ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

"ರಹಾನೇ ಮತ್ತು ಪೂಜಾರಾರನ್ನು ತಂಡದಿಂದ ಹೊರಗಿಡುವುದಾದರೆ ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಹೊರಗಿಡಬೇಕು"

"ಅಜಿಂಕ್ಯ್ ರಹಾನೇ ಹಾಗೂ ಚೇತೆಶ್ವರ್ ಪೂಜಾರಾ ಅವರ ಕಳಪೆ ಫಾರ್ಮ್ ಬಗ್ಗೆ ಮಾತನಾಡುವುದಾದರೆ, ನಾಯಕ ವಿರಾಟ್ ಕೊಹ್ಲಿ ಕೂಡ ಕಳಪೆ ಫಾರ್ಮ್ ನಿಂದ ಹೊರತೇನಲ್ಲ, ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಕಳೆದ ಕೆಲವು ಪಂದ್ಯಗಳಲ್ಲಿ ಯಾವುದೇ ಪರಿಣಾಮಕಾರಿಯಾದಂತಹ ಪ್ರದರ್ಶನ ತೋರಿಲ್ಲ " - ಆಶಿಷ್ ನೆಹರಾ, ಟೀಮ್ ಇಂಡಿಯಾ ಮಾಜಿ ಆಟಗಾರ.

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸಾರಾಣಿಯನ್ನಾಡುತ್ತಿರುವ ಭಾರತ ತಂಡವು ಮೊದಲ ಟೆಸ್ಟ್ ಪಂದ್ಯವನ್ನು 113 ರನ್ ಗಳ ಅಂತರದಿಂದ ಜಯಿಸಿತು. ಆದರೆ ಕಳೆದ ಕೆಲವು ಪಂದ್ಯಗಳಿಂದ ತಂಡದ ಅನುಭವಿ ಆಟಗಾರರಾದ ಅಜಿಂಕ್ಯ್ ರಹಾನೇ ಮತ್ತು ಚೇತೆಶ್ವರ್ ಪೂಜಾರಾ ಅವರ ಪ್ರದರ್ಶನವು ಅಷ್ಟು ಸರಿಯಾಗಿ ಮೂಡಿಬಂದಿಲ್ಲ. ಹಾಗಾಗಿ ಇಬ್ಬರು ಅನುಭವಿ ಆಟಗಾರರನ್ನು ತಂಡದಿಂದ ಕೈಬಿಡಬೇಕು ಎಂಬ ಕೂಗು ಕೇಳಿಬರುತ್ತಿದೆ.

ಈ ಮದ್ಯೆ ಅಜಿಂಕ್ಯ್ ರಹಾನೇ ಹಾಗೂ ಚೇತೆಶ್ವರ್ ಪೂಜಾರಾ ಅವರ ಆಯ್ಕೆ ಮತ್ತು ತಂಡದಿಂದ ಕೈಬಿಡುವ ವಿಚಾರವಾಗಿ ಕ್ರಿಕ್-ಬಝ್ ಲೈವ್ ನಲ್ಲಿ ಆಶಿಷ್ ನೆಹರಾ ಅವರು " ಅಜಿಂಕ್ಯ್ ರಹಾನೇ ಮತ್ತು ಚೇತೆಶ್ವರ್ ಪೂಜಾರಾ ಅವರು ಉತ್ತಮ ಅನುಭವಿ ಆಟಗಾರರು ಮತ್ತು ವ್ಯಯಕ್ತಿಕವಾಗಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಆಟಗಾರರಾಗಿದ್ದಾರೆ."

ತಂಡದ ಆಟಗಾರರ ಬಗ್ಗೆ ಮಾತನಾಡಿದ ಆಶಿಷ್ ನೆಹರಾ ಅವರು ಅಜಿಂಕ್ಯ್ ರಹಾನೇ ಮತ್ತು ಚೇತೆಶ್ವರ್ ಪೂಜಾರಾ ಅವರ ಆಯ್ಕೆಯನ್ನು ಸಮರ್ಥಿಸುತ್ತ, "ತಂಡದಲ್ಲಿ ಎಲ್ಲಾ ಆಟಗಾರರೇನು ರನ್ ಗಳಿಸುತ್ತಿಲ್ಲ ಮತ್ತು ಕೇವಲ ಈ ಇಬ್ಬರೇ ಆಟಗಾರರು ಕಳಪೆ ಫಾರ್ಮ್ ನಲ್ಲಿಲ್ಲ. ಹಾಗಾಗಿ ಈ ಇಬ್ಬರು ಆಟಗಾರರಿಗೆ ಅವಕಾಶ ಕೊಡುವುದು ಉತ್ತಮ, ಒಂದು ವೇಳೆ ಈ ಇಬ್ಬರು ಆಟಗಾರರು ಫಾರ್ಮ್ ಗೆ ಮರಳಿದರೆ ವ್ಯಯಕ್ತಿಕವಾಗಿ ತಂಡವನ್ನು ಗೆಲುವಿನ ದಡ ಮುಟ್ಟಿಸುತ್ತಾರೆ, ಆದ್ದರಿಂದ ಈ ಆಟಗಾರರಿಗೆ ಅವಕಾಶ ಕೊಡುವುದು ಉತ್ತಮ." ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಗೆ ಮುಂದುವರೆದು "ಹಾಗೆ ನೋಡಿದರೆ ಅಜಿಂಕ್ಯ್ ರಹಾನೇ ಕೆಲವು ಪಂದ್ಯಗಳಲ್ಲಿ ಉತ್ತಮವಾದ ಆಟದ ಪ್ರದರ್ಶನ ತೋರಿ ತಂಡಕ್ಕೆ ಆಸರೆಯಾಗಿದ್ದಾರೆ, ಆಸ್ಟ್ರೇಲಿಯಾ ಸರಣಿಯಲ್ಲಿ ಶತಕ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅರ್ಧ ಶತಕ ಮತ್ತು ಇನ್ನು ಕೆಲವು ಪಂದ್ಯಗಳಲ್ಲಿ 30+ ರನ್ ಗಳಸಿ ತಂಡಕ್ಕೆ ಆಸರೆಯಾಗಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರು ಕಳೆದ 2-3 ವರ್ಷಗಳಿಂದ ಯಾವುದೇ ಶತಕ ಗಳಿಸಿಲ್ಲ." ಎಂದರು.

"ಒಂದು ವೇಳೆ ಅಜಿಂಕ್ಯ್ ರಹಾನೇ ಮತ್ತು ಚೇತೆಶ್ವರ್ ಪೂಜಾರಾ ಅವರನ್ನು ತಂಡದಿಂದ ಕೈಬಿಡುವ ವಿಚಾರ ಬಂದರೆ, ಪ್ರಮುಖವಾಗಿ ವಿರಾಟ್ ಕೊಹ್ಲಿ ಅವರ ವಿಚಾರವು ಚರ್ಚೆಗೆ ಬರುತ್ತದೆ. ಹಾಗೆ ನೋಡಿದರೆ ವಿರಾಟ್ ಕೊಹ್ಲಿ ಸಹ ಕಳೆದ 2-3 ವರ್ಷಗಳಲ್ಲಿ ಹೇಳಿಕೊಳ್ಳುವಂತ ಯಾವುದೇ ಪ್ರದರ್ಶನ ತೋರಿಲ್ಲ, ಆದ್ದರಿಂದ ತಂಡದಲ್ಲಿ ಕಳಪೆ ಫಾರ್ಮ್ ನ ವಿಷಯ ಬಂದಾಗ ಕಳಪೆ ಫಾರ್ಮ್ ನಲ್ಲಿರುವ ಎಲ್ಲ ಆಟಗಾರರ ಚರ್ಚೆಯು ಆಗಬೇಕು." ಎಂದರು.

"ಕಳೆದ ಹಲವು ವರ್ಷಗಳಲ್ಲಿ ಕೊಹ್ಲಿ ಹೇಗೆ ತಂಡಕ್ಕೆ ಆಸರೆಯಾಗುತ್ತಿದ್ದರೋ ಹಾಗೆಯೇ ಅಜಿಂಕ್ಯ್ ರಹಾನೇ ಮತ್ತು ಚೇತೆಶ್ವರ್ ಪೂಜಾರಾ ಅವರು ಟೆಸ್ಟ್ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟ ಆಟಗಾರರಾಗಿದ್ದಾರೆ. ಆದ್ದರಿಂದ ಈ ಆಟಗಾರರಿಗೆ ಅವಕಾಶ ಕೊಡುವುದು ಒಳ್ಳೆಯದು." ಎಂದು ಅಭಿಪ್ರಾಯ ತಿಳಿಸಿದರು.

"ಯಾವ ರೀತಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅವಕಾಶಗಳು ದೊರೆಯುತ್ತಿವೆಯೋ ಅದೇ ರೀತಿ ಈ ಇಬ್ಬರು ಆಟಗಾರರಿಗೂ ದೊರೆಯಬೇಕು. ಒಂದುವೇಳೆ ಈ ಮೂವರು ಆಟಗಾರರು ಫಾರ್ಮ್ ಗೆ ಮರಳಿದರೆ ತಂಡದಲ್ಲಿ ಬೇರೆ ಯಾವ ಆಟಗಾರರು ಫಾರ್ಮ್ ನಲ್ಲಿ ಇಲ್ಲದಿದ್ದರೆ, ಈ ಮೂವರೇ ಪಂದ್ಯವನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ." ಎಂದು ಹೇಳಿದರು

ಒಟ್ಟಾರೆಯಾಗಿ ಆಶಿಷ್ ನೆಹರಾ ಅವರು ಅಜಿಂಕ್ಯ್ ರಹಾನೇ ಮತ್ತು ಚೇತೆಶ್ವರ್ ಪೂಜಾರಾ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳುವುದರ ಜೊತೆಗೆ ತಂಡಕ್ಕೆ ಈ ಇಬ್ಬರು ಅನುಭವಿಗಳ ಅವಶ್ಯಕತೆಯನ್ನು ವಿವರಿಸಿದರು.



ಕಾಮೆಂಟ್‌ಗಳು