ಇಂಟರ್ವ್ಯೂ ಮಧ್ಯೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ

ಸೌತ್ ಆಫ್ರಿಕಾ ಏಕದಿನ ಸರಣಿಯಲ್ಲಿ ಶಿಖರ ಧವನ್, ರವಿಚಂದ್ರನ್ ಅಶ್ವಿನ್, ಋತುರಾಜ್, ವೆಂಕಟೇಶ್ ಅಯ್ಯರ್?

3 ಟೆಸ್ಟ್ ಪಂದ್ಯಗಳ ನಂತರ ಭಾರತ ಕ್ರಿಕೆಟ್ ತಂಡವು ಸೌತ್ ಆಫ್ರಿಕಾ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಪ್ರಸ್ತುತ ಗಾಯದ ಸಮಸ್ಯೆಯಲ್ಲಿ ಟೆಸ್ಟ್ ಪಂದ್ಯಗಳಿಂದ ಹೊರಗಿರುವ ರೋಹಿತ್ ಶರ್ಮಾ ಅವರು ಏಕದಿನ ಪಂದ್ಯಗಳಲ್ಲಿ ತಮ್ಮ ಪೂರ್ಣಕಾಲಿಕ ಏಕದಿನ ತಂಡದ ನಾಯಕತ್ವವನ್ನು ಆರಂಬಿಸುವ ಸಾಧ್ಯತೆಯಿದೆ.

ಸದ್ಯ ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಮ್ ಇಂಡಿಯಾ ತಮ್ಮ ಮೊದಲ ದಿನಡಾಟದಲ್ಲಿ 3 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿ ಉತ್ತಮವಾಗಿ ಪಂದ್ಯವನ್ನು ಗೆಲ್ಲುವತ್ತ ಸಾಗಿದೆ.

ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಯಾವ್ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ ಎನ್ನುವುದು ಎಲ್ಲಾ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಜೊತೆಗೆ ಹಲವಾರು ಆಟಗಾರರು ಅತ್ಯುತ್ತಮ ಫಾರ್ಮ್ ನಲ್ಲಿದ್ದು ಯಾವ ಆಟಗಾರರು ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಜನೆವರಿ 19, 21 ಮತ್ತು 23 ರಂದು ಭಾರತ ತಂಡವು 3 ಏಕದಿನ ಪಂದ್ಯಗಳನ್ನು ಆಡಲಿದೆ, ಈ ಪಂದ್ಯಗಳಿಗಾಗಿ ತಂಡವನ್ನು ಪ್ರಕಟಿಸಲು ಬಿಸಿಸಿಐ ತಯಾರಿ ನಡೆಸಿದೆ, ಆ 15 ಸಂಭಾವ್ಯ ಸದಸ್ಯರು ಯಾರಗಬಹುದು ಎಂದು ಇಲ್ಲಿ ನೋಡೋಣ.

ಆರಂಭಿಕರು

ರೋಹಿತ್ ಶರ್ಮಾ ಅವರ ದೀರ್ಘಕಾಲದ ಆರಂಭಿಕ ಜೊತೆಗಾರ ಶಿಖರ ಧವನ್ ಅವರು ಮತ್ತೆ ಟೀಮ್ ಇಂಡಿಯಾವನ್ನು ಸೇರುವ ದಾರಿಯಲ್ಲಿದ್ದಾರೆ, ಪ್ರಸ್ತುತ T20 ಹಾಗೂ ಟೆಸ್ಟ್ ತಂಡಗಳಿಂದ ಹೊರಗಿರುವ ಶಿಖರ ಧವನ್ ಏಕದಿನ ತಂಡದಲ್ಲಿ ಕಂಬ್ಯಾಕ್ ಮಾಡುವ ತವಕದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ 6 ಪಂದ್ಯಗಳಲ್ಲಿ ಭಾರತ ತಂಡವನ್ನು ಉತ್ತಮವಾಗಿ ಮುನ್ನಡೆಸಿ ಜೊತೆಗೆ ಆರಂಭಿಕನಾಗಿ ಅತ್ಯುತ್ತಮವಾಗಿ ಆಟವನ್ನು ಪ್ರದರ್ಶಿಸಿದ್ದಾರೆ. ಈ ಕಾರಣಗಳಿಂದ ಶಿಖರ ಧವನ್ ಅವರು ಮತ್ತೆ ಟೀಮ್ ಇಂಡಿಯಾದಲ್ಲಿ ಆರಂಭಿಕನಾಗಿ ಕಾಣಿಸಿಕೊಳ್ಳುವ ಅವಕಾಶಗಳು ದಟ್ಟವಾಗಿವೆ.

ಋತುರಾಜ್ ಗಾಯಕ್ವಾಡ್ ಅವರು 2021ರ ಐಪಿಎಲ್ ಮತ್ತು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ತೋರಿದ ಪ್ರದರ್ಶನ ಎಲ್ಲರಲ್ಲೂ ಅಚ್ಚರಿ ಉಂಟುಮಾಡಿದೆ. 2021ರ ಐಪಿಎಲ್ ನಲ್ಲಿ 635 ರನ್ ಗಳಿಸಿಸುವ ಮೂಲಕ ಆರೆಂಜ್ ಕ್ಯಾಪ್ ತಣ್ಣದಾಗಿಸಿಕೊಂಡಿದ್ದರು. ವಿಜಯ್ ಹಜಾರೆ ಟ್ರೋಫಿಯ 5 ಪಂದ್ಯಗಳಲ್ಲಿ 4 ಭರ್ಜರಿ ಶತಕಗಳೊಂದಿಗೆ 603 ರನ್ ಗಳಿಸಿದ್ದಾರೆ. ಹಾಗಾಗಿ ಋತುರಾಜ್ ಗಾಯಕ್ವಾಡ್ ಅವರು ಟೀಮ್ ಇಂಡಿಯಾದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.

ಮಧ್ಯಮ ಕ್ರಮಾಂಕ

ಏಕದಿನ ಸರಣಿಗೆ ತಾವು ಆಡುವುದಾಗಿ ಖಚಿತಪಡಿಸಿರುವ ವಿರಾಟ್ ಕೊಹ್ಲಿಯವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ 4 ನೇ ಕ್ರಮಾಂಕದಲ್ಲಿ ಬಹುತೇಕವಾಗಿ
ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಇವರಲ್ಲಿ ಯಾರಾದರೂ ಒಬ್ಬರು ಆಡುವ ಅವಕಾಶವಿದೆ. ಜೊತೆಗೆ ಫಿನಿಷರ್ ಆಗಿ ಕೆ ಎಲ್ ರಾಹುಲ್ ಆಡುವ ಸಂಭವವಿದೆ.

ಆಲ್-ರೌಂಡರ್ ಗಳು

ಐಪಿಎಲ್ ಹಾಗೂ ಡೋಮೆಸ್ಟಿಕ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ವೆಂಕಟೇಶ್ ಅಯ್ಯರ್, ಭಾರತದ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ, 27 ವರ್ಷ ಹರೆಯದ ಮಧ್ಯಪ್ರದೇಶ ತಂಡದ ಆಟಗಾರರಾದ ಇವರು  ವಿಜಯ್ ಹಜಾರೆ ಟ್ರೋಫಿಯ 6 ಪಂದ್ಯಗಳಲ್ಲಿ 2 ಶತಕ ಹಾಗೂ 1 ಅರ್ಧ ಶತಕದೊಂದಿಗೆ 379 ರನ್ ಜೊತೆಗೆ 9 ವಿಕೆಟ್ ಪಡೆದಿದ್ದಾರೆ.

ಇವರೊಂದಿಗೆ ಅಕ್ಷರ್ ಪಟೇಲ್ ಹಾಗೂ ಶಾರ್ದುಲ್ ಠಾಕೂರ್ ಅವರು ತಂಡದಲ್ಲಿ ಆಲ್-ರೌಂಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಬೌಲರಗಳು

ತಂಡದ ಬೌಲಿಂಗ್ ವಿಭಾಗವನ್ನು ಜಸ್ಪ್ರೀತ್ ಬುಮ್ರಾ ಅವರು ಭುವನೇಶ್ವರ್ ಕುಮಾರ್ ಅವರೊಂದಿಗೆ ಮುನ್ನಡೆಸಲಿದ್ದಾರೆ, ಜೊತೆಗೆ ಹರ್ಷಲ್ ಪಟೇಲ್ ಮತ್ತು ದೀಪಕ್ ಚಹರ್ ವೇಗದ ಬೌಲರಗಳಾಗಿದ್ದರೆ, ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಲ್ ಅವರು ಸ್ಪಿನ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಸಂಭವವಿದೆ.

ಸೌತ್ ಆಫ್ರಿಕಾ ಏಕದಿನ ಸರಣಿಗೆ ಸಂಭಾವ್ಯ 15 ಆಟಗಾರರ ತಂಡ :

ರೋಹಿತ್ ಶರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್, ಶಿಖರ ಧವನ್, ಕೆ ಎಲ್ ರಾಹುಲ್( ಉಪನಾಯಕ ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ಶಾರ್ದುಲ್ ಠಾಕೂರ್, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ದೀಪಕ್ ಚಹರ್, ಹರ್ಷಲ್ ಪಟೇಲ್, ರವಿಚಂದ್ರನ್ ಆಶ್ವಿನ್, ಯುಜ್ವೇಂದ್ರ ಚಹಲ್, ಮೊಹಮ್ಮದ್ ಶಮಿ.



ಕಾಮೆಂಟ್‌ಗಳು