ ಸರ್ವಕಾಲಿಕ ಬೆಸ್ಟ್ 11 ಕ್ರಿಕೆಟ್ ಆಟಗಾರರನ್ನು ಅರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಕಂಡ ಸರ್ವಕಾಲೀಕ ಬೆಸ್ಟ್ 11 ರಲ್ಲಿ ಎಂ ಎಸ್ ಧೋನಿ ಬದಲಿಗೆ ಸೌರವ್ ಗಂಗೂಲಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ತಮ್ಮ ಸರ್ವಕಾಲೀಕ ಬೆಸ್ಟ್ 11ರಲ್ಲಿ ಭಾರತ ತಂಡದ ಮಾಜಿ ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತು ದಿ ಲೆಜೇಂಡ್ ಸುನಿಲ್ ಗವಾಸ್ಕರ್ ಅವರನ್ನು ಆರಂಭಿಕ ಜೋಡಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಕ್ರಿಕೆಟ್ ನ ದಂತಕತೆ ಬ್ರಿಯನ್ ಲಾರಾ, ವಿವಿಯನ್ ರಿಚೆರ್ಡ್ಸ್, ಜಾಕ್ ಕ್ಯಾಲೀಸ್ ಮತ್ತು ಸೌರವ್ ಗಂಗೂಲಿ ಅವರನ್ನು ಮಧ್ಯಮ ಕ್ರಮಾಂಕದ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ತಂಡದ ಸ್ಪೋಟಕ ವಿಕೆಟ್-ಕೀಪರ್ ಬ್ಯಾಟ್ಸಮನ್ ಆಡಮ್ ಗಿಲಕ್ರಿಸ್ಟ್ ಅವರನ್ನು ವಿಕೆಟ್-ಕೀಪರ್ ಆಗಿ ಅರಿಸಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ವಿಶ್ವದ ಬೆಸ್ಟ್ ಬೌಲರ್ ಗಳಲ್ಲಿ ಹರ್ಭಜನ್ ಸಿಂಗ್, ಶೇನ ವಾರ್ನ್, ಗ್ಲೇನ್ ಮೆಗ್ರಾತ್ ಮತ್ತು ವಸಿಂ ಅಕ್ರಮ್ ಅವರನ್ನು ತಮ್ಮ ಸರ್ವಕಾಲೀಕ ಬೆಸ್ಟ್ 11ರಲ್ಲಿ ಆಯ್ಕೆ ಮಾಡಿದ್ದಾರೆ.

ಇವೆಲ್ಲದರ ಜೊತೆಯಲ್ಲಿ ಪ್ರಸ್ತುತ ಕ್ರಿಕೆಟ್ ಜಗತ್ತಿನ ದಿಗ್ಗಜ ವಿರಾಟ್ ಕೊಹ್ಲಿ, ಎಲ್ಲಾ ಫಾರ್ಮ್ಯಾಟ್ ನಲ್ಲೂ ಭಾರತ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿ ಕೊಟ್ಟ ಚಾಣಕ್ಷ ನಾಯಕ ಮಹೇಂದ್ರ ಸಿಂಗ್ ಧೋನಿ, ಸ್ಪೀನ್ನ ಮಾಂತ್ರಿಕ ಮುತ್ತಯ್ಯ ಮುರುಳಿಧರನ್, ದಿ ವಾಲ್ ರಾಹುಲ್ ದ್ರಾವಿಡ್ ಹೀಗೆ ಹಲವು ದಿಗ್ಗಜ ಆಟಗಾರರ ಹೆಸರು ಸಚಿನ್ ತೆಂಡೂಲ್ಕರ್ ಅವರ ಸರ್ವಕಾಲೀಕ ಬೆಸ್ಟ್ 11ರಲ್ಲಿ ಕಾಣಿಸಿಕೊಳ್ಳದಿರುವುದು ಆಶ್ಚರ್ಯ ಉಂಟುಮಾಡಿದೆ.

ಸಚಿನ್ ತೆಂಡೂಲ್ಕರ್ ಅವರ ಸರ್ವಕಾಲೀಕ ಬೆಸ್ಟ್ 11
ವೀರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್, ಬ್ರಿಯನ್ ಲಾರಾ, ವಿವಿಯನ್ ರಿಚೆರ್ಡ್ಸ್, ಜಾಕ್ ಕ್ಯಾಲೀಸ್, ಸೌರವ್ ಗಂಗೂಲಿ(ನಾಯಕ), ಆಡಮ್ ಗಿಲಕ್ರಿಸ್ಟ್ (ವಿಕೆಟ್-ಕೀಪರ್), ಶೇನ್ ವಾರ್ನ್, ಗ್ಲೇನ್ ಮೆಗ್ರಾತ್, ವಾಸಿಂ ಅಕ್ರಮ್ ಮತ್ತು ಹರ್ಭಜನ್ ಸಿಂಗ್.



ಕಾಮೆಂಟ್‌ಗಳು